ಹರಿಹರ: ನಗರದ ಹೊರವಲಯದಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಸಾಲು ಮರಗಳಲ್ಲಿ 10 ಮರಗಳು ಸುಟ್ಟು ಭಸ್ಮವಾಗಿವೆ.

ನಗರದಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಮೇಲ್ಸೇತುವೆ ಬಳಿಯ ಜೋಡಿ ರಸ್ತೆ (ಹಳೆ ಪಿ.ಬಿ.ರಸ್ತೆ) ಬಲಭಾಗದ ಸಾಲು ಮರಗಳು ಬೆಂಕಿಗೆ ಆಹುತಿಯಾಗಿದೆ. ಏ. 20ರಂದು ಈ ಘಟನೆ ನಡೆದಿದೆ.

10 ವರ್ಷಗಳ ಹಿಂದೆ 2 ಕಿ.ಮೀ. ಉದ್ದದ ಈ ಜೋಡಿ ರಸ್ತೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ 1000ಕ್ಕೂ ಹೆಚ್ಚು ಬೇವು, ಹೊಂಗೆ ಸೇರಿದಂತೆ ಹಲವು ಜಾತಿಯ ಸಸಿಗಳನ್ನು ನೆಟ್ಟು ಪೋಷಿಸಲಾಗಿತ್ತು. ಆ ಸಸಿಗಳು ಈಗ ನೆರಳು, ಗಾಳಿ ನೀಡುವ ಮರಗಳಾಗಿ ಬೆಳೆದು ನಿಂತಿವೆ. ಅವುಗಳ ಪೈಕಿ 10 ಮರಗಳು ಬೆಂಕಿಗೆ ಆಹುತಿಯಾಗಿವೆ.

ಹರಿಹರ– ದಾವಣಗೆರೆ ಮಧ್ಯೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ತಂಪಾದ ನೆರಳು, ಗಾಳಿಯನ್ನು ನೀಡುತ್ತಿದ್ದ ಮರಗಳು ಸುಟ್ಟುಹೋಗಿವೆ. ಸಮೀಪವೇ ಕೆಲವು ಲೇಔಟ್ಗಳನ್ನು ಮಾಡಲಾಗುತ್ತಿದ್ದು, ಕೃಷಿ ಜಮೀನುಗಳೂ ಇವೆ. ಈ ಮರಗಳಿದ್ದ ಜಾಗದಲ್ಲೇ ಜಾಲಿಗಿಡಗಳ ದಟ್ಟವಾದ ಪೊದೆ ಇತ್ತು. ಆ ಜಾಲಿ ಪೊದೆಯನ್ನು ನಿವಾರಿಸಲು ಹಚ್ಚಿದ ಬೆಂಕಿ 10 ಮರಗಳಿಗೆ ಮಾರಕವಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.

ನಿತ್ಯ ಅಂದಾಜು 1000 ಸಾರಿಗೆ ಸಂಸ್ಥೆಯ ಬಸ್ಸುಗಳು, 2000 ಕಾರು, 250 ಲಾರಿ, 3000 ಲಘು ವಾಹನಗಳು ಸೇರಿ 15,000ಕ್ಕೂ ಹೆಚ್ಚು ಪ್ರಯಾಣಿಕರು ಈ ರಸ್ತೆಯಲ್ಲಿ ಸಂಚರಿಸುತ್ತವೆ.

‘ಇಲ್ಲಿನ ಸಾಲು ಮರಗಳನ್ನು ರಕ್ಷಿಸಲು ತಾಲ್ಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಮರಗಳ ಸುತ್ತಲೂ ಬೆಳೆದಿರುವ ಜಾಲಿಗಿಡ ಹಾಗೂ ಇತರೆ ನಿರುಪಯುಕ್ತ ಜಂಗಲ್ ತೆರವುಗೊಳಿಸಲು ಲೋಕೋಪಯೋಗಿ ಇಲಾಖೆ ಮುಂದಾಗಬೇಕು’ ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.

ಅವಧಿ ಮುಗಿದ ಔಷಧಿ, ಗ್ಯಾರೇಜ್, ಗುಜರಿ, ಎಳನೀರು ತ್ಯಾಜ್ಯ, ಸತ್ತ ಪ್ರಾಣಿಗಳು ಸೇರಿದಂತೆ ಬೇಡವಾದದ್ದನ್ನು ತಂದು ಸುರಿಯುವ ಡಂಪ್ ಯಾರ್ಡ್ ಆಗಿದೆ. ಇದರಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ರಸ್ತೆ ಬದಿ ಬೆಳೆದಿರುವ ಜಂಗಲ್ ತೆರವುಗೊಳಿಸುತ್ತಿಲ್ಲ. ನಗರದ ಹೆಮ್ಮೆಯಾಗಿರುವ ಈ ರಸ್ತೆಯ ಸೌಂದರ್ಯ ರಕ್ಷಿಸಲು ತಾಲ್ಲೂಕು ಆಡಳಿತ ಗಮನ ಹರಿಸಬೇಕು ಎಂದು ಪರಿಸರ ಸಂರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಸಂಚಾಲಕ ಬಿ. ಮಗ್ದುಮ್ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-43-404594884

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.