ಹರಿಹರ: ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಿವಾದಕ್ಕೆ ಸಂಬಂಧಿಸಿದಂತೆ ಮಠದ ಆವರಣದಲ್ಲಿ ಶಾಂತಿ ಭಂಗ ಉಂಟಾಗುವ ಮುನ್ಸೂಚನೆಯಿದೆ ಎಂದು ಪೊಲೀಸರು ಉಭಯ ಬಣಗಳ ವಿರುದ್ಧ ದಾಖಲಿಸಿದ್ದ ಪ್ರಕರದ ಅನ್ವಯ ಉಭಯ ಬಣಗಳ ತಲಾ 10 ಜನರು ಬುಧವಾರ ಇಲ್ಲಿನ ತಾಲ್ಲೂಕು ಕಚೇರಿಯ ಕಾರ್ಯನಿರ್ವಾಹಕ ದಂಡಾಧಿಕಾರಿ (ತಹಶೀಲ್ದಾರ್) ಯವರ ನ್ಯಾಯಾಲಯಕ್ಕೆ ಹಾಜರಾದರು.

ಶಾಂತಿ ಭಂಗವಾಗುವ ಭೀತಿಯ ಬಗ್ಗೆ ಮನವರಿಕೆಯಾಗಿದ್ದರಿಂದ ಗರಿಷ್ಠ ಒಂದು ವರ್ಷದ ಅವಧಿಗೆ ಶಾಂತಿ ಪಾಲನೆಯ ಬಾಂಡ್ ಅನ್ನು ಶ್ಯೂರಿಟಿ ಸಮೇತ ಕೊಡಬೇಕಾಗುತ್ತದೆ ಎಂದು ದಂಡಾಧಿಕಾರಿ ಜಿ.ಸಂತೋಷ್ ಕುಮಾರ್ ಸೂಚನೆಯಂತೆ ಎರಡೂ ಗುಂಪಿನವರು ಬಾಂಡ್ ಸಲ್ಲಿಸಿದರು.

ಗ್ರಾಮಾಂತರ ಠಾಣೆ ಪಿಎಸ್ಐ ಮಂಜುಳಾ ಅವರ ದೂರು ಆಧರಿಸಿ ಪಿಎಆರ್ (ಪ್ರಿವೆಂಟಿವ್ ಆಕ್ಷನ್ ರಿಪೋರ್ಟ್) ಸಲ್ಲಿಸಿದ್ದರಿಂದ ಈ ಪ್ರಕ್ರಿಯೆ ನಡೆಸಲಾಗಿದೆ.

ಸ್ವಾಮೀಜಿ ಬಣದ ಮುಖಂಡರಾದ ಹರಿಹರದ ಮನೋಹರ, ಶಂಕ್ರಪ್ಪ, ದಾವಣಗೆರೆಯ ಆನಂದ, ತಾಪಂ ಮಾಜಿ ಸದಸ್ಯ ಹೊಳೆಸಿರಿಗೆರೆಯ ಕೊಟ್ರೇಶಗೌಡ, ಮಲೆಬೆನ್ನೂರಿನ ಕರಿಬಸಪ್ಪ, ಬನ್ನಿಕೋಡಿನ ನಟರಾಜ, ಅಜಯ್ ಪಾಟೀಲ್, ಮಹೇಶ್, ಕೆ.ಬೇವಿನಹಳ್ಳಿ ಸುರೇಶ, ಭಾನುವಳ್ಳಿಯ ನವೀನ್.

ಟ್ರಸ್ಟ್ ಪರ ಬಣದ ದೀಟೂರಿನ ನಿರಂಜನ, ಹರೀಶ, ದಾವಣಗೆರೆಯ ಶಿವಣ್ಣ ಬಂಕಾಪುರ, ಹರಿಹರದ ಚಂದ್ರು ಪಾಟೀಲ್, ರಾಜು ದೊಡ್ಡಮನಿ, ಗುತ್ತೂರು ಕರಿಬಸಪ್ಪ, ಹೊನ್ನಾಳಿಯ ಎಚ್.ಡಿ. ಪ್ರಶಾಂತ, ಪಲ್ಲವಿರಾಜ್ ಹಾಲೇಶಪ್ಪ, ಬಾತಿ ರವಿ ಹಾಜರಾಗಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-43-384313231

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.