ಹರಿಹರ: ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಪದಚ್ಯುತ ಪೀಠಾಧಿಪತಿ ವಚನಾನಂದ ಶ್ರೀ ನೇತೃತ್ವದಲ್ಲಿ ಇದೇ 24ರಂದು ಆಯೋಜಿಸಿರುವ ಬಸವ ಜಯಂತಿ ಮತ್ತು ರಾಜ್ಯ ಸಮಾವೇಶಕ್ಕೆ ಗುರುಪೀಠದ ಟ್ರಸ್ಟ್ ತೀವ್ರ ವಿರೋಧ ವ್ಯಕ್ತಪಡಿಸಿದೆ.

‘ಈ ಕಾರ್ಯಕ್ರಮದ ಕಾರಣ ಮಠದ ಆವರಣದಲ್ಲಿ ಕಾನೂನು ಸುವ್ಯವಸ್ಥೆ ಏನಾದರೂ ಹದಗೆಟ್ಟರೆ ಅದಕ್ಕೆ ವಚನಾನಂದ ಶ್ರೀ ಗುಂಪಿನವರೇ ಹೊಣೆ’ ಎಂದು ಟ್ರಸ್ಟ್ನವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಈ ಕುರಿತು ಟ್ರಸ್ಟ್ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಮತ್ತು ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಅವರು ವಚನಾನಂದ ಶ್ರೀಗಳಿಗೂ ಸಹ ಪತ್ರ ಬರೆದಿದ್ದು, ಅದರ ಪ್ರತಿ ಮಾಧ್ಯಮಗಳಿಗೆ ಲಭ್ಯವಾಗಿದೆ.

ಪತ್ರದಲ್ಲಿನ ಅಂಶಗಳು: ‘ಏ. 13ರಂದು ನಡೆದ ಟ್ರಸ್ಟ್ ಸಭೆಯಲ್ಲಿ ನಿಮ್ಮನ್ನು ಪೀಠಾಧಿಪತಿ ಸ್ಥಾನದಿಂದ ಅಧಿಕೃತವಾಗಿ ಪದಚ್ಯುತಗೊಳಿಸಿದ್ದರೂ ಏ. 24ರಂದು ಪೀಠದಲ್ಲಿ ಬಸವ ಜಯಂತಿ ಮತ್ತು ಬೃಹತ್ ರಾಜ್ಯ ಸಮಾವೇಶ ಆಯೋಜಿಸುತ್ತಿರುವುದು ಗೊತ್ತಾಗಿದೆ. ಉಚ್ಚಾಟನೆಗೊಂಡಿರುವ ನಿಮಗೆ ಮಠದಲ್ಲಿ ಇಂತಹ ಕಾರ್ಯಕ್ರಮ ನಡೆಸಲು ಯಾವುದೇ ನೈತಿಕ ಹಕ್ಕಿಲ್ಲ’ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

‘ಮಠವನ್ನು ಗೌರವಪೂರ್ವಕವಾಗಿ ತ್ಯಜಿಸಲು ಸೂಚಿಸಿದ್ದರೂ ನೀವು ಮಠದಲ್ಲೇ ಉಳಿದು ಟ್ರಸ್ಟಿಗಳ ವಿರುದ್ಧ ಅವಾಚ್ಯವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಲಾಗಿದೆ. ಇನ್ನು ಮುಂದೆ ಪೀಠದ ಹೆಸರಿನಲ್ಲಿ ಯಾವುದೇ ಸಭೆ, ಸಮಾರಂಭ ಅಥವಾ ಸುದ್ದಿಗೋಷ್ಠಿ ನಡೆಸಬಾರದು. ಇದನ್ನು ಮೀರಿ ಕಾರ್ಯಕ್ರಮ ನಡೆಸಲು ಮುಂದಾದರೆ ಕಾನೂನು ಸುವ್ಯವಸ್ಥೆಯ ಅಡಚಣೆಗಳಿಗೆ ನೀವು ಹಾಗೂ ಅಮಾನತ್ತಿನಲ್ಲಿರುವ ಆಡಳಿತಾಧಿಕಾರಿ ಡಾ.ರಾಜಕುಮಾರ್ ಮತ್ತು ಪರಮೇಶ್ಗೌಡ ನೇರ ಹೊಣೆ ಎಂದು ತಿಳಿಸಲಾಗಿದೆ.

ಮಠದಲ್ಲಿ ಬಸವ ಜಯಂತಿ ಆಚರಿಸಲು ಈಗಾಗಲೇ ಟ್ರಸ್ಟ್ ದಿನಾಂಕ ಗೊತ್ತು ಮಾಡಿಕೊಂಡಿದ್ದು, ನಿಗದಿತ ದಿನ ಸಮಾಜ ಬಾಂಧವರು ಸೇರಿ ಕಾರ್ಯಕ್ರಮ ನಡೆಸುತ್ತಾರೆ ಎಂದು ಈ ಪತ್ರದ ಮೂಲಕ ಟ್ರಸ್ಟ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ರಾಜ್ಯ ಅಧ್ಯಕ್ಷ ಗೈರು: ಈ ಮಧ್ಯೆ ವಚನಾನಂದ ಶ್ರೀಗಳ ಬೆಂಬಲಿಗರು ಆಯೋಜಿಸಿರುವ ಕಾರ್ಯಕ್ರಮವನ್ನು ಉದ್ಘಾಟಿಸಬೇಕಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ್ ಅವರು ತಾವು ಈ ಸಮಾವೇಶಕ್ಕೆ ಹಾಜರಾಗುತ್ತಿಲ್ಲ ಎಂದು ಪ್ರಕಟಿಸಿದ್ದಾರೆ.

ಸದರಿ ಕಾರ್ಯಕ್ರಮದ ಉದ್ಘಾಟನೆಗೆ ನನ್ನ ಹೆಸರು ಹಾಕಿದ್ದು, ನಾನು ಭಾಗವಹಿಸುವುದಿಲ್ಲ. ನಾನು ಜಿಲ್ಲಾ ಪ್ರವಾಸದ ಅಂತಿಮ ಹಂತದಲ್ಲಿ ಮೇ 18ರಂದು ಕೊಪ್ಪಳ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದು, ಅಂದು ಸಂಘದ ಅಧಿಕೃತ ನಿಲುವನ್ನು ಪ್ರಕಟಿಸುವೆ’ ಎಂದು ತಿಳಿಸಿದ್ದಾರೆ.

ಪೀಠದಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷದ ನಡುವೆ ರಾಜ್ಯ ಸಂಘ ಕೈಗೊಳ್ಳುವ ನಿಲುವಿನ ಬಗ್ಗೆ ಕುತೂಹಲ ಮೂಡಿದೆ. ಇದರ ಬೆನ್ನಲ್ಲೇ ದಾವಣಗೆರೆ ವಿರಕ್ತಮಠ ಶಿವಯೋಗಾಶ್ರಮದ ಬಸವಪ್ರಭು ಶ್ರೀ ಸಹ ಕಾರ್ಯಕ್ರಮದಿಂದ ದೂರ ಉಳಿಯಲಿದ್ದಾರೆ ಎಂದು ತಿಳಿದುಬಂದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-44-1567046651

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.