ಹರಿಹರ: ‘ನಗರದ ರಾಜಕಾಲುವೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡಿರುವ ₹ 4.82 ಕೋಟಿ ವೆಚ್ಚದ ಕಾಂಕ್ರೀಟ್ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿಯನ್ನು ಭೂಮಾಪನಾ ಕಾರ್ಯ ಪೂರ್ಣಗೊಳ್ಳುವವರೆಗೆ ಸ್ಥಗಿತಗೊಳಿಸಬೇಕು’ ಎಂದು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಆದೇಶಿಸಿದರು.

ರಾಜಕಾಲುವೆಯಲ್ಲಿ ಕೈಗೊಂಡಿರುವ ಅವೈಜ್ಞಾನಿಕ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ನಗರದಲ್ಲಿ ಸೋಮವಾರ ರಾಜಕಾಲುವೆ ರಕ್ಷಣಾ ಸಮಿತಿಯಿಂದ ಆಯೋಜಿಸಿದ್ದ ‘ನಮ್ಮ ನಡೆ ರಾಜಕಾಲುವೆ ಕಡೆ’ ಪ್ರತಿಭಟನೆಯ ನಂತರ ಮನವಿ ಸ್ವೀಕರಿಸಿ ಮಾತನಾಡಿದರು.

‘ಭೂ ಮಾಪನಾ ಇಲಾಖೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಸೋಮವಾರದಿಂದ ದೇವರಬೆಳೆಕೆರೆ ಕಾಲುವೆಯ ಭಾಗದಿಂದ ಭೂ ಮಾಪನಾ ಕಾರ್ಯ ಆರಂಭಿಸಿದ್ದಾರೆ. 7– 8 ದಿನಗಳಲ್ಲಿ ವಾಸ್ತವ ಸ್ಥಿತಿ ತಿಳಿಯಲಿದೆ. ನಂತರ ಸಭೆ ನಡೆಸಿ ನಿರ್ಣಯಿಸಲಾಗುವುದು’ ಎಂದು ಹೇಳಿದರು.

‘ಎಸ್.ಜೆ.ವಿ.ಪಿ. ಕಾಲೇಜಿನ ಹಿಂಭಾಗದ ಕಾಮಗಾರಿಯಲ್ಲಿ 80 ರಿಂದ 100 ಅಡಿ ಅಗಲದ ಕಾಲುವೆಯನ್ನು 15 ಅಡಿಗೆ ಸೀಮಿತಗೊಳಿಸುತ್ತಿರುವುದು ಅವೈಜ್ಞಾನಿಕ. ಇದು ಭೂಗಳ್ಳರು ಕೋಟ್ಯಂತರ ಮೌಲ್ಯದ ಹಲವು ಎಕರೆ ಜಮೀನು ಆಕ್ರಮಿಸಿಕೊಳ್ಳಲು ಅನುವು ಮಾಡಿಕೊಡುವಂತಿದೆ’ ಎಂದು ಸಮಿತಿಯ ಪದಾಧಿಕಾರಿಗಳು ಆರೋಪಿಸಿದರು.

‘ಜಮೀನು ಲಭ್ಯವಿಲ್ಲವೆಂದು ನಗರದಲ್ಲಿನ ಬಡವರಿಗೆ 25 ವರ್ಷಗಳಿಂದ ಒಂದು ನಿವೇಶನವನ್ನೂ ಹಂಚಿಕೆ ಮಾಡಿಲ್ಲ. ಹೀಗಿರುವಾಗ ಈ ಕಾಲುವೆ ವ್ಯಾಪ್ತಿಯ ಹಲವು ಎಕರೆ ಜಮೀನನ್ನು ತಾಲ್ಲೂಕು ಹಾಗೂ ಜಿಲ್ಲಾಡಳಿತ ಬಲಾಢ್ಯರ ಪಾಲಾಗುವಂತೆ ಮಾಡುತ್ತಿರುವುದು ಸರಿಯೇ’ ಎಂದು ಪ್ರಶ್ನಿಸಿದರು.

‘ಒತ್ತುವರಿಯಿಂದಾಗಿ ಕಾಳಿದಾಸ ನಗರ, ನೀಲಕಂಠನಗರ, ಬೆಂಕಿನಗರ ಹಾಗೂ ಇತರೆ ಜನವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಪ್ರವಾಹದ ಸ್ಥಿತಿ ಎದುರಾಗುತ್ತಿದೆ. ಈಗ ನಡೆಸುತ್ತಿರುವ ಕಾಮಗಾರಿಯಿಂದ ನಗರದ ಇನ್ನಷ್ಟು ಬಡಾವಣೆಗಳಿಗೆ ಪ್ರವಾಹ ಭೀತಿ ಎದುರಾಗಲಿದೆ’ ಎಂದರು.

‘ಈ ಕಾಲುವೆಯ ಏರಿ ಮೇಲೆ ಬಂಜಾರ ಸಮುದಾಯದ ರುದ್ರಭೂಮಿ ಇತ್ತು. ಅದನ್ನೂ ಒತ್ತುವರಿ ಮಾಡಲಾಗಿದೆ. ಅಳತೆ ಮಾಡಿಸಿ ಬಂಜಾರ ಸಮುದಾಯದ ರುದ್ರಭೂಮಿಯನ್ನು ಜೀರ್ಣೋದ್ಧಾರ ಮಾಡಬೇಕು’ ಎಂದು ಆಗ್ರಹಿಸಿದರು.

‘ನಗರದ ಜನರ ಈ ಆಶೋತ್ತರಕ್ಕೆ ವಿರುದ್ಧವಾಗಿ ಕಾಮಗಾರಿ ಮುಂದುವರಿಸಿದಲ್ಲಿ ವಿವಿಧ ಸಂಘ– ಸಂಸ್ಥೆಗಳ ಸಹಕಾರದೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ರಾಜಕಾಲುವೆ ರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಬಿ.ಮಗ್ದುಂ, ಅಧ್ಯಕ್ಷ ಪಿ.ಜೆ.ಮಹಾಂತೇಶ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಿ, ಇಮ್ತಿಯಾಜ್ ಜಲಾಲ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಬಾಬುಲಾಲ್, ಖಜಾಂಚಿ ಜಫ್ರುಲ್ಲಾ, ಕಾನೂನು ಸಲಹೆಗಾರ ಶಶಿನಾಯ್ಕ, ಮುಖಂಡರಾದ ಎಲ್.ನಿರಂಜನಮೂರ್ತಿ, ಮಂಜಮ್ಮ, ಶ್ರೀನಿವಾಸ್ ಕೊಡ್ಲಿ, ಇಲಿಯಾಸ್, ಚೌಡಪ್ಪ ಸಿ.ಭಾನುವಳ್ಳಿ, ರಾಜಪ್ಪ, ಸುರೇಶ್ ಡಿ.ಕೆಂಚನಹಳ್ಳಿ, ತಿಮ್ಮಣ್ಣ ಕಡ್ಲೆಗೊಂದಿ, ಸಂಜೀವಪ್ಪ, ಮಂಜಪ್ಪ ಗುಡ್ಡದಹಳ್ಳಿ, ಹನುಮಂತ, ಗದಿಗೆಪ್ಪ ಬಿ, ಹನುಮಂತಪ್ಪ ವಾಸನ, ರಾಮಪ್ಪ ಹಿಂಡಸಘಟ್ಟ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-43-1923543515

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.