ಹರಿಹರ: ‘ಔಷಧಗಳ ಆನ್ಲೈನ್ ವಹಿವಾಟು ವಿರೋಧಿಸಿ ನಗರದಲ್ಲಿ ಬುಧವಾರ ಔಷಧ ವ್ಯಾಪಾರಿಗಳ ಸಂಘದ ಸದಸ್ಯರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಿದರು. ನಂತರ ತಾಲ್ಲೂಕು ಕಚೇರಿ ಶಿರಸ್ತೇದಾರ್ ಸೌಮ್ಯಾ ಅವರಿಗೆ ಮನವಿ ಸಲ್ಲಿಸಿದರು.

‘ಕೇಂದ್ರ ಸರ್ಕಾರವು ಇ– ಫಾರ್ಮಸಿಗೆ ಅನುಮತಿ ನೀಡಿರುವುದರಿಂದ ಯುವ ಜನಾಂಗದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶಾಂತಿಯುತವಾಗಿ ಹೋರಾಟ ಮಾಡಲಾಗುತ್ತಿದೆ’ ಎಂದು ಸಂಘದ ಪದಾಧಿಕಾರಿಗಳು ಹೇಳಿದರು.

‘ಯಾರು ಬೇಕಾದರೂ, ಯಾವ ಔಷಧವನ್ನು ಬೇಕಾದರೂ ಆನ್ಲೈನ್ನಲ್ಲಿ ತರಿಸಿಕೊಳ್ಳುವಂತಾಗಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಲವು ವರ್ಷಗಳಿಂದ ದುಬಾರಿ ಬಾಡಿಗೆ ಪಾವತಿಸುತ್ತಾ ವ್ಯಾಪಾರ ಮಾಡುತ್ತಿರುವ ಅಸಂಖ್ಯಾತ ವ್ಯಾಪಾರಿಗಳ ಬದುಕು ದುಸ್ತರವಾಗುತ್ತಿದೆ. ಇ–ಫಾರ್ಮಸಿಗೆ ಕೊಟ್ಟಿರುವ ಅನುಮತಿಯನ್ನು ಹಿಂಪಡೆ ಯಬೇಕು’ ಎಂದು ಆಗ್ರಹಿಸಿದರು.

ಈ ವೇಳೆ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಪ್ರಕಾಶ್, ಕಾರ್ಯದರ್ಶಿ ಡಿ.ಸಿ.ವಾಗೀಶ್, ಉಪಾಧ್ಯಕ್ಷ ಎ.ಕೊಟ್ರೇಶ್, ಎಸ್.ಎ.ಬಿಸ್ಮಿಲ್ಲಾಖಾನ್, ಖಜಾಂಚಿ ಚನ್ನಬಸವನಗೌಡ, ಬೊಂಗಾಳೆ ಕಾಳಪ್ಪ, ಪಿ.ನಟರಾಜ್, ಕೆ.ಎಸ್.ಸುಧೀರ್, ಶಂಕರ್, ಆರ್.ಸಿ.ನಾಗರಾಜ್, ಮಧುಸೂದನ್, ವಿನಯ್, ಶಿವಕುಮಾರ್, ಪ್ರವೀಣ್, ಪ್ರದೀಪ್, ನವೀನ್, ಹರೀಶ್, ಮಲ್ಲಿಕಾರ್ಜುನ್ ಕಲಾಲ್ ಹಾಗೂ ಸದಸ್ಯರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-43-1884837199

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.