ಹರಿಹರ: ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ 18 ವರ್ಷಗಳ ಪಾರದರ್ಶಕ ಲೆಕ್ಕ ನೀಡುವಂತೆ ಪೀಠದ ಲೆಕ್ಕಕೊಡಿ ಸಮಿತಿಯು ಟ್ರಸ್ಟ್ಗೆ ಆಗ್ರಹಿಸಿದೆ.

ಈ ಕುರಿತು ಸಮಿತಿಯ ಅಧ್ಯಕ್ಷ ಎಂ.ಜಿ. ಪರಮೇಶ್ವರಗೌಡ ಹೊಳೆಸಿರಿಗೆರೆ ಅವರು ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಬಿ.ಜಿ.ಅಜಯ್ ಕುಮಾರ್, ಸಿದ್ದಣ್ಣ ಚಿಕ್ಕಬಿದರಿ ಹಾಗೂ ಮಾಲತೇಶ್ ರಟ್ಟಿಹಳ್ಳಿ ಅವರೊಂದಿಗೆ ಜಂಟಿ ಪತ್ರಿಕಾ ಪ್ರಕಟಣೆಯ ಮೂಲಕ ಟ್ರಸ್ಟ್ನ ನಡೆಗಳನ್ನು ಖಂಡಿಸಿದ್ದಾರೆ.

‘2008ರಲ್ಲಿ ಟ್ರಸ್ಟ್ ಆರಂಭವಾದಾಗಿನಿಂದ ಇಲ್ಲಿಯವರೆಗೆ ಭಕ್ತರು ನೀಡಿದ ಕೋಟ್ಯಂತರ ನಗದು, ಚಿನ್ನಾಭರಣ ಹಾಗೂ ಸರ್ಕಾರದ ಅನುದಾನದ ಬಳಕೆ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಟ್ರಸ್ಟಿಗಳು ಅವಸರದಲ್ಲಿ ಲೆಕ್ಕ ನೀಡಿ ಕೈತೊಳೆದುಕೊಳ್ಳಲು ಮುಂದಾಗಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಮಠದ ಆಸ್ತಿ–ಪಾಸ್ತಿ ಮತ್ತು ಬ್ಯಾಂಕ್ ಲಾಕರ್ಗಳ ಸಂಪೂರ್ಣ ವಿವರವನ್ನು ಸಾರ್ವಜನಿಕ ಸಭೆಯಲ್ಲಿ ಮಂಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಲೆಕ್ಕ ಕೇಳಿದ್ದನ್ನೇ ನೆಪವಾಗಿಸಿಕೊಂಡು, ಸತ್ಯವನ್ನು ಮುಚ್ಚಿಹಾಕಲು ಯಾವುದೇ ಗಂಭೀರ ಕಾರಣವಿಲ್ಲದಿದ್ದರೂ ಪೀಠದ ವಚಾನಾನಂದ ಶ್ರೀಗಳನ್ನು ಮಠದಿಂದ ಉಚ್ಚಾಟಿಸಿರುವುದು ವಿಷಾದನೀಯ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಟ್ರಸ್ಟಿಗಳು ಪ್ರಾಮಾಣಿಕವಾಗಿದ್ದಲ್ಲಿ ಲಿಂಗೈಕ್ಯ ಮಹಾಂತ ಸ್ವಾಮಿಗಳ ಗದ್ದುಗೆ ಸನ್ನಿಧಿಯಲ್ಲಿ ‘ಹಣ ದುರ್ಬಳಕೆ ಮಾಡಿಕೊಂಡಿಲ್ಲ’ ಎಂದು ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.

‘ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರ ಬಗ್ಗೆ ನಮಗೆ ಗೌರವವಿದೆ. ಆದರೆ, ಅವರ ಹಿಂಬಾಲಕರು ಮತ್ತು ಕೆಲವು ಟ್ರಸ್ಟಿಗಳ ನಡೆ ‘ಮಂಗ ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತಾಗಿದೆ’. ತಕ್ಷಣವೇ ಗೊಂದಲಗಳಿಗೆ ಇತಿಶ್ರೀ ಹಾಡದಿದ್ದರೆ ಸಮಾಜ ಶಪಿಸುತ್ತದೆ’ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-43-971020267

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.