ಹರಿಹರ: ‘ಪೀಠಾಧಿಪತಿಯಾಗಿ 8 ವರ್ಷಗಳಲ್ಲಿ ಸಾಕಷ್ಟು ಅನುಭವಗಳಾಗಿವೆ, ನೋವು–ನಲಿವುಗಳ ಮಧ್ಯೆಯೂ ನನ್ನ ಸೇವೆ ನನಗೆ ತೃಪ್ತಿ ನೀಡಿದೆ’ ಎಂದು ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಪದಚ್ಯುತ ಪೀಠಾಧಿಪತಿ ವಚನಾನಂದ ಶ್ರೀ ಹೇಳಿದರು.

ಗುರುಪೀಠದಲ್ಲಿ ಸೋಮವಾರ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮತನಾಡಿದರು.

‘ಹಾಳು ಕೊಂಪೆಯಂತಿದ್ದ ಮಠವನ್ನು ಸ್ವಚ್ಛ ಮಾಡಿ, ಅಭಿವೃದ್ಧಿಪಡಿಸಲಾಗಿದೆ. ಆವರಣದಲ್ಲಿ ನೂರಾರು ಮಾವಿನ ಮರಗಳನ್ನು ಬೆಳೆಸಿ, ಲ್ಯಾನ್ ಮಾಡಲಾಗಿದೆ. ಈ ಮಾವಿನ ಹಣ್ಣುಗಳು ಮಠಕ್ಕೆ ಬರುವ ಭಕ್ತರಿಗೆ ಮೀಸಲಿಡಲಾಗಿದೆಯೇ ಹೊರತು ಸ್ವಂತಕ್ಕೆ ಬಳಸುತ್ತಿಲ್ಲ’ ಎಂದರು.

ಲಿಂ. ಸಿದ್ಧೇಶ್ವರ ಶ್ರೀಗಳ ಅಣತಿಯಂತೆ ಪೀಠದಲ್ಲಿ ಪ್ರತಿವರ್ಷ ಹರಜಾತ್ರೆ ನಡೆಸಲಾಗುತ್ತಿದೆ. ಊರೂರು ಸುತ್ತಿ ದೇಣಿಗೆ ಸಂಗ್ರಹಿಸಿ ನಡೆಸಲಾದ ಹರಜಾತ್ರೆಯು ಇಂದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ ಎಂದು ತಿಳಿಸಿದರು.

ಒಬಿಸಿ ಮತ್ತು 2ಎ ಮೀಸಲಾತಿ ಹೋರಾಟ ಆಗಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಮಾತನಾಡಲಾಗಿದೆ. ಎಲ್ಲಾ ಲಿಂಗಾಯತ ಒಳಜಾತಿಗಳಿಗೂ ಕೇಂದ್ರದ ಮೀಸಲಾತಿ ಸಿಗುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು.

ಭಕ್ತರೇ ನನ್ನ ತಂದೆ–ತಾಯಿ, ತಮ್ಮ ಮಗನನ್ನು ಹೇಗೆ ಜೋಪಾನ ಮಾಡಬೇಕು ಎಂಬುದು ಭಕ್ತರಿಗೇ ಬಿಟ್ಟಿದ್ದು. ತಮ್ಮ ವಿರುದ್ಧ ನೀಡಿರುವ ಪೊಲೀಸ್ ದೂರು, ಕೋರ್ಟ್ ಕೇಸ್ಗಳ ವಿಚಾರವನ್ನು ಭಕ್ತರ ಉಡಿಗೆ ಹಾಕಿದ್ದೇನೆ ಎಂದರು.

ಮಾಜಿ ಶಾಸಕ ಅರುಣ್ಕುಮಾರ್ ಪೂಜಾರ್, ಟ್ರಸ್ಟಿ ಹೊನ್ನಾಳಿ ಬಾಬಣ್ಣ, ಪರಮೇಶ್ವರಗೌಡ, ದಾವಣಗೆರೆ ಪಾಲಿಕೆ ಮಾಜಿ ಅಧ್ಯಕ್ಷ ಅಜಯ್ ಕುಮಾರ್, ತಾ.ಪಂ. ಮಾಜಿ ಸದಸ್ಯ ಕೊಟ್ರೇಶ್ ಕೆ.ಜಿ., ಹಾವೇರಿಯ ವೀರಾಪುರ್, ಡಿಬಿ ಕೆರೆ ಕರಿಬಸಪ್ಪ, ಈಶ್ವರಪ್ಪ, ಮುದ್ದೇರ ಹನುಮಂತಪ್ಪ, ನಂದಿಗುಡಿ ಕುಬೇರಪ್ಪ, ಮೇಗಳಗೇರಿ ಮಂಜಪ್ಪ,ಚನ್ನಗಿರಿ ಬಸವರಾಜ ಸೇರಿ ಹಲವರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-43-541794623

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.