ಹರಿಹರ: ಬ್ಯಾಂಕ್‍ ಕಿಟಕಿ ಮುರಿದು ₹6.62 ಲಕ್ಷ ಕಳ್ಳತನ

7

ಹರಿಹರ: ಬ್ಯಾಂಕ್‍ ಕಿಟಕಿ ಮುರಿದು ₹6.62 ಲಕ್ಷ ಕಳ್ಳತನ

Published:
Updated:

ಹರಿಹರ: ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನ ಕಿಟಕಿ ಮುರಿದು ಮಂಗಳವಾರ ರಾತ್ರಿ ₹6.62 ಲಕ್ಷ ಕಳ್ಳತನ ಮಾಡಲಾಗಿದೆ.

ಗ್ರಾಮದ ಹೊವಲಯದಲ್ಲಿರುವ ಬ್ಯಾಂಕ್‍ನ ಪಕ್ಕದ ಗೋಡೆಯ ಕಿಟಕಿ ಸರಳುಗಳನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ಒಳ ನುಗ್ಗಿದ ಕಳ್ಳರು ಬ್ಯಾಂಕ್‍ನಲ್ಲಿದ್ದ ನಗದು ಹಾಗೂ ಸಿ.ಸಿ. ಕ್ಯಾಮೆರಾದ ದೃಶ್ಯ ಸಂಗ್ರಹಗಾರ(ಡಿವಿಆರ್) ಅನ್ನು ಕಳ್ಳತನ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಎಎಸ್‍ಪಿ ಉದ್ದೇಶ್, ಡಿವೈಎಸ್‍ಪಿ ಮಂಜುನಾಥ್ ಕೆ.ಗಂಗಲ್, ಸಿಪಿಐ ಗುರುನಾಥ್, ಗ್ರಾಮಾಂತರ ಠಾಣೆ ಪಿಎಸ್‍ಐ ಡಿ. ರವಿಕುಮಾರ್, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !