ಹರಿಹರ: ತಾಲ್ಲೂಕಿನ ದೀಟೂರು ಗ್ರಾಮದಲ್ಲಿ ಮರ ಕಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬನ ಎದೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿದೆ.

ದೀಟೂರು ಗ್ರಾಮದ ಲಂಕೇಶ್ ಕೆ.ಬಿ. (40) ಕೊಲೆಯಾದವರು.

ವಿವರ: ಲಂಕೇಶ ಹಾಗೂ ಅವರ ಎದುರು ಮನೆಯಲ್ಲಿ ವಾಸವಿರುವ ಮಾವ ಹನುಮಂತಪ್ಪ ಅವರ ನಡುವೆ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಹಳೇ ದ್ವೇಷವಿತ್ತು. ಬುಧವಾರ ಬೆಳಿಗ್ಗೆ 9.30ರ ಸುಮಾರಿಗೆ ಲಂಕೇಶ್ ಮನೆಯ ಮುಂದಿದ್ದ ಮರವನ್ನು ಹನುಮಂತಪ್ಪ ಕಡಿಯುತ್ತಿದ್ದರು. ನಮ್ಮ ಮನೆಯ ಮುಂದಿನ ಮರವನ್ನು ಏಕೆ ಕಡಿಯುತ್ತಿದ್ದೀಯಾ? ಎಂದು ಲಂಕೇಶ್ ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಹನುಮಂತಪ್ಪ ಕುಡುಗೋಲಿನಿಂದ ಹೊಡೆಯಲು ಹೋದಾಗ ಲಂಕೇಶ್ ಹಾಗೂ ಅವರ ಅಣ್ಣ ಚಂದ್ರಶೇಖರ್ ತಪ್ಪಿಸಿಕೊಂಡಿದ್ದಾರೆ. ಅದೇ ಸಮಯಕ್ಕೆ ಸ್ಥಳಕ್ಕೆ ಬಂದ ಹನುಮಂತಪ್ಪನ ಪತ್ನಿ ಲಕ್ಷ್ಮಮ್ಮ, ಮಗ ಪ್ರಕಾಶ್ ಹಾಗೂ ಮಗಳು ಗುತ್ತೆಮ್ಮ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜಗಳ ವಿಕೋಪಕ್ಕೆ ಹೋಗಿದೆ ಆರೋಪಿ ಹನುಮಂತಪ್ಪ ಕಲ್ಲಿನಿಂದ ಲಂಕೇಶ್ನ ಎದೆಗೆ ಬಲವಾಗಿ ಹೊಡೆದಿದ್ದಾನೆ. ಕಲ್ಲೇಟು ತಿಂದ ಲಂಕೇಶ್ ಕುಸಿದು ಬಿದ್ದಿದ್ದಾರೆ.

ಅಸ್ವಸ್ಥಗೊಂಡಿದ್ದ ಅವರನ್ನು ಹರಿಹರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯ ಲಾಗಿತ್ತು, ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ಕಾರಿನಲ್ಲಿ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಸಹೋದರ ಚಂದ್ರಶೇಖರ ದೂರಿನಲ್ಲಿ ವಿವರಿಸಿದ್ದಾರೆ.

ನಾಲ್ವರ ಬಂಧನ: ಈ ಕುರಿತು ದೂರು ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳಾದ ಹನುಮಂತಪ್ಪ, ಪತ್ನಿ ಲಕ್ಷ್ಮಮ್ಮ, ಮಕ್ಕಳಾದ ಪ್ರಕಾಶ್ ಹಾಗೂ ಗುತ್ತೆಮ್ಮ ಎಂಬುವರನ್ನು ಬಂಧಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-43-377087721

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.