ಹರಿಹರ: ನಗರದ ಗಾಂಧಿ ವೃತ್ತದ ಮಧ್ಯಭಾಗದಲ್ಲಿ ಕಲಾತ್ಮಕ ಹಾಗೂ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ವರ್ತುಲ ನಿರ್ಮಿಸಬೇಕು ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಸೂಚಿಸಿದರು.

ಲೋಕೋಪಯೋಗಿ ಇಲಾಖೆಯ ಅಂಗಸಂಸ್ಥೆಯಾದ ಕೆಶಿಪ್ನಿಂದ ಕೈಗೊಂಡಿರುವ ವೃತ್ತದ ಅಭಿವೃದ್ಧಿ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿದರು.

‘ಈ ವೃತ್ತದಲ್ಲಿ ಶಿವಮೊಗ್ಗ-ಹೊಸಪೇಟೆ, ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಗಳು ಕೂಡುತ್ತವೆ. ಹಗಲು ರಾತ್ರಿ ಸಂಚಾರ ದಟ್ಟಣೆ ಇರುತ್ತದೆ. ವೃತ್ತದ ಮಧ್ಯದಲ್ಲಿ ನಿರ್ಮಿಸುವ ವರ್ತುಲ ಗಾತ್ರದಲ್ಲಿ ಚಿಕ್ಕದಾಗಿರಲಿ. ದೊಡ್ಡ ವರ್ತುಲ ನಿರ್ಮಿಸಿದರೆ ಭಾರಿ ವಾಹನಗಳು ತಿರುವು ಪಡೆಯಲು ತೊಡಕಾಗುತ್ತದೆ. ರಾತ್ರಿ ಅವಧಿಯಲ್ಲೂ ವೃತ್ತದ ಮಧ್ಯದಲ್ಲಿರುವ ವರ್ತುಲ ಕಾಣುವಂತೆ ರಿಫ್ಲೆಕ್ಟರ್ ಅಳವಡಿಕೆ ಮಾಡಬೇಕು’ ಎಂದು ಕೆಶಿಪ್ ಸಿಬ್ಬಂದಿಗೆ ಸೂಚಿಸಿದರು.

ಪಾದಚಾರಿಗಳ ಓಡಾಟಕ್ಕೆ ಜೀಬ್ರಾ ಕ್ರಾಸ್, ವಾಹನಗಳ ಸಂಚಾರಕ್ಕೆ ಬಾಣದ ಗುರುತು ಸೇರಿದಂತೆ ಅಗತ್ಯ ಚಿಹ್ನೆ ಹಾಗೂ ಫಲಕಗಳನ್ನು ಅಳವಡಿಸಲು ಆದ್ಯತೆ ನೀಡಬೇಕು ಎಂದರು.

ಮಲೇಬೆನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಆಬಿದ್ ಅಲಿ, ನಗರಸಭೆ ಮಾಜಿ ಸದಸ್ಯ ಬಿ. ಮೊಹಮ್ಮದ್ ಸಿಗ್ಬತ್ ಉಲ್ಲಾ, ಉದ್ಯಮಿ ರವಿರಾಜ್, ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ, ಶಹಜಾನ್ ಕೆ. ಹಾಗೂ ಕೆಶಿಪ್ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-43-1674005238

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.