ಹರಿಹರ: ಇಲ್ಲಿನ ಹರಪನಹಳ್ಳಿ ಹೆದ್ದಾರಿಯ ರೈಲ್ವೆ ಕೆಳ ಸೇತುವೆಯ ದುರಸ್ತಿ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಗುರುವಾರ ಆರಂಭಿಸಿದೆ.

ಡಾಂಬರ್ ಕಿತ್ತು ಹೋಗಿರುವ ಈ ರಸ್ತೆಯಲ್ಲಿ ಮಳೆಯಾದಾಗ ವಾಹನ ಸಂಚಾರ ಗಂಟೆಗಟ್ಟಲೆ ಸ್ಥಗಿತಗೊಳ್ಳುತ್ತಿತ್ತು. ಇದರಿಂದ ವಾಹನ ಸವಾರರು ಪರದಾಡುತ್ತಿದ್ದರು.

ಸೇತುವೆ ಮಧ್ಯಭಾಗದಲ್ಲಿರುವ ಒಳ ಚರಂಡಿ ಕಟ್ಟಿಕೊಳ್ಳುತ್ತಿದ್ದು, ಅದನ್ನು ನಗರಸಭೆ ಸ್ವಚ್ಛ ಮಾಡಬೇಕು ಎಂದು ಹೇಳಿ ಲೋಕೋಪಯೋಗಿ ಇಲಾಖೆ ಜಾರಿ ಕೊಳ್ಳುತ್ತಿತ್ತು. ಹೆದ್ದಾರಿಯು ಪಿಡಬ್ಲ್ಯುಡಿಗೆ ಸಂಬಂಧಿಸಿದ್ದು ಎಂದು ನಗರಸಭೆ ಕೈ ತೊಳೆದುಕೊಳ್ಳುತ್ತಿತ್ತು. ಎರಡೂ ಇಲಾಖೆಗಳ ನಡುವೆ ಸಿಕ್ಕಿಕೊಂಡ ನಗರದ ನಾಗರಿಕರು ಹಲವು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದರು.

ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮೇ 18 ರಂದು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದರು. ದುರಸ್ತಿಗೆ ಮೇ 25ರ ಗಡುವು ನೀಡಿದ್ದರು.

ರಾತ್ರಿ 2 ಗಂಟೆವರೆಗೂ ರಸ್ತೆಯ ಒಂದು ಬದಿಯ ಡಾಂಬರ್ ತೆರವುಗೊಳಿಸಿ ಅಂದಾಜು 40 ಅಡಿವರೆಗೆ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. ಕ್ಯೂರಿಂಗ್ ಆದ ನಂತರ ಇನ್ನೊಂದು ಬದಿಯಲ್ಲಿ ಕಾಮಗಾರಿ ನಡೆಯಲಿದೆ.

ಕಾಮಗಾರಿ ಆರಂಭವಾಗಿದ್ದಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಮಳೆ ಬಂದಾಗ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಪಿಡಬ್ಲ್ಯುಡಿ ಹಾಗೂ ನಗರಸಭೆಯವರು ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಹನುಮಂತಪ್ಪ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಐರಣಿ ಹನುಮಂತಪ್ಪ, ಆರ್.ಶ್ರೀನಿವಾಸ್, ಇಸ್ಮಾಯಿಲ್ ಜಬಿಉಲ್ಲಾ, ಆನಂದ್ ಕುಮಾರ್ ಎಂ.ಆರ್., ಅನಿಲ್, ರವಿ, ಸಂತೋಷ್, ಅವಿನಾಶ್, ಬೆನಕೇಶ, ಮಂಜುನಾಥ್ ನಡುವಲಕೇರಿ, ಸೈಯದ್ ಸಲೀಂ ನಾಲಬಂದ್ ಹಾಗೂ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-43-1913779462

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.