ಹರಿಹರ: ನಗರದ ಅಮರಾವತಿ ಕಾಲೊನಿಯ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು, ಬರೋಬ್ಬರಿ 483 ಗ್ರಾಂ ಬಂಗಾರದ ಆಭರಣಗಳು ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.

ಗೋಕರ್ಣದಲ್ಲಿನ ಸಂಬಂಧಿಕರ ಮನೆಯ ಮದುವೆ ಸಮಾರಂಭಕ್ಕಾಗಿ ಅಮರಾವತಿ ಕಾಲೊನಿಯ ‘ಡಿ’ ಬ್ಲಾಕ್ ನಿವಾಸಿ, ವ್ಯಾಪಾರಿ ಪರೀಕ್ಷಿತ್ ಸಿ. ನಾಯ್ಡು ಅವರು ಸೋಮವಾರ ಮಧ್ಯಾಹ್ನ ಕುಟುಂಬದವರೊಂದಿಗೆ ತೆರಳಿದ್ದಾರೆ. ಅದೇ ದಿನ ರಾತ್ರಿ ಕಳ್ಳತನ ನಡೆದಿದೆ.

ಮೇ 19ರಂದು (ಮಂಗಳವಾರ) ಬೆಳಿಗ್ಗೆ ಮನೆ ಕೆಲಸದಾಕೆ ಬಂದಾಗ ಬಂದಾಗ ಮನೆಯ ಮುಖ್ಯ ದ್ವಾರದ ಬೀಗ ಹಾಗೂ ಚಿಲಕ ಒಡೆದಿರುವುದು ಕಂಡಿದೆ. ವಿಷಯ ತಿಳಿದು ಪ್ರವಾಸ ಮೊಟಕುಗೊಳಿಸಿ ವಾಪಸ್ಸಾದ ಕುಟುಂಬಸ್ಥರು ರಾತ್ರಿ 11.30ಕ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೊಡ್ಡ ಆಭರಣಗಳೇ ಗುರಿ: ಮನೆಗೆ ನುಗ್ಗಿದ ಕಳ್ಳರು, ಬೆಡ್ರೂಂನಲ್ಲಿದ್ದ ಬೀರುವಿನ ಕೀಯನ್ನು ಹುಡುಕಿ ತೆರೆದು ಅದರಲ್ಲಿದ್ದ ವಂಕಿ ರಿಂಗ್, ಲಾಂಗ್ ಚೈನ್, ಬ್ರೇಸ್ಲೆಟ್, ಡಿಸ್ಕೋ ಚೈನ್, ಬಳೆಗಳು ಸೇರಿದಂತೆ ಒಟ್ಟು 483 ಗ್ರಾಂ ಬಂಗಾರದ ಆಭರಣಗಳು ಹಾಗೂ ₹ 10,000 ನಗದು ದೋಚಿದ್ದಾರೆ.

ಕಳವಾದ ಚಿನ್ನಾಭರಣಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ₹ 67,62,000 ಎಂದು ಅಂದಾಜಿಸಲಾಗಿದೆ. ಅಚ್ಚರಿಯೆಂದರೆ ಕಳ್ಳರು ಕೇವಲ ದೊಡ್ಡ- ದೊಡ್ಡ ಆಭರಣಗಳನ್ನು ಮಾತ್ರ ಕದ್ದೊಯ್ದು, ಸಣ್ಣ–ಪುಟ್ಟ ಒಡವೆಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.

ಸ್ಥಳಕ್ಕೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬ ಸಮೇತ ಊರಿಗೆ ಅಥವಾ ಪ್ರವಾಸಕ್ಕೆ ತೆರಳುವಾಗ ಸಾರ್ವಜನಿಕರು ಮುಂಚಿತವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಇದೇ ವೇಳೆ ಪೊಲೀಸರು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-43-891531645

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.