ಹರಿಹರ: ‘ಸಾಂಪ್ರದಾಯಿಕ ಭಾರತೀಯ ಸಮರ ಕಲೆಗಳು ದೈಹಿಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತವೆ’ ಎಂದು ಶಾಸಕ ಬಿ.ಪಿ.ಹರೀಶ್ ಅಭಿಪ್ರಾಯಪಟ್ಟರು.

ನಗರದ ಗಿರಿಯಮ್ಮ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹಿಂದೂ ಜಾಗೃತಿ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹರ್ ಘರ್ ಯೋಧ ಶೌರ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಎದುರಾಳಿಯ ದಾಳಿಯನ್ನು ತಡೆಯಲು ಮತ್ತು ನಿಯಂತ್ರಿಸಲು ಈ ರೀತಿಯ ಶಿಬಿರಗಳು ವಿಶೇಷವಾಗಿ ಮಹಿಳೆಯರಿಗೆ ಸಹಕಾರಿಯಾಗಲಿವೆ. ಅನ್ಯ ಧರ್ಮದವರೊಂದಿಗೆ ಕಾಪಾಡಲು ಈ ಶಿಬಿರವನ್ನು ಹಮ್ಮಿಕೊಂಡಿ ಲ್ಲ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಈ ತರಬೇತಿ ನೀಡಲಾಗುತ್ತಿದೆ’ ಎಂದರು.

‘ಈ ಶಿಬಿರವನ್ನು ನಡೆಸದಂತೆ ಆಯೋಜಕರಿಗೆ ವಿವಿಧ ಇಲಾಖೆಗಳು ತೊಂದರೆ ನೀಡಿದ್ದು ಸರಿಯಲ್ಲ. ಅತಿಯಾದ ಓಲೈಕೆಯೂ ಸರಿಯಲ್ಲ ಎನ್ನುವುದನ್ನು ಆವರು ಮನಗಾಣಬೇಕಿದೆ. ನಮ್ಮತನಕ್ಕೆ ಧಕ್ಕೆಯುಂಟಾದರೆ ಸಹಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ ಮಾತನಾಡಿದರು.

ಏಳು ದಿನ ನಡೆದ ತರಬೇತಿ ಶಿಬಿರದಲ್ಲಿ ಲಾಠಿ ವರಸೆ, ನಾನ್ ಚಾಕ್, ಸ್ವಯಂ ರಕ್ಷಣೆ, ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ಶಿಬಿರಾರ್ಥಿಗಳಿಗೆ ತರಬೇತಿ ನೀಡಲಾಯಿತು. ಸಮಾರೋಪದ ವೇಳೆ ಶಿಬಿರಾರ್ಥಿಗಳು ನೀಡಿದ ಪ್ರದರ್ಶನ ಜನ– ಮನ ಸೆಳೆಯಿತು.

ನಗರದ ರಾಮಕೃಷ್ಣ ಆಶ್ರಮದ ಆತ್ಮಾನಂದ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಹಿಂದೂ ಜನಜಾಗೃತಿ ಸಮಿತಿಯ ವಿಜಯ ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ಕೋಮಲ್, ಉದ್ಯಮಿ ಎಚ್.ಪಿ.ಬಾಬಣ್ಣ, ಪತಂಜಲಿ ಯೋಗ ಕೇಂದ್ರದ ನಿರಂಜನ್, ಬಿ.ವಿಶ್ವನಾಥ್, ತರಬೇತುದಾರ ಸಾಗರ್ ದಳವಾಯಿ, ಹಿಂದೂ ಜಾಗರಣ ವೇದಿಕೆ ಮುಖಂಡ ಎಚ್.ದಿನೇಶ್, ಲೋಕೇಶ್ ಮುರ್ಕಲ್, ಶಿವಕುಮಾರ್, ಗೋಪಾಲ್, ಶಾಂತರಾಜ್, ರೂಪಾ ಪವಾರ್, ಲೆಕ್ಕ ಪರಿಶೋಧಕಿ ಸಾವಿತ್ರ, ಸಾಕ್ಷಿ ಶಿಂಧೆ, ಮೀನಾಕ್ಷಿ ನಿರಂಜನ್ ಹಾಗೂ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-43-617411636

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.