ಹರಿಹರ: ‘ಒದಗಿಸಬೇಕಾದ ಸೌಲಭ್ಯಗಳು ಸಾಗರದಷ್ಟಿವೆ. ಆದರೆ, ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಹೀಗಾಗಿ ಇರುವುದರಲ್ಲೇ ನೆಮ್ಮದಿ ಕಾಣಬೇಕಿದೆ’ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ವಿವಿಧ ವಾರ್ಡ್ಗಳಲ್ಲಿ ಮೂಲಸೌಕರ್ಯ, ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದಾಗ ಮೇಲಿನಂತೆ ಪ್ರತಿಕ್ರಿಯಿಸಿದರು.

‘ನಗರದ ಪಟೇಲ್ ಬಡಾವಣೆಯಲ್ಲಿ ಕನಿಷ್ಠ ಮೂಲಸೌಕರ್ಯವಿಲ್ಲದೆ ಹಾವು, ಚೇಳುಗಳ ಹಾವಳಿ ಹೆಚ್ಚಿದೆ ಹಾಗೂ ಡೆಂಗಿ ಹರಡುತ್ತಿದೆ. ಕಂದಾಯ ಕಟ್ಟಿಸಿಕೊಂಡರೂ ಅಧಿಕಾರಿಗಳು ಇದೊಂದು ಅನಧಿಕೃತ ಬಡಾವಣೆ ಎನ್ನುತ್ತಾರೆ’ ಎಂದು ನಿವಾಸಿ ಪದ್ಮಾವತಿ ಮತ್ತಿತರರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಮಂಗಳವಾರವೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ವರದಿ ನೀಡಿ ಎಂದು ಪೌರಾಯುಕ್ತೆ ಹಾಗೂ ಎಇಇಗೆ ಸೂಚಿಸಿದರು, ತಾವೂ ಸ್ಥಳಕ್ಕೆ ಭೇಟಿ ಪರಿಶೀಲಿಸುವುದಾಗಿ’ ಶಾಸಕರು ತಿಳಿಸಿದರು.

ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ಉದ್ಯಾನವೇ ಇಲ್ಲದಿದ್ದರೂ ಅದರ ಅಭಿವೃದ್ಧಿಗೆಂದು ಧೂಡಾದಿಂದ ₹ 25 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಹಾಗೂ ಅದೇ ಸಂಸ್ಥೆ ರಾಜಕಾಲುವೆ ಒತ್ತುವರಿ ಮಾಡಿದೆ ಎಂದು ಡಿಎಸ್ಎಸ್ ಸಂಚಾಲಕ ಪಿ.ಜೆ.ಮಹಾಂತೇಶ್ ಆರೋಪಿಸಿದರು. ಈ ಬಗ್ಗೆ ಪರಿಶೀಲಿಸಲು ಪೌರಾಯುಕ್ತರಿಗೆ ಹಾಗೂ ಒತ್ತುವರಿ ಸರ್ವೆ ಮಾಡಿಸಲು ತಹಶೀಲ್ದಾರ್ಗೆ ಸೂಚಿಸಿದರು.

ಕೋಟ್ಯಂತರ ರೂಪಾಯಿ ವೆಚ್ಚದ ಈಜುಕೊಳ ಬಂದ್ ಆಗಿರುವ ಬಗ್ಗೆ ಕೇಳಿದಾಗ, ಅಗತ್ಯ ಕ್ರಮ ಕೈಗೊಳ್ಳಲು ಯುವಜನ ಸೇವಾ ಇಲಾಖೆ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.

ಸಾರ್ವಜನಿಕರ ಮನವಿಯ ಮೇರೆಗೆ ನಗರದ ಮಧ್ಯಭಾಗದಲ್ಲಿ ನಡೆಯುವ ವಾರದ ಸಂತೆಯನ್ನು ಮುಂದಿನ ಮಂಗಳವಾರದಿಂದ ಕಡ್ಡಾಯವಾಗಿ ಎಪಿಎಂಸಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಫುಟ್ಪಾತ್ಗಳನ್ನು ಆಕ್ರಮಿಸಿರುವ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಪರ್ಯಾಯ ಜಾಗ ಗುರುತಿಸಿ ಫುಡ್ ಕೋರ್ಟ್ ಮಾದರಿಯಲ್ಲಿ ನಿರ್ಮಾಣ ಮಾಡಿ ಅಲ್ಲಿಗೆ ಸ್ಥಳಾಂತರಿಸಲು ಸೂಚಿಸಿದರು.

ಹರಪನಹಳ್ಳಿ ರಸ್ತೆಯ ರೈಲ್ವೆ ಕೆಳಸೇತುವೆಯಲ್ಲಿ ಮಳೆನೀರು ನಿಲ್ಲುವ ಕುರಿತು ಸಭೆಯಲ್ಲೇ ರೈಲ್ವೆ ಎಇಇಗೆ ಕರೆ ಮಾಡಿ ಶಾಸಕರು ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಅನುಮೋದನೆಯಾಗಿದ್ದು, ರಸ್ತೆ ಬಂದ್ ಮಾಡಬೇಕಿದೆ ಎಂದು ಎಇಇ ತಿಳಿಸಿದಾಗ,

‘ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆ ನೆರವು ಪಡೆದುಕೊಂಡು ಶೀಘ್ರವೇ ಕಾಮಗಾರಿ ಆರಂಭಿಸುವಂತೆ’ ತಾಕೀತು ಮಾಡಿದರು.

ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ನಗರದ ವಿವಿಧ ಸಮಸ್ಯೆಗಳ ಬಗ್ಗೆ ಮಾತನಾಡಿ ಶಾಸಕರ ಗಮನ ಸೆಳೆದರು.

ಸಭೆಯಲ್ಲಿ ತಹಶೀಲ್ದಾರ್ ಜಿ. ಸಂತೋಷ್ ಕುಮಾರ್, ಪೌರಾಯುಕ್ತೆ ವಿ.ಈರಮ್ಮ, ತಾ.ಪಂ. ಇಒ ಬಸವರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-43-470788174

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.