ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖಾತೆ ಬದಲಾವಣೆ ವಿಳಂಬಕ್ಕೆ ನಗರಸಭೆ ಸದಸ್ಯರ ತರಾಟೆ

ಹರಿಹರ:
Published : 28 ಸೆಪ್ಟೆಂಬರ್ 2024, 15:36 IST
Last Updated : 28 ಸೆಪ್ಟೆಂಬರ್ 2024, 15:36 IST
ಫಾಲೋ ಮಾಡಿ
Comments

ಹರಿಹರ: ‘ನಗರಸಭಾ ವ್ಯಾಪ್ತಿಯ ಆಸ್ತಿಗಳ ಖಾತೆ ಬದಲಾವಣೆ ಮಾಡಿಕೊಡಲು ನಾಗರಿಕರನ್ನು ಅಲೆದಾಡಿಸಲಾಗುತ್ತಿದೆ. ಅನಗತ್ಯ ದಾಖಲೆಗಳನ್ನೆಲ್ಲ ಕೇಳಿ ವಿಳಂಬ ಮಾಡಲಾಗುತ್ತಿದೆ’ ಎಂದು ನಗರಸಭಾ ಸದಸ್ಯ ಆರ್.ಸಿ.ಜಾವಿದ್ ಶುಕ್ರವಾರ ಪೌರಾಯುಕ್ತರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

‘ನೋಂದಾಯಿತ ಕ್ರಯ, ದಾನ, ವಿಭಾಗ ಪತ್ರ, ಮರಣ ಪ್ರಕರಣಗಳಲ್ಲಿ ಖಾತೆ ಬದಲಾವಣೆ ಮಾಡಲು ಅರ್ಜಿ ಸಲ್ಲಿಸಿದ ವಾರದೊಳಗೆ ಕ್ರಮ ಕೈಗೊಳ್ಳಬೇಕು. ಆದರೆ, ನೀವು ವರ್ಷಗಟ್ಟಲೆ ಕಚೇರಿಗೆ ಅಲೆದಾಡಿಸುತ್ತಿರುವುದೇಕೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮ ತಾಯಿ ಶಾಹಿದಾ ಬೀ ಅವರನ್ನು ಸಹ ಖಾತೆ ಬದಲಾವಣೆ ಮಾಡಿ ಕೊಡಲು ನಾಳೆ, ನಾಡಿದ್ದು ಎಂದು ಅಲೆದಾಡಿಸುತ್ತಿದ್ದೀರಿ. ಅವರು ₹ 3,000 ಶುಲ್ಕ ಪಾವತಿಸಿದ್ದರೂ ಆನ್‌ಲೈನ್, ಆಫ್‌ಲೈನ್ ಎಂದು ಕಾರಣ ಹೇಳುತ್ತ ಲಂಚ ನೀಡಲಿ ಎಂತಲೇ ವಿಳಂಬ ಮಾಡುತ್ತಿದ್ದೀರಿ’ ಎಂದು ಆರೋಪಿಸಿದರು.

‘ಯಾರಾದರೂ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರೆ, ಕೂಡಲೇ ದಾಖಲೆಗಳನ್ನು ಪರಿಶೀಲಿಸಿ ಎಲ್ಲ ಸರಿಯಾಗಿದ್ದರೆ ಮುಂದಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹಿಂಬರಹ ನೀಡಿ ಅರ್ಜಿ ವಿಲೇ ಮಾಡಬೇಕು. ಅದರ ಬದಲು ನೀವು ಅನಗತ್ಯ ದಾಖಲೆಗಳನ್ನೆಲ್ಲ ಕೇಳುತ್ತಾ ವರ್ಷಗಟ್ಟಲೆ ಕಡತ ಇಟ್ಟುಕೊಳ್ಳುವುದೇಕೆ’ ಎಂದು ಪ್ರಶ್ನಿಸಿದರು.

‘ಖಾತೆ ಬದಲಾವಣೆ ವಿಳಂಬಕ್ಕೆ ಸಂಬಂಧಿಸಿದಂತೆ ನಗರಸಭೆ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು, ಬಿಲ್ ಕಲೆಕ್ಟರ್ ಮೇಲೆ ಶಿಸ್ತು ಕ್ರಮ ಜರಗಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು’ ಎಂದಾಗ ಸ್ಥಳದಲ್ಲಿದ್ದ ನಗರಸಭೆ ಅಧ್ಯಕ್ಷೆ ಕವಿತಾ ಬೇಡರ್, ಸದಸ್ಯರಾದ ಎಂ.ಎಸ್.ಬಾಬುಲಾಲ್, ಆಟೊ ಹನುಮಂತಪ್ಪ ಧ್ವನಿಗೂಡಿಸಿದರು.

‘ಈಗಾಗಲೇ ಕಂದಾಯ ವಿಭಾಗದ ಕರ ವಸೂಲಿಗಾರರಿಗೆ ಎರಡು ಬಾರಿ ನೋಟಿಸ್ ನೀಡಿದ್ದೇನೆ. ಖಾತಾ ಬದಲಾವಣೆಗೆ ಸಂಬಂಧಿಸಿದ ಅರ್ಜಿಗಳನ್ನು ನಿಯಮಾನುಸಾರ ವಿಲೇ ಮಾಡಲು ಕಂದಾಯಾಧಿಕಾರಿ, ಕಂದಾಯ ನಿರೀಕ್ಷಕರಿಗೆ ಸೂಚಿಸಿದ್ದೇನೆ’ ಎಂದು ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಪ್ರತಿಕ್ರಿಯಿಸಿದರು.

‘ಖಾತೆ ಬದಲಾವಣೆ ವಿಳಂಬವಾಗುತ್ತಿರುವ ಬಗ್ಗೆ ಪೌರಾಯುಕ್ತರ ಬಳಿ ದೂರಿದರೆ, ನಾನು ವರ್ಗಾವಣೆ ಮಾಡಿಸಿಕೊಂಡು ಬೇರೆ ಕಡೆ ಹೋಗುತ್ತೇನೆ ಎನ್ನುತ್ತಾರೆ. ಮೇಲಧಿಕಾರಿಗಳ ಗಮನಕ್ಕೆ ತಂದು ನಿಮ್ಮಿಷ್ಟದಂತೆ ಮಾಡಿ. ಆದರೆ ಇಲ್ಲಿರುವವರೆಗೂ ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ತಿಳಿಸಿದ್ದೇನೆ’ ಎಂದು ಸದಸ್ಯ ಆರ್.ಸಿ.ಜಾವಿದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT