ಹರಿಹರ: ‘ಪಂಚಮಸಾಲಿ ಗುರುಪೀಠದ ಟ್ರಸ್ಟಿಗಳು ಪೊಲೀಸರ ರಕ್ಷಣೆಯಲ್ಲಿ ಖಾಲಿ ಕುರ್ಚಿಗಳಿಗೆ ಅವಸರವಸರವಾಗಿ ನೀಡಿದ ಲೆಕ್ಕವನ್ನು ಒಪ್ಪಲಾಗದು. ಮೇ 15ರೊಳಗೆ ದೇವರ ಮೇಲೆ ಪ್ರಮಾಣ ಮಾಡಿ ಪಾರದರ್ಶಕ ಲೆಕ್ಕದ ಪುಸ್ತಕವನ್ನು ಭಕ್ತರಿಗೆ ನೀಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಆಂದೋಲನ ನಡೆಸಲಾಗುವುದು’ ಎಂದು ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಎಚ್ಚರಿಸಿದರು.

‘ಸಂಡೂರು ನಾಗನಗೌಡರು, ಮುರುಗೇಶ್ ನಿರಾಣಿ ಸೇರಿದಂತೆ ದೊಡ್ಡ ದಾನಿಗಳು ನೀಡಿದ ಕೋಟ್ಯಂತರ ರೂಪಾಯಿಗಳ ವಿವರ ಬಹಿರಂಗಪಡಿಸಿಲ್ಲ’ ಎಂದು ನಗರದ ಹೊರವಲಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ಲೆಕ್ಕ ಕೊಡಿ’ ಚಳವಳಿ ಹೋರಾಟ ಸಮಿತಿಯ ಸಭೆಯಲ್ಲಿ ಅವರು ಹೇಳಿದರು.

‘ಮಠದ ಕಾಣಿಕೆಯನ್ನು ಬಳಸಿಕೊಂಡು ಬ್ಲಾಕ್ ಮನಿಯನ್ನು ವೈಟ್ ಮಾಡಲು ಟ್ರಸ್ಟಿಗಳು ಮುಂದಾಗಿದ್ದಾರೆ. ಇದು ಆರ್ಥಿಕ ಅಪರಾಧ ಮತ್ತು ಹವಾಲಾ ಹಗರಣಕ್ಕೆ ಸಮ. ಮಠಕ್ಕೆ ದಾನವಾಗಿ ಬಂದ ಮರಳನ್ನು ಬೆಂಗಳೂರಿಗೆ ಮಾರಾಟ ಮಾಡಲಾಗಿದೆ. ಇಟ್ಟಿಗೆಗಳೂ ನಾಪತ್ತೆಯಾಗಿವೆ’ ಎಂದು ಆರೋಪಿಸಿದರು.

‘ನಕಲಿ ಸಹಿ ಮಾಡಿ ಸರ್ಕಾರದ ಹಣ ದುರುಪಯೋಗಪಡಿಸಿಕೊಂಡಿರುವ ಸಂಶಯವಿದೆ. ಟ್ರಸ್ಟಿಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಪರಸ್ಪರರ ಮೇಲಿರುವ ಸಿ.ಡಿ ಅಥವಾ ಫೋಟೊಗಳ ಭಯದಿಂದಲೇ ಪ್ರಧಾನ ಟ್ರಸ್ಟಿ ಕೆಲವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ’ ಎಂಬ ಅನುಮಾನವಿದೆ ಎಂದರು.

ಲಿಂ. ಮಹಾಂತ ಶ್ರೀಗಳ ಕಾಲದಿಂದಲೂ ಟ್ರಸ್ಟಿಗಳು ಸ್ವಾಮೀಜಿಗಳಿಗೆ ಕಿರುಕುಳ ನೀಡುತ್ತಾ ಬಂದಿದ್ದಾರೆ. ಸಿದ್ಧಲಿಂಗ ಶ್ರೀಗಳ ನಂತರ ಈಗ ವಚನಾನಂದ ಶ್ರೀಗಳನ್ನು ಉಚ್ಛಾಟಿಸಲು ಕುತಂತ್ರ ನಡೆಸುತ್ತಿದ್ದಾರೆ. ಲೆಕ್ಕ ಕೇಳಿದವರನ್ನು ರಾಜಕೀಯವಾಗಿ ಮುಗಿಸಲು ಹೊರಟಿರುವುದು ಮತ್ತು ಸಮಾಜದ ಭಕ್ತರನ್ನು ‘ಕುಡುಕರು’ ಎಂದು ಹೀಯಾಳಿಸಿರುವುದು ಅಕ್ಷಮ್ಯ ಎಂದು ಹೇಳಿದರು.

ಟ್ರಸ್ಟಿಗಳು ತಮ್ಮ ದರ್ಪ ಬಿಟ್ಟು ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ನೀಡಬೇಕು, ಇಲ್ಲವಾದರೆ ಭಕ್ತರು ಇವರ ಮನೆ ಮುಂದೆ ಬಂದು ಲೆಕ್ಕ ಕೇಳುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.

ಹತ್ತಿಕ್ಕುವ ಪ್ರಯತ್ನ: ‘ಟ್ರಸ್ಟಿಗಳು ಭಕ್ತರಿಗೆ ಆಯವ್ಯಯದ ಪುಸ್ತಕಗಳನ್ನು ನೀಡುವ ಬದಲು, ಪ್ರಶ್ನೆ ಮಾಡಿದವರನ್ನು ಸಭೆಯಿಂದ ದೂರವಿಟ್ಟು ಲೆಕ್ಕ ನೀಡಿದ್ದಾರೆ. ಸಮಾಜದ ಹಣ ಲೂಟಿ ಮಾಡುವವರನ್ನು ಪ್ರಶ್ನಿಸದಂತೆ ಯುವಕರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ’ ಎಂದು ಮಾಜಿ ಮೇಯರ್ ಬಿ.ಜಿ. ಅಜಯ ಕುಮಾರ್ ಆರೋಪಿಸಿದರು.

ಬ್ರಿಟಿಷರನ್ನು ದೇಶದಿಂದ ಹೊರಹಾಕಿದಂತೆ ಮಠದಲ್ಲಿ ಬೀಡುಬಿಟ್ಟಿರುವ ಟ್ರಸ್ಟ್ ಸದಸ್ಯರನ್ನು ಹೊರಹಾಕಲು ರಾಜ್ಯದಾದ್ಯಂತ ಭಕ್ತರು ಸಜ್ಜಾಗಬೇಕು ಎಂದು ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಹೇಳಿದರು.

ಪರಮೇಶ್ವರ ಗೌಡ ಮಾತನಾಡಿ, ‘ಹರಿಕಥೆಯಂತೆ ಲೆಕ್ಕ ಮಂಡಿಸುವ ಸಂದರ್ಭದಲ್ಲಿ ಸಮಾಜದ ಭಕ್ತರ ಬದಲಿಗೆ ಹಣ ನೀಡಿ ಜನರನ್ನು ಕರೆತಂದಿರುವುದು ಸರಿಯಲ್ಲ. ಟ್ರಸ್ಟಿಗಳು ಕೂಡಲೇ ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ಕಲ್ಪಿಸಬೇಕು, ಇಲ್ಲದಿದ್ದರೆ ಹೋರಾಟ ಎದುರಿಸಬೇಕಾಗುತ್ತದೆ’ ಎಂದರು.

ಲೆಕ್ಕ ಕೊಡಿ ಚಳವಳಿಯ ಅಧ್ಯಕ್ಷ ಪರಮೇಶ್ವರ ಗೌಡ, ಆಡಳಿತಾಧಿಕಾರಿ ಡಾ. ರಾಜಕುಮಾರ್, ಪ್ರಧಾನ ಕಾರ್ಯದರ್ಶಿ ಶಂಕರ್ ಗೌಡ ಪಾಟೀಲ್, ಅರುಣ್ ಕುಮಾರ್ ಪೂಜಾರ್, ಸೋಮಣ್ಣ ಬೇವಿನಮರದ, ಡಾ. ವೀರಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಪಂಚಮಸಾಲಿ ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-43-1340545789

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.