ಹರಿಹರ (ದಾವಣಗೆರೆ): ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿಗಳ ಪದಚ್ಯುತಿ ಮತ್ತು ಟ್ರಸ್ಟ್ ರಚನೆಯ ಬೆನ್ನಲ್ಲೇ ಪೀಠದ ನಿಯಂತ್ರಣಕ್ಕಾಗಿ ಉಭಯ ಬಣಗಳು ಕೋರ್ಟ್ ಮೆಟ್ಟಿಲೇರಿವೆ.

ಟ್ರಸ್ಟಿಗಳು ಮತ್ತು ಉಚ್ಚಾಟಿತ ವಚನಾನಂದ ಶ್ರೀಗಳು ಪರಸ್ಪರರ ವಿರುದ್ಧ ದಾವಣಗೆರೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ಕೋರ್ಟ್ ಹಾಗೂ ಹರಿಹರದ ಪ್ರಧಾನ ಸಿವಿಲ್ ನ್ಯಾಯಾಲಯಗಳಲ್ಲಿ ಕೇವಿಯಟ್ ಸಲ್ಲಿಸಿದ್ದಾರೆ.

ಟ್ರಸ್ಟ್ ಪರವಾಗಿ ಸಲ್ಲಿಸಿರುವ ಕೇವಿಯಟ್ನಲ್ಲಿ ಮ್ಯಾನೇಜಿಂಗ್ ಟ್ರಸ್ಟಿ ಬಿ.ಸಿ.ಉಮಾಪತಿ ಮತ್ತು ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಕೆ.ಎಂ. ಪಕ್ಷಗಾರರಾಗಿದ್ದಾರೆ.

ಶ್ರೀಗಳನ್ನು ಪದಚ್ಯುತಗೊಳಿಸಲಾಗಿದೆ. ಇದರ ವಿರುದ್ಧ ಶ್ರೀಗಳು ದಾವೆ ಹೂಡಿ, ಟ್ರಸ್ಟ್ಗೆ ಅಂತಹ ಅಧಿಕಾರವಿಲ್ಲ ಎಂದು ಹೇಳಿ ಏಕಪಕ್ಷೀಯವಾಗಿ ತಡೆಯಾಜ್ಞೆ ತರುವುದನ್ನು ತಡೆಯುವುದು ಟ್ರಸ್ಟ್ನ ಮುಖ್ಯ ಉದ್ದೇಶವಾಗಿದೆ.

‘ತಮ್ಮನ್ನು ಮಠದ ಚಟುವಟಿಕೆಗಳಿಂದ ದೂರವಿಡಲು ಟ್ರಸ್ಟ್ ಏಕಪಕ್ಷೀಯ ಆದೇಶ ಪಡೆಯುವ ಸಾಧ್ಯತೆ ತಪ್ಪಿಸಲು, ತಮ್ಮ ವಾದವನ್ನೂ ಆಲಿಸಬೇಕು’ ಎಂದು ವಚನಾನಂದ ಶ್ರೀಗಳು ಕೇವಿಯೆಟ್ ಸಲ್ಲಿಸಿದ್ದಾರೆ.

‘ಧರ ಧರ ಎಳೆದು ಹೊರಹಾಕುತ್ತೇವೆ’

ದಾವಣಗೆರೆ: ‘ವಚನಾನಂದ ಶ್ರೀಗಳು ಮಠದಿಂದ ತಾವಾಗಿಯೇ ಹೊರನಡೆದರೆ ಶಾಲು ಹೊದಿಸಿ ಗೌರವಯುತವಾಗಿ ಕಳಿಸುತ್ತೇವೆ. ಇಲ್ಲವಾದರೆ ಧರ ಧರ ಎಳೆದು ಹೊರಹಾಕುತ್ತೇವೆ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಯುವ ಘಟಕದ ಅಧ್ಯಕ್ಷ ಕಿಚಡಿ ಕೊಟ್ರೇಶ್ ಹಾಗೂ ಕಾರ್ಯದರ್ಶಿ ಬಿ.ಆರ್.ಕರಿಬಸಪ್ಪ ತಿಳಿಸಿದರು. ‘ಸಂಸ್ಕೃತಿ ಸಂಸ್ಕಾರವಿದ್ದರೆ ವಚನಾನಂದ ಸ್ವಾಮೀಜಿ ತಕ್ಷಣವೇ ಪೀಠ ತೊರೆಯಲಿ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ‘ಸ್ವಾಮೀಜಿ ಜ್ವರ ಬಂದು ಮಲಗಿದ ವಿದ್ಯಾರ್ಥಿಗಳ ಮೇಲೆ ತಣ್ಣೀರು ಸುರಿದು ಅಮಾನವೀಯವಾಗಿ ವರ್ತಿಸುತ್ತಿದ್ದರು. ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.