ಹರಿಹರ: ಲೋಕೋಪಯೋಗಿ ಇಲಾಖೆಯ ಅಂಗಸಂಸ್ಥೆಯಾದ ಕೆಶಿಪ್ನಿಂದ (ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ) ನಗರದಲ್ಲಿ ಕೈಗೊಂಡ ಕಳಪೆ ಕಾಮಗಾರಿಯ ಪರಿಣಾಮವಾಗಿ ಕಾರೊಂದು ಕಂದಕಕ್ಕೆ ಸರಿದು ಇಬ್ಬರು ಗಾಯಗೊಂಡಿದ್ದಾರೆ.

ನಗರ ವ್ಯಾಪ್ತಿಯ ಹಳೆ ಪಿ.ಬಿ.ರಸ್ತೆ (ಬೀರೂರು-ಸಮ್ಮಸಗಿ ಹೆದ್ದಾರಿ) ಇಕ್ಕೆಲಗಳ ಫುಟ್ಪಾತ್ ಅಭಿವೃದ್ಧಿ ಕಾಮಗಾರಿಯನ್ನು 4 ತಿಂಗಳಿಂದ ನಡೆಸಲಾಗುತ್ತಿದ್ದು, ಅರ್ಧಂಬರ್ಧ ಕಾಮಗಾರಿ ನಡೆದಿದೆ.

ಗುರುವಾರ ಸಂಜೆ ಗಾಂಧಿ ಸರ್ಕಲ್ನಲ್ಲಿ ಕಾರೊಂದು ತಿರುವು ಪಡೆಯುವಾಗ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದೆ. ಕಾರಿನ ಮುಂಭಾಗದ ಚಕ್ರಗಳು ಕಂದಕದಲ್ಲಿ ಇಳಿದಿವೆ. ಕಾರಿನ ಮುಂಭಾಗಕ್ಕೆ ಜಖಂ ಆಗಿದೆ. ಸ್ಥಳೀಯರ ಸಹಕಾರದಿಂದ ಕಾರನ್ನು ಹೊರಕ್ಕೆ ತೆಗೆಯಲಾಯಿತು.

‘ಕೆಶಿಪ್ ಎಂಜಿನಿಯರ್ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರ ವಾಹನಗಳಿಗೆ ಹಾನಿಯಾಗುತ್ತಿದೆ. ಈ ಕುರಿತು ಕೆಶಿಪ್ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಹಾಗೂ ಸಿವಿಲ್ ದಾವೆ ಹೂಡುತ್ತೇನೆ’ ಎಂದು ಕಾರಿನ ಮಾಲೀಕರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-43-1012955285

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.