ಹರಿಹರ: ರಾಜ್ಯದಲ್ಲಿ ವಿದ್ಯುತ್ ವಿತರಣೆ ಪ್ರಕ್ರಿಯೆಯನ್ನು ಖಾಸಗೀಕರಣ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆಯಿಂದ ಬುಧವಾರ ನಗರದ ಬೆಸ್ಕಾಂ ವಿಭಾಗೀಯ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿ ಬೆಸ್ಕಾಂ ಇಇ ಎಸ್.ಕೆ.ಪಟೇಲ್ಗೆ ಮನವಿ ಸಲ್ಲಿಸಲಾಯಿತು.

‘ರಾಜ್ಯ ಸರ್ಕಾರ ಇಂಧನ ಇಲಾಖೆಯ ಅಧಿನದಲ್ಲಿರುವ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ ಹಾಗೂ ಜೆಸ್ಕಾಂ ಕಂಪನಿಗಳಿಗೆ ಒಳಪಡುವ ಆಯ್ದ ಭಾಗಗಳ ವಿದ್ಯತ್ ವಿತರಣೆಯನ್ನು ಟಾಟಾ ಪವರ್ ಕಂಪನಿಗೆ ನೀಡುತ್ತಿರುವ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಸಂಘದ ಪದಾಧಿಕಾರಿಗಳು ಹೇಳಿದರು.

‘ಸರ್ಕಾರದ ಈ ನಿರ್ಧಾರದಿಂದ ರೈತರಿಗೆ ಆಸರೆಯಾಗಿರುವ ಜಮೀನು ಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಹಾಗೂ ಗಂಗಾ ಕಲ್ಯಾಣದಂತಹ ಅನೇಕ ಯೋಜನೆಗಳು ಕೈತಪ್ಪುವ ಅಪಾಯವಿದೆ. ಖಾಸಗೀಕರಣದಿಂದ ಕಂಪನಿಯವರು ಮಾಡುವ ಕಾನೂನುಗಳು ರೈತರ ವಿರೋಧಿಗಳಾಗಿದ್ದರೂ ಅವುಗಳನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡುತ್ತಾರೆ. ಎಲ್ಲ ವ್ಯವಸ್ಥೆಯನ್ನು ಆನ್ಲೈನ್ ಮಾಡಿದರೆ ವಿದ್ಯುತ್ ಸಂಪರ್ಕ ಬೇಗನೆ ಸಿಗುವುದಿಲ್ಲ. ಇದರಿಂದ ರೈತರು ಸಂಕಷ್ಟ ಎದುರಿಸುತ್ತಾರೆ’ ಎಂದು ಹೇಳಿದರು.

‘ರೈತ ಸಮೂಹಕ್ಕೆ ಅನ್ಯಾಯ ಮಾಡುವಂತ ಇಂತಹ ನಿರ್ಧಾರದಿಂದ ರಾಜ್ಯ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು. ತಪ್ಪಿದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ರೈತ ಸಂಘದ ಪದಾಧಿಕಾರಿಗಳಾದ ಎಚ್.ಬಿ.ಬಸವರಾಜಪ್ಪ, ಪರಮೇಶ್ವರಪ್ಪ ಭಾನುವಳ್ಳಿ, ಡಿ.ಬಿ.ನಂದೀಶ್, ಕೆಂಚನಹಳ್ಳಿ ಪರಮೇಶ್ವರಪ್ಪ, ಹಸಿರು ಸೇನೆಯ ಕೆ.ಜಿ.ಮಂಜುನಾಥ್ ಕೆಂಚನಹಳ್ಳಿ, ಕೆ.ವಿ.ರುದ್ರಮುನಿ ಹನಗವಾಡಿ, ಕೆ. ಬಸವರಾಜಪ್ಪ ಕುಂಬಳೂರು, ಕೆ.ಎನ್.ಹಳ್ಳಿ ಸ್ವಾಮಿ, ರಾಘವೇಂದ್ರ ನಂದಿತಾವರೆ ಹಾಗೂ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-43-648002777

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.