ಹರಿಹರ: ಮೈಸೂರು-ಬೆಳಗಾವಿ ಬೇಸಿಗೆ ವಿಶೇಷ ಸೂಪರ್ ಎಕ್ಸ್ಪ್ರೆಸ್ ರೈಲು ಹರಿಹರ ಸಮೀಪ ಹಳಿ ತಪ್ಪಿ ಭೀಕರ ಅಪಘಾತಕ್ಕೀಡಾಯಿತು. ಒಂದು ಬೋಗಿಗೆ ಬೆಂಕಿ ಹೊತ್ತಿಕೊಂಡರೆ, ಮತ್ತೊಂದು ಬೋಗಿಯ ಮೇಲೇರಿತ್ತು. ಇನ್ನೊಂದು ಬೋಗಿ ಬಹುತೇಕ ಜಖಂಗೊಂಡಿತ್ತು.

ರೈಲ್ವೆ ಸಿಬ್ಬಂದಿಯ ತ್ವರಿತ ಮಾಹಿತಿಯ ಮೇರೆಗೆ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿ ಕ್ಷಣಾರ್ಧದಲ್ಲಿ ಸ್ಥಳಕ್ಕೆ ಧಾವಿಸಿದರು. ಪ್ರಯಾಣಿಕರನ್ನು ರಕ್ಷಿಸಿ, ಧೈರ್ಯ ತುಂಬಿ, ಪ್ರಥಮ ಚಿಕಿತ್ಸೆ ನೀಡಿ, ಗಂಭೀರವಾಗಿ ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದರು.

ಇದು ನೈಜ ಅಪಘಾತವಲ್ಲ, ಅಣಕು ಪ್ರದರ್ಶನ!. ಹೌದು, ಇದು ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಗುರುವಾರ ನಗರದ ರೈಲು ನಿಲ್ದಾಣದಲ್ಲಿ ಯಶಸ್ವಿಯಾಗಿ ನಡೆಸಿದ ‘ಪೂರ್ಣ ಪ್ರಮಾಣದ ವಾರ್ಷಿಕ ವಿಪತ್ತು ನಿರ್ವಹಣಾ ಅಣಕು ಅಭ್ಯಾಸ’ದ ರೋಚಕ ದೃಶ್ಯ.

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ, ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ, ಜಿಲ್ಲಾಡಳಿತ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಮನ್ವಯದಲ್ಲಿ ನಡೆದ ಈ ಕ್ಷಿಪ್ರ ಕಾರ್ಯಾಚರಣೆ ನೆರೆದಿದ್ದ ಜನರನ್ನು ಬೆರಗಾಗುವಂತೆ ಮಾಡಿತು.

ಕಾರ್ಯಾಚರಣೆಯ ಪ್ರಮುಖ ಅಂಶ ಗಳು: ರೈಲು ಹಳಿ ತಪ್ಪಿ 3 ಬೋಗಿಗಳು ಜಖಂಗೊಂಡಂತೆ ದೃಶ್ಯವನ್ನು ಸೃಷ್ಟಿಸಲಾಗಿತ್ತು ಒಂದು ಬೋಗಿಗೆ ಬೆಂಕಿ, ಮತ್ತೊಂದು ಅದರ ಮೇಲೇರಿದ್ದ ದೃಶ್ಯವಿದ್ದ ಈ ಅವಘಡದಲ್ಲಿ 10 ಜನರಿಗೆ ಸಣ್ಣ ಗಾಯ, 10 ಮಂದಿಗೆ ಗಂಭೀರ ಗಾಯ ಹಾಗೂ 5 ಮಂದಿ ಮೃತಪಟ್ಟ ವಾತಾವರಣವನ್ನು ನಿರ್ಮಿಸಲಾಗಿತ್ತು.

ವಾಕಿಟಾಕಿ ಮೂಲಕ ಸಂಚಾರ ತಡೆದು ಮಾಹಿತಿ ರವಾನಿಸಿದ ಕೂಡಲೇ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಅಗ್ನಿಶಾಮಕ ದಳ, ಆರೋಗ್ಯ, ಪೊಲೀಸ್ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಜನರನ್ನು ನಿಯಂತ್ರಿಸಿ, ಪ್ರಯಾಣಿಕರ ವಸ್ತುಗಳ ಭದ್ರತೆ ನೋಡಿಕೊಂಡರು. ಯಂತ್ರದ ಮೂಲಕ ಕಿಟಕಿ ಕತ್ತರಿಸಿ ರಕ್ಷಣಾ ಪಡೆ ಪ್ರಯಾಣಿಕರನ್ನು ಹೊರಕರೆತಂದಿತು.

ಗಾಯಾಳುಗಳನ್ನು ಸ್ಟ್ರೆಚರ್ ಮೂಲಕ ತಾತ್ಕಾಲಿಕ ಟೆಂಟ್ಗೆ ತಂದು ಚಿಕಿತ್ಸೆ ನೀಡಲಾಯಿತು. ಆಕ್ಸಿಜನ್ ಮಾಸ್ಕ್ ಧರಿಸಿದ ಸಿಬ್ಬಂದಿ ಬೆಂಕಿಯಿದ್ದ ಬೋಗಿಗೆ ನುಗ್ಗಿ ಜನ ಹಾಗೂ ವಸ್ತುಗಳನ್ನು ರಕ್ಷಿಸಿ, ದಾಖಲಿಸಿ ವಾರಸುದಾರರಿಗೆ ಒಪ್ಪಿಸಿದರು. ಅಗ್ನಿಶಾಮಕ ದಳ ಫೋಮ್ ಸಿಂಪಡಿಸಿ ಬೆಂಕಿ ನಂದಿಸಿತು. ಹರಿಹರದ ‘ಎಂವೈಎಸ್ ಡಿವಿಜನ್ ಮಿನಿ ರೈಲು’ ಕ್ಷಣಾರ್ಧದಲ್ಲಿ ಸ್ಟ್ರೆಚರ್, ತುರ್ತು ವಸ್ತು ಹಾಗೂ ಕಟ್ಟಿಂಗ್ ಯಂತ್ರಗಳನ್ನು ಪೂರೈಸಿತು. ಬಳಿಕ ನಡೆದ ವಿಮರ್ಶಾ ಸಭೆಯಲ್ಲಿ ಸಂವಹನ, ಸಮನ್ವಯ, ರಕ್ಷಣಾ ವೇಗ ಮತ್ತು ವೈದ್ಯಕೀಯ ಸೇವೆ ಪರಿಶೀಲಿಸಲಾಯಿತು. ರೈಲ್ವೆ ಸಚಿವಾಲಯದ ಮಾರ್ಗಸೂಚಿಯಂತೆ ಸಾರ್ವಜನಿಕರ ಪ್ರಾಣ ಹಾಗೂ ಆಸ್ತಿ ನಷ್ಟ ತಡೆಯಲು ಈ ಅಭ್ಯಾಸ ನಡೆಸಲಾಗಿದೆ ಎಂದು ಪಿಆರ್ಒ ಪೃಥ್ವಿ ಎಸ್. ಹುಲ್ಲತ್ತಿ ತಿಳಿಸಿದರು.

ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಮುಖ್ಯ ಸುರಕ್ಷತಾ ಅಧಿಕಾರಿ ರಾಮಕೃಷ್ಣ, ಮುಖ್ಯ ಯಾಂತ್ರಿಕ ಎಂಜಿನಿಯರ್ ಬಾಲಸುಂದರ್ ಪಿ. ಮತ್ತು ಜಿಲ್ಲಾಡಳಿತದ ಪ್ರತಿನಿಧಿಗಳು ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-43-2135094930

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.