ಹರಿಹರ: ಭೂ ಮಾಪನಾ ಕಾರ್ಯ ನಡೆಯುವವರೆಗೆ ನಗರದ ಎಸ್.ಜೆ.ವಿ.ಪಿ. ಕಾಲೇಜಿನ ಹಿಂಭಾಗದಲ್ಲಿ ನಡೆಯುತ್ತಿರುವ ರಾಜಕಾಲುವೆಗೆ ಸಿಸಿ ಚರಂಡಿ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲು ನಿರ್ಣಯಿಸಲಾಯಿತು.

ಸೋಮವಾರ ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್ ಜಿ. ಅವರ ಸಮ್ಮುಖದಲ್ಲಿ ರಾಜ ಕಾಲುವೆ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

‘ಈ ಕಾಲುವೆಯ ಒತ್ತುವರಿಯಿಂದಾಗಿಯೇ ಬೆಂಕಿನಗರ, ಕಾಳಿದಾಸನಗರ, ನೀಲಕಂಠನಗರ ಹಾಗೂ ಇತರೆ ಬಡಾವಣೆಗಳಲ್ಲಿ ಮಳೆಗಾಲದ ಪ್ರವಾಹದ ನೀರು ನುಗ್ಗಿ ನಿವಾಸಿಗಳು ಮೂರ್ನಾಲ್ಕು ವರ್ಷಗಳಿಂದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವ ದುಃಸ್ಥಿತಿ ನಿರ್ಮಾಣವಾಗಿದೆ’ ಎಂದು ರಾಜ ಕಾಲುವೆ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಅಳಲು ತೋಡಿಕೊಂಡರು.

‘ಈಗ ಸಿಸಿ ಚರಂಡಿ ನಿರ್ಮಿಸುವ ಮೂಲಕ ಕಾಲುವೆಯನ್ನೇ ಅಧಿಕೃತವಾಗಿ ಕಿರಿದಾಗಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಸಣ್ಣ ನೀರಾವರಿ ಇಲಾಖೆಯ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ. ಈ ಕಾಮಗಾರಿಯಿಂದಾಗಿ ನಗರದ ಇನ್ನಷ್ಟು ಬಡಾವಣೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗಿ ನಿವಾಸಿಗಳನ್ನು ಸಂತ್ರಸ್ಥರನ್ನಾಗಿಸುತ್ತದೆ’ ಎಂದು ದೂರಿದರು.

‘ಯಾವುದೇ ಕಾರಣಕ್ಕೂ ಈಗ ನಡೆಯುತ್ತಿರುವ ಕಾಮಗಾರಿಯನ್ನು ಮುಂದುವರಿಸಬಾರದು. ಶತಮಾನಗಳಿಂದ ಪ್ರಕೃತಿದತ್ತವಾಗಿ ಮಳೆ ನೀರು ಹಾಗೂ ಜಮೀನುಗಳ ಬಸಿ ನೀರು ಹರಿದು ಹೋಗುವ ಮಾರ್ಗಕ್ಕೆ ಯಾವುದೇ ಅಡ್ಡಿ, ಆತಂಕ ಸೃಷ್ಟಿಸಬಾರದು’ ಎಂದರು.

‘ರಾಜ ಕಾಲುವೆ ಹರಿದು ಹೋಗುವ ಮಾರ್ಗವನ್ನು ಭೂ ಮಾಪಕರಿಂದ ಮಾರ್ಚ್ 18ರಂದು ಅಳತೆ ಮಾಡಿಸೋಣ. ಅಲ್ಲಿವರೆಗೆ ಕಾಮಗಾರಿ ಸ್ಥಗಿತಗೊಳಿಸಿ. ಅಳತೆ ಮಾಡುವಾಗ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ರಾಜ ಕಾಲುವೆ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಹಾಜರಿರಬೇಕು’ ಎಂದು ತಹಶೀಲ್ದಾರ್ ಸೂಚಿಸಿದರು.

ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಟಿ.ಜೆ.ಮುರುಗೇಶಪ್ಪ, ಎಂ.ಎಸ್.ಬಾಬುಲಾಲ್, ಐರಣಿ ಹನುಮಂತಪ್ಪ, ಬಿ.ಮಗ್ದುಮ್, ರಮೇಶ್ ಮಾನೆ, ಪ್ರೀತಮ್ ಬಾಬು, ಜಫ್ರುಲ್ಲಾ ಕನವಳ್ಳಿ, ಇಮ್ತಿಯಾಜ್ ಜಲಾಲ್, ನೂರುಲ್ಲಾ ಪಟೇಲ್, ಅಣ್ಣಪ್ಪ ಅಜ್ಜೇರ್, ನಜೀರ್ ಹುಸೇನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260317-43-380305942

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.