ಹರಿಹರ: ನಗರದ ನಾಗರಿಕರಿಂದ ಹಲವು ಸಂದರ್ಭಗಳಲ್ಲಿ ಟೀಕೆಗೆ ಒಳಗಾಗುವ ನಗರಸಭೆಯವರು, ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆ ಬದಿ ಸಂಗ್ರಹವಾಗಿದ್ದ ಮಣ್ಣು ತೆರವುಗೊಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಗರದಲ್ಲಿ ಹಾದು ಹೋಗಿರುವ ಬೀರೂರು-ಸಮ್ಮಸಗಿ (ಹಳೆ ಪಿ.ಬಿ.ರಸ್ತೆ) ಹಾಗೂ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಗಳ ಡಿವೈಡರ್ಗಳ ಪಕ್ಕದಲ್ಲಿ ವರ್ಷದಿಂದ ಶೇಖರವಾಗಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ವಾರದಿಂದ ನಡೆಯುತ್ತಿದೆ.

ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯ ಎಲ್ಐಸಿ ಕಚೇರಿಯಿಂದ ಎಂಕೆಇಟಿ ಶಾಲೆವರೆಗಿನ ಡಿವೈಡರ್ ಹಾಗೂ ಬೀರೂರು-ಸಮ್ಮಸಗಿ ಹೆದ್ದಾರಿಯ ರೈಲ್ವೆ ಫ್ಲೈಓವರ್ನಿಂದ ಬೆಸ್ಕಾಂ ಕಚೇರಿವರೆಗಿನ ಡಿವೈಡರ್ನ ಎರಡೂ ಬದಿಯ ಮಣ್ಣನ್ನು ಬಹುತೇಕ ತೆರವುಗೊಳಿಸಲಾಗಿದೆ.

ವಾಹನಗಳು ಸಂಚರಿಸುವಾಗ ದೂಳು ಏಳುವುದು ಹಾಗೂ ಮಳೆ ಬಂದಾಗ ರಸ್ತೆ ತುಂಬಾ ಮಣ್ಣು ಹರಡಿ ವಾಹನ ಸಂಚಾರಕ್ಕೆ ಕಂಕಟ ಎದುರಾಗುತ್ತಿತ್ತು. ಈ ಮಣ್ಣನ್ನು ಸಾಗಣೆ ಮಾಡಿರುವುದರಿಂದ ಈ ಸಮಸ್ಯೆ ಬಹುತೇಕ ನಿವಾರಣೆಯಾದಂತಾಗಿದೆ.

ದೂಳು ನಿಯಂತ್ರಣ ಯಂತ್ರ ಬರಲಿದೆಯೆ?: ಆರು ವರ್ಷಗಳ ಹಿಂದೆ ಅಂದಾಜು ₹20 ಲಕ್ಷ ವೆಚ್ಚದಲ್ಲಿ ರಸ್ತೆ ಬದಿಯ ದೂಳು ಸಂಗ್ರಹಿಸಿ ಸಾಗಿಸುವ ಯಂತ್ರವನ್ನು ನಗರಸಭೆ ಖರೀದಿ ಮಾಡಿತ್ತು. ಆರೇಳು ತಿಂಗಳು ಬಳಸಿ ಅದನ್ನು ಮೂಲೆಯಲ್ಲಿ ಇಡಲಾಗಿತ್ತು. ಈ ಯಂತ್ರದ ಬಳಕೆ ಮತ್ತೆ ಆರಂಭಿಸಿದರೆ ಡಿವೈಡರ್ ಪಕ್ಕದ ಮಣ್ಣನ್ನು ಸಾಗಿಸುವ ಪೌರ ಕಾರ್ಮಿಕರ ಶ್ರಮದ ಉಳಿತಾಯವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-43-37880683

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.