ಹರಿಹರ: ಪದಚ್ಯುತಿಗೊಂಡಿರುವ ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ನಂಬಿಕೆ ದ್ರೋಹ, ಮೋಸ ಮಾಡಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗುರುಪೀಠದ ಪ್ರಧಾನ ಧರ್ಮದರ್ಶಿ ಡಿ.ಸಿ ಉಮಾಪತಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಏ. 13ರಂದು ಗುರುಪೀಠದಲ್ಲಿ ನಡೆದಿದ್ದ ಟ್ರಸ್ಟಿನ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಶ್ರೀಗಳನ್ನು ಪದಚ್ಯುತಗೊಳಿಸಲಾಗಿದೆ. ಅವರ ಮೇಲಿರುವ ಆರೋಪಗಳನ್ನು ಆಧರಿಸಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

‘ಟ್ರಸ್ಟಿಯೊಬ್ಬರು ದೂರು ನೀಡಿದ್ದು, ಅದನ್ನು ಪರಿಶೀಲಿಸಬೇಕಿದೆ. ದೂರಿನಲ್ಲಿ ವಿವರಿಸಿರುವ ಅಂಶಗಳು ವಾಸ್ತವವಾಗಿದ್ದರೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಎಫ್ಐಆರ್ ದಾಖಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಕ್ತರ ಕಾವಲು: ಏ. 19ರಂದು ಶ್ರೀಗಳನ್ನು ಟ್ರಸ್ಟ್ ಸಮಿತಿ ಪದಚ್ಯುತಗೊಳಿಸಿದೆ. ಅಂದಿನಿಂದ ಶ್ರೀಗಳ ಪರವಾದ ಸಮುದಾಯದ ಭಕ್ತರ ಗುಂಪು ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಗುರುಪೀಠದಲ್ಲಿ ಕಾವಲು ಕಾಯುತ್ತಿದೆ.

ಸಭೆ ನಡೆಸಿ ಪದಚ್ಯುತಿ ನಿರ್ಣಯ ಕೈಗೊಂಡ ಟ್ರಸ್ಟಿಗಳು ಹಾಗೂ ಟ್ರಸ್ಟ್ ಪರವಾಗಿರುವವರು ಮಠದ ಕಡೆಗೆ ಬಂದಿಲ್ಲ. ಟ್ರಸ್ಟಿನ ಕಡೆಯವರು ಬಂದು ಶ್ರೀಗಳನ್ನು ಗುರುಪೀಠದಿಂದ ಹೊರಕ್ಕೆ ಕಳಿಸಬಾರದು ಎಂಬ ಉದ್ದೇಶದಿಂದ ಕೆಲವು ಭಕ್ತರ ಗುಂಪು ಕಾವಲು ಕಾಯುತ್ತಿದೆ.

ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಜಿಲ್ಲಾ ಸಶಸ್ತ್ರ ಪಡೆ ಗುರುಪೀಠದಲ್ಲೆ ಬಿಡಾರ ಹೂಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-43-1800528511

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.