ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭರಮಸಾಗರ: ಹರಿಕಥಾ ಕೀರ್ತನೆ ಕಾರ್ಯಕ್ರಮ

Published : 10 ಸೆಪ್ಟೆಂಬರ್ 2024, 13:29 IST
Last Updated : 10 ಸೆಪ್ಟೆಂಬರ್ 2024, 13:29 IST
ಫಾಲೋ ಮಾಡಿ
Comments

ಭರಮಸಾಗರ: ‘ಆರ್ಕೆಸ್ಟ್ರಾ, ನೃತ್ಯ ಕಾರ್ಯಕ್ರಮಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಗಣೇಶೋತ್ಸವ ಸಮಾರಂಭದಲ್ಲಿ ಹರಿಕಥೆ, ಭಜನೆ ಕಾರ್ಯಕ್ರಮಗಳ ಆಯೋಜನೆಗೆ ಯುವಕರು ಮುಂದಾಗುತ್ತಿರುವುದು ಶ್ಲಾಘನೀಯ’ ಎಂದು ಶಿಕ್ಷಕ ವಿ. ರಾಜು ಇಜಾರಿ ಹೇಳಿದರು.

ಗ್ರಾಮದ ಎಸ್‌ಜೆಎಂ ಬಡಾವಣೆಯ ಹಿಂದೂ ಸನಾತನ ಸಾಮ್ರಾಜ್ಯ ಸಮಿತಿ ಗಣಪತಿ ಉತ್ಸವದ ಅಂಗವಾಗಿ ಸೋಮವಾರ ರಾತ್ರಿ ಆಯೋಜಿಸಿದ್ದ ‘ಹರಿಕಥೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಧುನಿಕತೆ ಪ್ರಭಾವದಿಂದ ನಮ್ಮ ಗ್ರಾಮೀಣ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನೇಪಥ್ಯಕ್ಕೆ ಸರಿಯುತ್ತಿವೆ. ಇದನ್ನು ಉಳಿಸಿ ಬೆಳೆಸುವುದು ಅಗತ್ಯ’ ಎಂದು ಅಭಿಪ್ರಾಯಪಟ್ಟರು.

ಶಿವಮೊಗ್ಗ ವಿದ್ಯಾನಗರದ ಧರ್ಮರಕ್ಷಕ ಶನೇಶ್ವರಸ್ವಾಮಿ ದೇವಾಲಯದ ಕೀರ್ತನಕಾರ ಮಂಜುನಾಥಸ್ವಾಮಿ, ‘ಭೂಕೈಲಾಸ’ ಪ್ರಸಂಗ ಕುರಿತು ಹರಿಕಥೆ ನಡೆಸಿಕೊಟ್ಟರು. ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಚಂದ್ರಶೇಖರ್, ಹಿಂದೂ ಸನಾತನ ಸಾಮ್ರಾಜ್ಯ ಸಮಿತಿ ಪದಾಧಿಕಾರಿಗಳು, ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT