ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

510 ಜನರ ಆರೋಗ್ಯ ತಪಾಸಣೆ

Published 24 ಮೇ 2023, 13:25 IST
Last Updated 24 ಮೇ 2023, 13:25 IST
ಅಕ್ಷರ ಗಾತ್ರ

ಹರಿಹರ: ನಗರದ ತಹಶೀಲ್ದಾರ್ ಕಚೇರಿಯ ಪಕ್ಕದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಡಾ.ಶೈಲೇಶ್ ಕುಮಾರ್ ಫೌಂಡೇಶನ್, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಬೃಹತ್ ಉಚಿತ ಆರೋಗ್ಯ ತಪಾಸಣೆ, ಸಲಹಾ ಶಿಬಿರ ನಡೆಸಲಾಯಿತು.

ಶಿಬಿರದಲ್ಲಿ 510 ರೋಗಿಗಳು ಭಾಗವಹಿಸಿದ್ದರು. 60 ಜನರಿಗೆ ಸಕ್ಕರೆ ಕಾಯಿಲೆಗಾಗಿ ರಕ್ತ ಪರೀಕ್ಷೆ, 60 ಜನರಿಗೆ ಕ್ಯಾನ್ಸರ್‌ಗಾಗಿ ಸ್ತನ, ಎದೆ, ಹೊಟ್ಟೆ ಭಾಗದ ಪರೀಕ್ಷೆ, ನರ ಸಂಬಂಧಿ ಕಾಯಿಲೆ ಕುರಿತು 350 ಜನರು ವಿವಿಧ ಪರೀಕ್ಷೆಗೆ ಒಳಪಟ್ಟರು ಎಂದು ಡಾ.ಶೈಲೇಶ್ ಕುಮಾರ್ ಫೌಂಡೇಷನ್‌ನ ಮುಖ್ಯಸ್ಥ ಹಾಗೂ ನರರೋಗ ಶಸ್ತ್ರ ಚಿಕಿತ್ಸಕ ಡಾ.ಬಿ.ಎಸ್. ಶೈಲೇಶ್ ಕುಮಾರ್ ತಿಳಿಸಿದರು.

ಬೆಂಗಳೂರು ಕಿದ್ವಾಯಿ ಮೆಮೊರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಅಂಕಾಲಜಿ ಸಂಸ್ಥೆಯ ನಿರ್ದೇಶಕ ಡಾ.ವಿ. ಲೋಕೇಶ್, ವಿವಿಧ ತಜ್ಞ ವೈದ್ಯರಾದ ಡಾ.ಮಹಾಂತೇಶ್ ಎ.ಎಸ್., ಡಾ.ರಮ್ಯಾ ಕೃಷ್ಣ, ಡಾ.ಅಮಿತ್, ಡಾ.ಊರ್ವಶಿ, ಡಾ.ಪ್ರಶಾಂತ್, ವಿವಿಧ ತಂತ್ರಜ್ಞರಾದ ದೀಪ್ತಿ, ನಾಗಮ್ಮ, ಭಾರತಿ, ರಾಜಣ್ಣ, ಕೃಷ್ಣಮೂರ್ತಿ, ಭೀಮಾ ರೆಡ್ಡಿ, ಸುಭದ್ರಮ್ಮ, ಆಶಾ ರಾಣಿ, ಮೇಘಾ ಪಿ.ಎಸ್., ಚಂದ್ರಕಲಾ, ಅಂಕಿತಾ ಎಂ.ಎನ್., ನಾಹಿದಾ, ಸ್ಪಂದನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT