ದಾವಣಗೆರೆ: ‘ಎಲ್ಲರಿಗೂ ಸಮವಸ್ತ್ರ ಧರಿಸುವ ಭಾಗ್ಯ ಸಿಗುವುದಿಲ್ಲ. ಆದರೆ, ಪೊಲೀಸರಿಗೆ ಸಹವರ್ತಿಯಾಗಿ ಕೆಲಸ ಮಾಡುವ ಸೌಭಾಗ್ಯ ಗೃಹ ರಕ್ಷಕರಿಗೆ ದೊರೆತಿದೆ. ಶಿಸ್ತು ಮೈಗೂಡಿಸಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ನೀವೂ ಭಾಗಿಯಾಗಬೇಕು’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.

ಇಲ್ಲಿನ ದೇವರಾಜ ಅರಸು ಬಡಾವಣೆಯ ಸಿ ಬ್ಲಾಕ್ನ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಅಖಿಲ ಭಾರತ ಗೃಹ ರಕ್ಷಕದಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ವ್ಯವಸ್ಥೆಯಲ್ಲಿ ನಾವಿಲ್ಲದಿದ್ದರೂ ನಮ್ಮ ಜಾಗವನ್ನು ಬೇರೆಯವರು ತುಂಬಿಕೊಂಡು ನಡೆಸಿಕೊಂಡು ಹೋಗುತ್ತಾರೆ. ಆದರೆ, ನಾವು ಇಲ್ಲದ ಕುಟುಂಬಕ್ಕೆ ನಮ್ಮ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಯಾವುದೇ ವ್ಯಕ್ತಿಗೆ ಸೂರು, ಹೊಟ್ಟೆ, ಬಟ್ಟೆ, ಆರೋಗ್ಯ ಮತ್ತು ಶಿಕ್ಷಣ ಮುಖ್ಯ. ಹಾಗಾಗಿ ನೀವು ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಕುಟುಂಬದ ರಕ್ಷಣೆಯನ್ನೂ ಸರಿಯಾಗಿ ನಿಭಾಯಿಸಬೇಕು’ ಎಂದು ಗೃಹರಕ್ಷಕರಿಗೆ ಸಲಹೆ ನೀಡಿದರು.

‘ನೀವು ಒಳ್ಳೆಯ ಅಭ್ಯಾಸ, ಒಳ್ಳೆಯ ಆಹಾರ ಪದ್ಧತಿ ಮತ್ತು ವ್ಯಾಯಾಮ ರೂಢಿಸಿಕೊಂಡು ಆರೋಗ್ಯಕರ ಜೀವನ ನಡೆಸಬೇಕು. ನೀವು ಅಕಾಲಿಕ ಮರಣಕ್ಕೆ ತುತ್ತಾದರೂ ಮುಂದಿನ 10 ವರ್ಷ ನಿಮ್ಮ ಕುಟುಂಬಕ್ಕೆ ಯಾವುದೇ ತೊಂದರೆಯಾಗದಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ ವಿಮೆ ಮಾಡಿಸಿ ಕುಟುಂಬಕ್ಕೆ ಭದ್ರತೆ ಒದಗಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಮಹಾನಗರ ಪಾಲಿಕೆಯಲ್ಲಿ ಅವಶ್ಯವಿರುವ ವಿವಿಧ ಕೆಲಸಗಳಿಗೆ ಕೆಲ ಸಿಬ್ಬಂದಿಯನ್ನು ನೇಮಕ ಮಾಡುವ ಚಿಂತನೆ ಇದ್ದು, ಈ ವೇಳೆ ಗೃಹ ರಕ್ಷಕರನ್ನೂ ಪರಿಗಣಿಸಲಾಗುವುದು. ಅವಶ್ಯಕತೆ ಇರುವ ಕಡೆ ಗೃಹ ರಕ್ಷಕರನ್ನು ತೆಗೆದುಕೊಳ್ಳಬೇಕೆಂದು ಗೃಹ ರಕ್ಷಕ ದಳದ ಜಿಲ್ಲಾ ಕಮಾಡೆಂಟ್ ಮನವಿ ಮಾಡಿದ್ದು, ಪಾಲಿಕೆಯ ಕೆಲಸಗಳಿಗೆ ಶೀಘ್ರದಲ್ಲಿಯೇ ಗೃಹ ರಕ್ಷಕರನ್ನು ನಿಯೋಜಿಸಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

‘ಕುಟುಂಬಕ್ಕಾಗಿ ನಿಮ್ಮ ದುಡಿಮೆಯ ಸಣ್ಣ ಪಾಲನ್ನು ತೆಗೆದಿಡಬೇಕು. ಪ್ರಾಣದ ಹಂಗು ತೊರೆದು ಕೆಲಸ ಮಾಡುವ ಗೃಹ ರಕ್ಷಕರಿಗೆ ಸಮವಸ್ತ್ರದ ಬಗ್ಗೆ ಹೆಮ್ಮೆ ಇದೆ. ಅವಶ್ಯಕತೆ ಇರುವ ಕಡೆಗಳಲ್ಲಿ ಭದ್ರತಾ ಸಿಬ್ಬಂದಿಯನ್ನಾಗಿ ಗೃಹ ರಕ್ಷಕರನ್ನು ನೇಮಿಸಕೊಳ್ಳಬೇಕು’ ಎಂದು ಗೃಹ ರಕ್ಷಕ ದಳದ ಜಿಲ್ಲಾ ಕಮಾಡೆಂಟ್ ಎಸ್.ಎಚ್. ಸುಜಿತ್ ಕುಮಾರ್ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠಲರಾವ್, ಎಎಸ್ಪಿ ಪರಮೇಶ್ವರ ಹೆಗಡೆ ಉಪಸ್ಥಿತರಿದ್ದರು. ದೇವರಾಜ ಸಂಗೇನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.