ಹರಿಹರ: ತಾಲ್ಲೂಕಿನ ಹೊಳೆಸಿರಿಗೆರೆ ಗ್ರಾಮದ ಸೋಮೇಶ್ವರಿ ದೇವಸ್ಥಾನದ ನವೀಕರಣ, ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭ ಏ. 27ರಿಂದ ಆರಂಭವಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಚೌಡಪ್ಪ ಮೇಗಳಮನೆ ತಿಳಿಸಿದರು.

ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬಲ್ಲೂರಿನ ಆಂಜನೇಯ ಸ್ವಾಮಿ, ದುರ್ಗಮ್ಮ ದೇವಿ, ಎಳೆಹೊಳೆಯ ಮರದಮ್ಮ ದೇವಿ, ಕುಂಬಳೂರಿನ ದುರ್ಗಮ್ಮ ದೇವಿ, ಭಾನುವಳ್ಳಿಯ ದುರ್ಗಮ್ಮ ದೇವಿ, ಹೊಳೆ ಸಿರಿಗೆರೆಯ ಬುಳ್ಳಾಪುರ ದುರ್ಗಮ್ಮ ದೇವಿಯರನ್ನು ಸಕಲವಾದ್ಯಗಳೊಂದಿಗೆ ಪೂರ್ಣ ಕುಂಭದ ಮೆರವಣಿಗೆ ಮೂಲಕ ಕರೆತರಲಾಯಿತು.

ಏ. 28ರಂದು ಸೋಮೇಶ್ವರ ದೇವಸ್ಥಾನದ ನವೀಕರಣ ಹಾಗೂ ದೇವಿಯ ಪುನಃ ಪ್ರಾಣ ಪ್ರತಿಷ್ಠಾಪನೆ, ಕಳಸ ಪ್ರತಿಷ್ಠಾಪನೆಯನ್ನು ರಟ್ಟಿಹಳ್ಳಿಯ ಕಬ್ಬಿಣ ಕಂತಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ನೆರವೇರಿಸುವರು. ಮಠದ ವಟುಗಳು ಹಾಗೂ ಚರಂತಿಮಠದ ವೇದಮೂರ್ತಿ ಮುರುಗೇಂದ್ರಯ್ಯ ಶ್ರೀಗಳ ನೇತೃತ್ವದಲ್ಲಿ ಸೋಮೇಶ್ವರಿ ದೇವಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಭಾಗವಹಿಸುವರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-43-1414176071

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.