ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಕಳವು: ಒಬ್ಬನ ಸೆರೆ, ₹ 6.60 ಲಕ್ಷ ಮೌಲ್ಯದ ಆಭರಣ ವಶ

Last Updated 25 ಅಕ್ಟೋಬರ್ 2021, 4:17 IST
ಅಕ್ಷರ ಗಾತ್ರ

ಚನ್ನಗಿರಿ: ಕೆಲಸಕ್ಕೆಂದು ಸೇರಿ ಮನೆಯ ಒಡೆವೆಗಳನ್ನು ಕದ್ದುಕೊಂಡು ಪರಾರಿ ಆಗಿದ್ದ ಆರೋಪಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹ 6.60 ಲಕ್ಷ ಮೌಲ್ಯದ 132 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕೋಲಾರ ನಿವಾಸಿ ವಿಜಯ್‌ ಬಂಧಿತ ಆರೋಪಿ. ಚನ್ನಗಿರಿ ಕಣದಸಾಲು ನಿವಾಸಿ ಕೆ.ಎಚ್‌. ಶಿವಮೂರ್ತಿ ಅವರು ಚನ್ನಗಿರಿ ವಿ.ಆರ್. ಬಡಾವಣೆಯಲ್ಲಿ ಕುರಿ ಫಾರ್ಮ್‌ ಹೌಸ್‌ ಅನ್ನು ನಡೆಸುತ್ತಿದ್ದಾರೆ. ಅವರು ಯೂಟ್ಯೂಬ್‌ ಮೂಲಕ ಅದರ ಪ್ರಚಾರ ಮಾಡಿದ್ದರು. ಇದನ್ನು ನೋಡಿದ್ದ ವಿಜಯ್‌ ಕರೆ ಮಾಡಿದ್ದ. ಹೈನುಗಾರಿಕೆಯಲ್ಲಿ ಐದು ವರ್ಷದ ಅನುಭವ ಇದೆ. ಕೆಲಸಕ್ಕೆ ಬರುವುದಾಗಿ ತಿಳಿಸಿದ್ದ ಅದರಂತೆ ಅ.1ರಂದು ಕೆಲಸಕ್ಕೆ ಸೇರಿಕೊಂಡಿದ್ದ.

ಅ.7ರಂದು ಸಂಜೆ ಆರೋಪಿ ವಿಜಯ್‌ ಟಿ ಕುಡಿಯಲೆಂದು ಫಾರ್ಮ್‌ ಹೌಸ್‌ನಿಂದ ಮಾಲೀಕರ ಮನೆಗೆ ಬಂದಿದ್ದ. ಶಿವಮೂರ್ತಿ ಅವರ ಪತ್ನಿ ಟಿ ನೀಡಿದ್ದರು. ಬಳಿಕ ಒಣ ಹಾಕಿದ್ದ ಬಟ್ಟೆ ತರಲು ಎಂದು ಮನೆಯ ಮಹಡಿ ಮೇಲೆ ಹೋಗಿದ್ದರು. ಇದೇ ಹೊತ್ತಲ್ಲಿ ಬಿರುವಿನಲ್ಲಿದ್ದ ₹ 8.2 ಲಕ್ಷ ಮೌಲ್ಯದ ಚಿನ್ನಾಭರಣ, ₹ 20 ಸಾವಿರ ನಗದು ಕಳವು ಮಾಡಿಕೊಂಡು ಪರಾರಿ ಆಗಿದ್ದ. ಈ ಬಗ್ಗೆ ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಚನ್ನಗಿರಿ ಉಪ ವಿಭಾಗಾಧಿಕಾರಿ ಸಂತೋಷ ಕೆ.ಎಂ., ಇನ್‌ಸ್ಪೆಕ್ಟರ್‌ ಮಧು ಪಿ.ಬಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ತಂಡದಲ್ಲಿ ಪಿಎಸ್‌ಐ ಚಂದ್ರಶೇಖರ್‌, ಅಪರಾಧ ವಿಭಾಗದ ಸಿಬ್ಬಂದಿ ರುದ್ರೇಶ್‌, ರೇವಣಸಿದ್ದಪ್ಪ, ಪ್ರವೀಣ್‌ ಗೌಡ, ಮಂಜುನಾಥ ಪ್ರಸಾದ್‌, ರೇವಣ ಸಿದ್ದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT