ಹೊನ್ನಾಳಿ: ಪಟ್ಟಣದ ದೊಡ್ಡಕೇರಿಯಲ್ಲಿರುವ ಬೀರಲಿಂಗೇಶ್ವರ ದೇವರ ನೂತನ ದೇವಸ್ಥಾನ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಸೋಮವಾರ ನೂತನ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕುರುಬರ ಆರಾಧ್ಯ ದೈವ ಬೀರದೇವರ ಪವಾಡ ಎಲ್ಲೆಡೆ ನಡೆಯುತ್ತಿದೆ. ಸಮುದಾಯ ಬೀರಪ್ಪ ದೇವರನ್ನು ನಂಬಿಕೊಂಡು ಬದುಕುತ್ತಿದೆ. ನೂರಾರು ವರ್ಷಗಳಿಂದ ಇದ್ದ ಹಳೆಯ ದೇವಾಲಯ ಕಟ್ಟಡವನ್ನು ತೆರವುಗೊಳಿಸಿ ನೂತನ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು, ದೇವರ ಆರ್ಶೀರ್ವಾದ ಎಲ್ಲರ ಮೇಲೂ ಇರಲಿ ಎಂದರು.

‘ಹಳೆಯ ಕಟ್ಟಡವನ್ನು ತೆರವುಗೊಳಿಸಿ ಆಧುನಿಕ ಶೈಲಿಯ ದೇವಾಲಯವನ್ನು ಕಟ್ಟಬೇಕು ಎಂದು ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಹೊಸ ದೇವಸ್ಥಾನ ನಿರ್ಮಾಣಕ್ಕೆ ಅಂದಾಜು ₹ 2.10 ಕೋಟಿ ವೆಚ್ಚದಲ್ಲಿ ನಕ್ಷೆ ತಯಾರಿಸಲಾಗಿದೆ. ಅನ್ನಪೂಣೇಶ್ವರಿ ಶಿಲ್ಪಕಲಾ ಮುರುಡೇಶ್ವರದ ಶಿಲ್ಪಿಯವರಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಕೊಡಲಾಗಿದೆ. ಒಂದೂವರೆ ವರ್ಷದೊಳಗೆ ದೇವಸ್ಥಾನವನ್ನು ನಿರ್ಮಿಸಿಕೊಡಬೇಕು ಎಂದು ಒಪ್ಪಂದವಾಗಿದೆ ಎಂದು ರಾಜ್ಯ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಬಿ. ಮಂಜಪ್ಪ ತಿಳಿಸಿದರು.

ಶಾಸಕ ಡಿ.ಜಿ. ಶಾಂತನಗೌಡ ಅವರು ತಮ್ಮ ವಿವೇಚನಾ ಕೋಟಾದಡಿ ₹ 20 ಲಕ್ಷ ಅನುದಾನವನ್ನು ಕೊಟ್ಟಿದ್ದಾರೆ. ಇನ್ನೂ ₹ 20 ಲಕ್ಷ ಅನುದಾನ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದೇವೆ. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೂ ಬೇಡಿಕೆ ಇಟ್ಟಿದ್ದು, ಅವರೂ ದೇಣಿಗೆ ನೀಡುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಅವರನ್ನೂ ಭೇಟಿ ಮಾಡಿ ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮುಖಂಡರಾದ ಎಚ್.ಬಿ. ಗಿಡ್ಡಪ್ಪ, ಗೌಡರ ಗಾಳೇಶಪ್ಪ, ಬುದ್ಧಿವಂತರ ನರಸಿಂಹಪ್ಪ, ದೇವರ ಗಣಮಗ ಅಣ್ಣಪ್ಪಸ್ವಾಮಿ, ಎಚ್.ಡಿ. ವಿಜೇಂದ್ರಪ್ಪ, ಎನ್.ಕೆ. ಆಂಜನೇಯ, ಮಾಜಿ ಸೈನಿಕ ಎಂ. ವಾಸಪ್ಪ, ಎಚ್.ಬಿ. ಅಣ್ಣಪ್ಪ, ಮಾದಪ್ಪ, ಕಾಟ್ಯಾ ಕುಮಾರ್, ಕಾಳಿಂಗಪ್ಪ, ಪೊಲೀಸ್ ಸಿಬ್ಬಂದಿ ಕವಳಿ ಮಂಜಪ್ಪ, ಉಮೇಶ್ ಸೇರಿದಂತೆ ಹಲವರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-43-750662486

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.