ಹೊನ್ನಾಳಿ: ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಭಾನುವಾರ ಆಂಜನೇಯ ಸ್ವಾಮಿ ಮಹಾ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.

ನಾಲ್ಕು ದಿನಗಳಿಂದ ಕಂಕಣಧಾರಣೆ, ಉಚ್ಛಾಯ (ಸಣ್ಣತೇರು), ಅಶ್ವೋತ್ಸವ, ಧೂಳೋತ್ಸವ, ಗಜೋತ್ಸವ ನಡೆದವು. ಚೈತ್ರ ಶುದ್ಧ ಸಪ್ತಮಿಯಂದು ಬ್ರಾಹ್ಮಿ ಮುಹೂರ್ತದಲ್ಲಿ ಮಹಾ ರಥೋತ್ಸವ ನಡೆಯಿತು. ಸಾಮೂಹಿಕ ವಿವಾಹದಲ್ಲಿ 4 ಜೋಡಿಗಳು ವಿವಾಹವಾದವು. ಜವಳ, ಮುದ್ರೆ, ಬೆಲ್ಲದ ಬಂಡಿ ಮತ್ತು ಉರುಳುಸೇವೆ, ಭೂತನ ಸೇವೆ ಕಾರ್ಯಕ್ರಮಗಳು ಜರುಗಿದವು.

ಶ್ರೀ ಆಂಜನೇಯ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಸಮಿತಿಯ ಪದಾಧಿಕಾರಿಗಳು ಜಾತ್ರಾ ಮಹೋತ್ಸವದಲ್ಲಿ ಹಾಜರಿದ್ದರು.

ಸೂರಗೊಂಡನಕೊಪ್ಪ (ನ್ಯಾಮತಿ): ಗ್ರಾಮದೇವತೆ ಬನಶಂಕರಿ ರಥೋತ್ಸವ ಶನಿವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಬೆಳಿಗ್ಗೆ ಬನಶಂಕರಿ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು. ನಂತರ ಉತ್ಸವ ಮೂರ್ತಿಯನ್ನು ಅಲಂಕೃತಗೊಂಡ ರಥದಲ್ಲಿ ಭಕ್ತರ ಜಯಘೋಷದೊಂದಿಗೆ ಪ್ರತಿಷ್ಠಾಪನೆ ಮಾಡಲಾಯಿತು. ರಥಗಾಲಿ ಪೂಜೆ ನೆರವೇರಿದ ನಂತರ ಭಕ್ತರು ಬನಶಂಕರಿಗೆ ಜಯವಾಗಲಿ ಎಂಬ ಘೋಷಣೆಯೊಂದಿಗೆ ಮಂಗಳವಾದ್ಯಗಳೊಂದಿಗೆ ರಥವನ್ನು ಎಳೆದರು.

ರಥೋತ್ಸವದಲ್ಲಿ ಉತ್ಸವಮೂರ್ತಿ ಬನಶಂಕರಿ, ಗಿರಿಸಿದ್ದಪ್ಪ, ಸಿದ್ದೇಶ್ವರಸ್ವಾಮಿ, ಮಾತಂಗ್ಯಮ್ಮ, ಮಲ್ಲಾಪುರದ ಬಸವಣ್ಣ, ಮಾಚಿಗೊಂಡನಹಳ್ಳಿ ಆಂಜನೇಯಸ್ವಾಮಿ, ಮಾದಾಪುರ ತಿಮ್ಮಪ್ಪಸ್ವಾಮಿ, ಹಳೇಜೋಗದ ಬಸವಣ್ಣ ದೇವರುಗಳು ಪಾಲ್ಗೊಂಡಿದ್ದರಿಂದ ರಥೋತ್ಸವಕ್ಕೆ ಮೆರುಗು ಬಂದಿತು.

ಹರಕೆ ಹೊತ್ತ ಭಕ್ತರು ರಥಕ್ಕೆ ಮಂಡಕ್ಕಿ, ಬಾಳೆಹಣ್ಣು, ಮೆಣಸು ಎರಚುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು. ಗ್ರಾಮಸ್ಥರು ಹಣ್ಣು ಕಾಯಿ, ಅರ್ಪಿಸಿದರು.

ಸಂಜೆ ಓಕಳಿಯೊಂದಿಗೆ ರಥೋತ್ಸವ ಸಂಪನ್ನಗೊಂಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-43-582918451

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.