ಹೊನ್ನಾಳಿ: ‘ರೈತರಿಗೆ ವಿದ್ಯುತ್ ಪರಿವರ್ತಕಗಳನ್ನು (ಟಿ.ಸಿ) ಹೊನ್ನಾಳಿಯಲ್ಲಿಯೇ ವಿತರಿಸಬೇಕು. ಹರಿಹರದ ಕಚೇರಿಗೆ ಅಲೆದಾಡಿಸಿದರೆ ಸುಮ್ಮನಿರುವುದಿಲ್ಲ’ ಎಂದು ಬೆಸ್ಕಾಂ ಇಇಗೆ ಶಾಸಕ ಡಿ.ಜಿ. ಶಾಂತನಗೌಡ ಎಚ್ಚರಿಸಿದರು.

ಸೋಮವಾರ ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ನಡೆದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

‘ಬಡ ರೈತರು ಹರಿಹರಕ್ಕೆ ಬಂದು ಹೋಗುವುದು ಕಷ್ಟ. ಆದ್ದರಿಂದ ಈಗಲೇ ಮೇಲಧಿಕಾರಿಗಳ ಜೊತೆ ಚರ್ಚಿಸಿ ಟಿ.ಸಿ ವಿತರಣೆಗೆ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.

‘ಹೊನ್ನಾಳಿ ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘ ಇಡೀ ರಾಜ್ಯಕ್ಕೆ ಮಾದರಿಯಾಗಿದೆ’ ಎಂದು ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ. ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಂಘವು ಹೊನ್ನಾಳಿಯಲ್ಲಿ ನಿವೇಶನ ಖರೀದಿ ಮಾಡಿದರೆ ಅದಕ್ಕೆ ಹಣಕಾಸಿನ ನೆರವನ್ನು ಕೇಂದ್ರ ಸಂಘದಿಂದ ನೀಡುತ್ತೇವೆ. ನಿವೇಶನ ಖರೀದಿಯ ದಾಖಲೆಪತ್ರಗಳನ್ನು ಕೇಂದ್ರ ಸಮಿತಿಗೆ ಕಳುಹಿಸಿಕೊಡಿ’ ಎಂದು ಹೇಳಿದರು.

‘₹ 5 ಲಕ್ಷದೊಳಗಿನ ತುಂಡು ಗುತ್ತಿಗೆಯನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕೆಂದು ಸರ್ಕಾರ ಆದೇಶಿಸಿದೆ. ಒಂದು ವೇಳೆ ಅಧಿಕಾರಿಗಳು ಕೊಡದೆ ಇದ್ದರೆ ನಿಮ್ಮ ನೆರವಿಗೆ ನಾವು ಬರುತ್ತೇವೆ. ಯಾವಾಗಲೂ ರಾಜ್ಯ ಸಂಘ ನಿಮ್ಮ ಬೆಂಬಲಕ್ಕೆ ಇರಲಿದೆ’ ಎಂದರು.

‘ನಮ್ಮ ಸಂಘಕ್ಕೆ ನಿವೇಶನದ ಅಗತ್ಯವಿದ್ದು, ಅನುಕೂಲ ಮಾಡಿಕೊಡಿ’ ಎಂದು ಶಾಸಕರಿಗೆ ಗುತ್ತಿಗೆದಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಬಸಪ್ಪ ಮನವಿ ಮಾಡಿದರು.

ರಾಜ್ಯ ಸಂಘದ ಪದಾಧಿಕಾರಿಗಳಾದ ಎಚ್.ವಿ. ಚಂದ್ರಬಾಬು, ಎಂ.ರಮೇಶ್, ಎಂ.ಚಂದ್ರಬಾಬು, ಮೆಹಬೂಬ್ ಬಾಷಾ, ಸಂಘದ ಚಿತ್ರದುರ್ಗ ಘಟಕದ ಅಧ್ಯಕ್ಷ ಮಂಜಣ್ಣ, ದಾವಣಗೆರೆ ಘಟಕದ ಅಧ್ಯಕ್ಷ ರವಿಕುಮಾರ್, ಹರಿಹರದ ಬೆಸ್ಕಾಂ ಇಇ ಶಿವಾಜಿರಾವ್, ಹೊನ್ನಾಳಿಯ ಎಇಇ ಜಯಪ್ಪ, ನ್ಯಾಮತಿಯ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣನಾಯ್ಕ್, ಕೋಶಾಧ್ಯಕ್ಷ ಕೆ.ನಟರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-43-985271249

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.