ಹೊನ್ನಾಳಿ: ‘ತಾಲ್ಲೂಕಿನ ಕೋಣನತಲೆ ಗ್ರಾಮದಲ್ಲಿ ಗುಡ್ಡದ ಬೇವಿನಹಳ್ಳಿ, ಜಿ.ಟಿ. ಕಟ್ಟಿ, ಮುಗಿನಗೊಂದಿ, ಹರಗನಹಳ್ಳಿ, ಹಿರೇಗೋಣಿಗೆರೆ ಗ್ರಾಮಗಳ ಆಂಜನೇಯಸ್ವಾಮಿ ದೇವರ ಪುರಪ್ರವೇಶ ಏ. 26ರಂದು ನಡೆಯಲಿದೆ’ ಎಂದು ಗ್ರಾಮದ ಎನ್. ನಾಗಪ್ಪ ಹಾಗೂ ಡಿ.ಎಸ್. ನಾಗೇಂದ್ರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದರು.

27ರಂದು ಬೆಳಗಿನ ಜಾವ 4.15ಕ್ಕೆ ಹಳೇಊರು ಆಂಜನೇಯ ಸ್ವಾಮಿ ಹಾಗೂ ಒಳಕಲ್ಲು ಚೌಡಮ್ಮ ದೇವರುಗಳಿಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ನಂತರ ಐರಣಿ ಮಠದ ಶ್ರೀಗಳಿಂದ 9.45ಕ್ಕೆ ಕಳಸಾರೋಹಣ, 11 ಗಂಟೆಗೆ ಧರ್ಮಸಭೆ ನಡೆಯಲಿದೆ.

ಬಸವ ಸದ್ಗುರು ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಾರೂಢ ಭಾರತಿ ಸ್ವಾಮೀಜಿ, ರಾಜನಹಳ್ಳಿಯ ಪ್ರಸನ್ನಾನಂದ ಸ್ವಾಮೀಜಿ, ನಂದಿಗುಡಿಯ ಸಿದ್ಧರಾಮೇಶ್ವರ ಸ್ವಾಮೀಜಿ, ಹೊಸಹಳ್ಳಿ ವೇಮನ ಮಠದ ವೇಮನಾನಂದ ಸ್ವಾಮೀಜಿ, ರಟ್ಟೇಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಶಾಸಕ ಡಿ.ಜಿ. ಶಾಂತನಗೌಡ ಉದ್ಘಾಟಿಸಲಿದ್ದಾರೆ. ಎನ್. ನಾಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಬಯಲು ಸೀಮೆ ಮಂಡಳಿಯ ಅಧ್ಯಕ್ಷರಾದ ಎಚ್.ಬಿ. ಮಂಜಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ತಾಲ್ಲೂಕಿನ ವಿವಿಧ ಪಕ್ಷಗಳ ಮುಖಂಡರು, ಅಧಿಕಾರಿಗಳು ಆಗಮಿಸಲಿದ್ದಾರೆ.

ವಾಲ್ಮೀಕಿ ಸಮುದಾಯದ ಅಧ್ಯಕ್ಷ ನಾಗೇಂದ್ರಪ್ಪ, ಅಧ್ಯಕ್ಷ ಜಿ.ಬಿ. ಮಲ್ಲನಗೌಡ, ಕಾರ್ಯದರ್ಶಿ ಬಿ.ಎನ್. ಲೋಕೇಶ್, ಮುಖಂಡರಾದ ಸುಭಾಶ್ ಚಂದ್ರ, ಬಿ.ಎಚ್. ಹಾಲಪ್ಪ, ಬಿ.ಸಿ. ಹನುಮಗೌಡ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-43-1509824030

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.