ಹೊನ್ನಾಳಿ: ‘ಕೆಲವರು ಕನಿಷ್ಠ ವೇತನ, ಸಂಭಾವನೆ ಪಡೆಯುವ ಮೂಲಕ ಅತ್ತ್ಯುತ್ತಮ ಸೇವೆ ನೀಡುತ್ತಿದ್ದು, ಆ ಸಾಲಿಗೆ ನಮ್ಮ ತಾಲ್ಲೂಕಿನ ಗೃಹರಕ್ಷಕ ದಳದ ಘಟಕಾಧಿಕಾರಿ ಕೆ. ನಾಗರಾಜಪ್ಪ ಅವರೂ ಸೇರಿದ್ದಾರೆ’ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಹಾಗೂ ತಾಲ್ಲೂಕು ಗೃಹರಕ್ಷಕ ದಳದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

‘ನಾಗರಾಜಪ್ಪ ಅವರು ತಮ್ಮ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮಾಜಸೇವೆಗೆ ಸಿ.ಎಂ. ಚಿನ್ನದ ಪದಕ ಪಡೆದಿದ್ದಾರೆ. ಹೊನ್ನಾಳಿ ಮತ್ತು ನ್ಯಾಮತಿ ಗೃಹರಕ್ಷಕ ದಳಕ್ಕೆ ನಿವೇಶನ ಹಾಗೂ ಕಟ್ಟಡಕ್ಕೆ ಹಾಗೂ ವೇತನ ಹೆಚ್ಚಳಕ್ಕೆ ಮನವಿ ಮಾಡಿದ್ದು, ಮುಖ್ಯಮಂತ್ರಿ ಬಳಿ ಈ ವಿಷಯವನ್ನು ಪ್ರಸ್ತಾಪ ಮಾಡುತ್ತೇನೆ’ ಎಂದರು.

‘ನಾಗರಾಜಪ್ಪ ಅವರ 38 ವರ್ಷಗಳ ಸುದೀರ್ಘ ಸೇವೆಗೆ ಸಂದ ಗೌರವ ಇದು’ ಎಂದು ಜಿಲ್ಲಾ ಕಮಾಂಡೆಂಟ್ ಎಸ್.ಎಚ್. ಸುಚಿತ್ಕುಮಾರ್ ಹೇಳಿದರು.

ಸಿ.ಎಂ. ಪದಕ ಪುರಸ್ಕೃತ ನ್ಯಾಮತಿ ತಾಲ್ಲೂಕಿನ ರಾಘವೇಂದ್ರ ಮಾತನಾಡಿ, ‘ಹೊನ್ನಾಳಿಯ ಪೊಲೀಸರಿಗೆ ನಿವೇಶನ ಕೊಡಿಸುವಲ್ಲಿ, ಅವರು ವಸತಿ ಗೃಹಗಳನ್ನು ನಿರ್ಮಿಸಿಕೊಳ್ಳುವಲ್ಲಿ ನಾಗರಾಜಪ್ಪ ಅವರ ಸೇವೆ ಮೆಚ್ಚುವಂತಹದ್ದು’ ಎಂದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ನಾಗರಾಜಪ್ಪ ಅವರನ್ನು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ಕೆ.ನಾಗರಾಜಪ್ಪ, ನಿವೃತ್ತ ಜಿಲ್ಲಾ ಕಮಾಂಡೆಂಟ್ ಡಾ. ಬಿ.ಎಚ್. ವೀರಪ್ಪ, ಎ. ಮಹಾಲಿಂಗಪ್ಪ, ರಾಷ್ಟ್ರಪತಿ ಪದಕ ಪುರಸ್ಕೃತ ಎಂ.ಪಿ.ಎಂ. ಚನ್ನಬಸಯ್ಯ ಮಾತನಾಡಿದರು.

ಸ್ಟಾಫ್ ಆಫೀಸರ್ ಕೆ.ಸರಸ್ವತಿ, ಗೃಹರಕ್ಷಕ ದಳದ ಸಿಬ್ಬಂದಿ ಹಾಜರಿದ್ದರು. ಹನುಮಂತಪ್ಪ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-43-701087389

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.