ಹೊನ್ನಾಳಿ: ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕಿನ ಎಸ್ಎಸ್ಎಲ್ಸಿ ಫಲಿತಾಂಶ ಈ ಬಾರಿ ಶೇ 94.49 ಕ್ಕೆ ಹೆಚ್ಚಳಗೊಂಡಿದೆ. ಕಳೆದ ಬಾರಿ ಶೇ 68 ರಷ್ಟಿತ್ತು. ಉತ್ತಮ ಫಲಿತಾಂಶವನ್ನು ಕೊಟ್ಟಿರುವ ತಾಲ್ಲೂಕಿನ ಬಿಇಒ, ಬಿಆರ್ಸಿ ಹಾಗೂ ಎಲ್ಲಾ ಪ್ರೌಢಶಾಲೆಯ ಶಿಕ್ಷಕರು ಅಭಿನಂದನಾರ್ಹರು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಶುಕ್ರವಾರ ಬಿಆರ್ಸಿ ಕಚೇರಿಯಲ್ಲಿ 625 ಕ್ಕೆ 617 ಅಂಕಗಳನ್ನು ಪಡೆದ ನಾಲ್ವರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪರೀಕ್ಷೆ ಬರೆದ ಒಟ್ಟು 2,612 ವಿದ್ಯಾರ್ಥಿಗಳಲ್ಲಿ 2,468 ಉತ್ತೀರ್ಣರಾಗಿದ್ದಾರೆ ಎಂದು ಹೇಳಿದರು.

‘ಅವಳಿ ತಾಲ್ಲೂಕಿನ ಅನುದಾನ ರಹಿತ ಶಾಲೆಗಳು ಶೇ 97.23, ಅನುದಾನಿತ ಶಾಲೆಗಳು ಶೇ 90.57 ಹಾಗೂ ಸರ್ಕಾರಿ ಶಾಲೆಗಳು ಶೇ 95.11 ರಷ್ಟು ಫಲಿತಾಂಶ ಪಡೆದಿವೆ. ಅನುದಾನಿತ ಶಾಲೆಗಳಲ್ಲಿ ವರ್ಗಾವಣೆಗೊಂಡ ಶಿಕ್ಷಕರ ಖಾಲಿ ಹುದ್ದೆಗಳಿಗೆ ಭರ್ತಿ ಮಾಡದೇ ಇರುವುದರಿಂದ ಶಿಕ್ಷಕರ ಕೊರತೆ ಎದುರಾಗಿದ್ದು, ಫಲಿತಾಂಶ ಕುಂಠಿತವಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಿಕೊಡುತ್ತೇವೆ’ ಎಂದು ಹೇಳಿದರು.

4 ವಿದ್ಯಾರ್ಥಿಗಳಿಗೆ 617 ಅಂಕಗಳು: ಹೊನ್ನಾಳಿ ತಾಲ್ಲೂಕಿನ ಸಿಂಗಟಗೆರೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪುಣ್ಯಶ್ರೀ ಚಂದ್ರು ಪಾರಂಗಿ, ನ್ಯಾಮತಿ ತಾಲ್ಲೂಕಿನ ಮಾದನಬಾವಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಸಾಗರ್ ಬಿ.ಟಿ., ಕೆಪಿಎಸ್ ಶಾಲೆಯ ಎಸ್.ಎನ್. ಚಿರಂಜೀವಿ ಹಾಗೂ ಸಿ.ಎಚ್. ಮಂಜುನಾಥ್ 617 ಅಂಕಗಳನ್ನು ಪಡೆದಿದ್ದಾರೆ ಎಂದರು.

ಪಟ್ಟಣದ ಸ್ಟೆಲ್ಲಾ ಮೇರಿಸ್ ಶಾಲೆಯ ಎಂ.ಪಿ. ಸಿಂಧು 616 ಅಂಕ, ಹೊನ್ನಾಳಿ ತಾಲ್ಲೂಕಿನ ಎಚ್. ಕಡದಕಟ್ಟೆ ಸಮೀಪದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕೆ.ಎಲ್. ವಿದ್ಯಾ 613 ಅಂಕಗಳನ್ನು ಪಡೆದಿದ್ದಾರೆ. ಶೇ 90 ಕ್ಕಿಂತ ಹೆಚ್ಚು ಫಲಿತಾಂಶ ಪಡೆದ ಎಲ್ಲರನ್ನೂ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಬಿಇಒ ಕೆ.ಟಿ. ನಿಂಗಪ್ಪ, ಬಿಆರ್ಸಿ ಎಂ. ತಿಪ್ಪೇಶಪ್ಪ, ಇಸಿಒ ಹನುಮಂತಪ್ಪ, ಗೊಲ್ಲರಹಳ್ಳಿ ಸುನೀಲ್, ಅರುಣ್ಕುಮಾರ್ ಹಾಗೂ ಸಿಂಗಟಗೆರೆ ಕಿತ್ತೂರು ರಾಣಿ ವಸತಿ ಶಾಲೆಯ ಪ್ರಾಂಶುಪಾಲರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-43-1940203742

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.