ಹೊನ್ನಾಳಿ: ಆನ್ಲೈನ್ ಮೂಲಕ ನಡೆಯುತ್ತಿರುವ ಅನಿಯಂತ್ರಿತ ಔಷಧಿಗಳ ಮಾರಾಟ, ಕಾರ್ಪೊರೇಟ್ ಕಂಪನಿಗಳ ರಿಯಾಯಿತಿ ದರದ ವ್ಯಾಪಾರ ವಹಿವಾಟು ಮತ್ತು ನಿಯಮಗಳ ಉಲ್ಲಂಘನೆಯನ್ನು ವಿರೋಧಿಸಿ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಕಪ್ಪುಪಟ್ಟಿ ಧರಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ಅಪೊಲೊ ಪ್ಲಸ್ ಮೆಡಿಕಲ್ ಸ್ಟೋರ್ಗಳ ಮಾಲೀಕರಾದ ಮೊಹ್ಮದ್ ನೂರುಲ್ಲಾ ಮಾತನಾಡಿ, ‘ಆನ್ಲೈನ್ ಮೂಲಕ ರಿಯಾಯಿತಿ ದರದಲ್ಲಿ ಔಷಧಗಳನ್ನು ಮಾರಾಟ ಮಾಡುತ್ತಿರುವುದರಿಂದ ಸ್ಥಳೀಯ ಸಣ್ಣ ಮತ್ತು ಸಾಂಪ್ರದಾಯಿಕ ಮೆಡಿಕಲ್ ಶಾಪ್ಗಳ ವ್ಯಾಪಾರ ಕುಸಿಯುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಆನ್ಲೈನ್ ಮೂಲಕ ಔಷಧ ಮಾರಾಟವನ್ನು ನಿಯಂತ್ರಿಸಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರಕ್ಕೆ ನೇರವಾಗಿ ತೆರಿಗೆ ಕಟ್ಟುವ ನಮ್ಮ ಪರವಾಗಿ ಸರ್ಕಾರ ಇರಬೇಕು. ಆನ್ಲೈನ್ ಮೂಲಕ ಔಷಧ ಮಾರಾಟಕ್ಕೆ ಪ್ರೇರೇಪಿಸಿದರೆ ನಾವು ಬೀದಿ ಪಾಲಾಗಬೇಕಾಗುತ್ತದೆ’ ಎಂದು ಹೇಳಿದರು.

ವಾಸವಿ ಮೆಡಿಕಲ್ಸ್ನ ಮಾಲೀಕ ದತ್ತಾತ್ರೇಯ ವೈಶ್ಯರ್ ಮಾತನಾಡಿ, ‘ಆನ್ಲೈನ್ನಲ್ಲಿ ವೈದ್ಯರ ಸಲಹೆ ಇಲ್ಲದೆ ಯಾವ ಔಷಧವನ್ನಾದರೂ ಖರೀದಿ ಮಾಡಬಹುದಾಗಿದೆ. ಅಲ್ಲದೇ ಕೆಲ ಯುವಕರು ಅಮಲು ಬರುವ ಔಷಧಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಇದರಿಂದ ಯುವಕರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಗಾಯತ್ರಿ ಮೆಡಿಕಲ್ಸ್ ಮಾಲೀಕರಾದ ಪ್ರಕಾಶ್ ಹೆಬ್ಬಾರ್, ‘ಎಂತಹ ತುರ್ತು ಸಂದರ್ಭದಲ್ಲೂ ನಾವು ಮೆಡಿಕಲ್ ಶಾಪ್ ಮುಚ್ಚುವುದಿಲ್ಲ. ದಿನದ 24 ಗಂಟೆಯೂ ಗ್ರಾಹಕರಿಗೆ ಸೇವೆ ನೀಡುತ್ತೇವೆ, ತುರ್ತು ಸಂದರ್ಭದಲ್ಲಿ ಆನ್ಲೈನ್ ಸೇವೆಗಳು ಉಪಯೋಗಕ್ಕೆ ಬರುವುದಿಲ್ಲ. ಆದ್ದರಿಂದ ಆನ್ಲೈನ್ ವ್ಯಾಪಾರಕ್ಕೆ ತೆರೆ ಎಳೆಯಬೇಕು’ ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಔಷಧ ವ್ಯಾಪಾರಿಗಳ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಪಿ.ಬಿ. ಶೈಲೇಶ್, ಪದಾಧಿಕಾರಿಗಳಾದ ವಿಶ್ವನಾಥ್ ಹೆಗ್ಡೆ, ಎಚ್.ಸಿದ್ದೇಶ್ವರ್, ಬಿ. ಲೋಕೇಶ್, ಸುರೇಶ್, ಶ್ರೀನಿವಾಸ್, ರಂಗನಾಥ್, ವೀರೇಶ್, ಅನಿಲ್, ನಂದನ್, ಹರೀಶ್, ಲಿಂಗರಾಜ್, ಸಬೀತಾ ಜೆ. ಸೇರಿದಂತೆ ಹಲವರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-43-297936914

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.