ಹೊನ್ನಾಳಿ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಾಶಿ ರಾಶಿ ತ್ಯಾಜ್ಯ ಬಿದ್ದಿದ್ದು, ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ದುರ್ಗಿಗುಡಿ ವೃತ್ತದಿಂದ ಹಿರೇಕಲ್ಮಠಕ್ಕೆ ಹೋಗುವ ರಸ್ತೆಯ ಆರಂಭದಲ್ಲಿ ಕಸದ ಮೂಟೆಗಳು ಬಿದ್ದಿದ್ದು, ತೆರವುಗೊಳಿಸಿಲ್ಲ. ಕಸದ ರಾಶಿಯು ತಿಂಗಳಿನಿಂದ ಈ ಮಾರ್ಗದಲ್ಲಿ ದುರ್ನಾತ ಬೀರುತ್ತಿದೆ. ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಎಡಭಾಗದಲ್ಲೂ ಕಸದ ರಾಶಿ ಬಿದ್ದಿದೆ. ಹಿರೇಕಲ್ಮಠದಿಂದ ನ್ಯಾಮತಿ ರಸ್ತೆಗೆ ಹೋಗುವ ಮೈದಾನದ ಎಡಭಾಗದಲ್ಲಿ ಪ್ಲಾಸ್ಟಿಕ್ ಚೀಲಗಳು ರಾರಾಜಿಸುತ್ತಿವೆ. ಆಯಾಯ ಬೀದಿಯ ನಿವಾಸಿಗಳು ರಸ್ತೆಯ ಅಂಚಿನಲ್ಲಿರುವ ಖಾಲಿ ಜಾಗಗಳಲ್ಲಿ ಕಸವನ್ನು ಬಿಸಾಡಿ ಹೋಗುತ್ತಿದ್ದಾರೆ.

ತಾಜ್ಯ ಸಂಗ್ರಹಿಸುವ ವಾಹನವು ಮನೆಯ ಕಸವನ್ನು ಎರಡು ದಿನಕ್ಕೊಮ್ಮೆ ಕೊಂಡೊಯ್ಯುತ್ತದೆ. ಆದರೆ ಬೀದಿಬದಿಯ ಕಸವನ್ನು ವಾರಕ್ಕೆ ಎರಡು ಬಾರಿಯಾದರೂ ತೆರವುಗೊಳಿಸಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ. ಇಲ್ಲದಿದ್ದರೆ ಕಸ ಎಲ್ಲೆಂದರಲ್ಲಿ ಹರಡಿ ನಿವಾಸಿಗಳಿಗೆ ತೊಂದರೆಯಾಗಲಿದೆ. ಸಂಬಂಧಪಟ್ಟ ಪುರಸಭೆಯ ಆಹಾರ ನಿರೀಕ್ಷಕರು ಇಲ್ಲವೇ ಮುಖ್ಯಾಧಿಕಾರಿ ಇತ್ತ ಗಮನಹರಿಸಬೇಕು

ಹೊನ್ನಾಳಿ ಪಟ್ಟಣದ ದುರ್ಗಿಗುಡಿ ನಿವಾಸಿಗಳು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-43-362231828

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.