ಹೊನ್ನಾಳಿ: ‘ರಾಜ್ಯದಲ್ಲಿರುವ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಕಂಪನಿಗಳಲ್ಲಿನ ವಿದ್ಯುತ್ ನಿರ್ವಹಣೆ ಹಾಗೂ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಗಳಿಗೆ ನೀಡುತ್ತಿರುವುದು ಸರಿಯಲ್ಲ. ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಇದನ್ನು ಪ್ರಬಲವಾಗಿ ವಿರೋಧಿಸುತ್ತದೆ’ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಜಿ. ಬಸವರಾಜಪ್ಪ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ 19 ಜಿಲ್ಲೆಗಳ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಟಾಟಾ ಪವರ್ ಕಂಪನಿ ಲಿಮಿಟೆಡ್ಗೆ ನೀಡಲು ನಮ್ಮ ಆಕ್ಷೇಪಣೆ ಇದೆ. ಸಾವಿರಾರು ಕೋಟಿ ಮೌಲ್ಯದ ವಿತರಣಾ ಜಾಲ, ಉಪಕೇಂದ್ರ, ಯಂತ್ರೋಪಕರಣಗಳು, ಬೃಹತ್ ಸೌಕರ್ಯ ಹೊಂದಿರುವ ಸಾರ್ವಜನಿಕ ಆಸ್ತಿ ಇದ್ದು, ಈಗಿರುವ ಕಂಪನಿಗಳು ಮತ್ತು ನೌಕರರು ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಆದರೂ ಖಾಸಗಿಯವರಿಗೆ ವಹಿಸುತ್ತಿರುವುದನ್ನು ರೈತರಾದ ನಾವು ವಿರೋಧಿಸುತ್ತಿದ್ದೇವೆ’ ಎಂದು ಹೇಳಿದರು.

‘ಮುಂಬೈ, ದೆಹಲಿಯಲ್ಲಿ ಖಾಸಗಿ ಕಂಪನಿಗಳು ಒಂದು ಯೂನಿಟ್ಗೆ ₹ 14ರವರೆಗೂ ದರ ನಿಗದಿ ಮಾಡಿವೆ. ನಮ್ಮಲ್ಲಿ ಸರಾಸರಿ ₹6.50 ದರವಿದೆ. ಒಡಿಶಾದಲ್ಲಿ ಖಾಸಗಿ ಕಂಪನಿ ನಿರ್ವಹಣೆ ಮಾಡಲಾಗದೇ ಅರ್ಧದಲ್ಲಿಯೇ ಬಿಟ್ಟು ಹೋಗಿದೆ. ಆದ್ದರಿಂದ ರಾಜ್ಯ ರೈತ ಸಂಘ ಮೊದಲಿನಿಂದಲೂ ಈ ಖಾಸಗೀಕರಣವನ್ನು ವಿರೋಧಿಸುತ್ತ ಬಂದಿದೆ’ ಎಂದರು.

ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿದರಗಡ್ಡೆ ಭರ್ಮಪ್ಪಗೌಡ, ಒಂದು ವೇಳೆ ಖಾಸಗಿ ಕಂಪನಿಗಳಿಗೆ ವಹಿಸಲು ಮುಂದಾದರೆ ರಾಜ್ಯದಾದ್ಯಂತ ಬೃಹತ್ ಹೋರಾಟ ಎದುರಿಸಬೆಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾರ್ಯದರ್ಶಿ ಜಿ.ಆರ್. ಮಂಜುನಾಥ್, ರೈತ ಮುಖಂಡರಾದ ಕುಂದೂರು ಶಿವಕುಮಾರ್, ಮಲ್ಲಿಗೇನಹಳ್ಳಿ ಪರಮೇಶ್ವರಪ್ಪ, ಷಣ್ಮುಖಪ್ಪ ಬೀಜೋಗಟ್ಟಿ, ನಾಗರಾಜ್ ಟಿ. ಗೋಪಗೊಂಡನಹಳ್ಳಿ, ಎಚ್. ರಂಗಪ್ಪ, ಗೋಪಾಲನಾಯ್ಕ ಸೇರಿ ರೈತ ಮುಖಂಡರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-43-1468643353

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.