ಹೊನ್ನಾಳಿ: ಪುರಸಭೆ ವ್ಯಾಪ್ತಿಯ ಮಲ್ಲದೇವರಕಟ್ಟೆಯ ಸರ್ವೇ ನಂ.4ರಲ್ಲಿರುವ 29.17 ಎಕರೆ ಭೂಮಿಯಲ್ಲಿ ಗುರುವಾರ ಜಂಟಿ ಸರ್ವೇ ಕಾರ್ಯ ನಡೆಯಿತು. ಪುರಸಭೆಯ ನಿವೇಶನ ರಹಿತರಿಗೆ ನಿವೇಶನ ನೀಡುವ ಸಂಬಂಧ ಈ ಭೂಮಿಯಲ್ಲಿರುವ ಮರಗಳ ಸಮೀಕ್ಷೆ ನಡೆಸಲಾಯಿತು.

ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಎಡಿಎಲ್ಆರ್, ಅರಣ್ಯ ಇಲಾಖೆ ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳನ್ನು ಒಳಗೊಂಡ ತಂಡ ಸರ್ವೇ ಕಾರ್ಯ ನಡೆಸಿತು.

ಪುರಸಭೆ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಕೊಡಲು ಶಾಸಕರು, ಪುರಸಭೆಯ ಜನಪ್ರತಿನಿಧಿಗಳು ಈಗಾಗಲೇ ತೀರ್ಮಾನಿಸಿದ್ದಾರೆ. ನಿವೇಶನ ಹದ್ದುಬಸ್ತು ಮಾಡಿ ವಿತರಿಸಲು ಕ್ರಮ ತೆಗೆದುಕೊಂಡಿದ್ದ ಹಿನ್ನೆಲೆಯಲ್ಲಿ ಈ ಸರ್ವೇ ಕಾರ್ಯ ನಡೆಸಲಾಯಿತು ಎಂದು ಮುಖ್ಯಾಧಿಕಾರಿ ತಿಳಿಸಿದರು.

ಸಮೀಕ್ಷೆ ವೇಳೆ ಸುಂಕದಕಟ್ಟೆಯ ಕೆಲ ಮುಖಂಡರು ಅಡ್ಡಿಪಡಿಸಲು ಮುಂದಾದರು. ಆದರೆ ತಹಶೀಲ್ದಾರ್ ರಾಜೇಶ್ ಕುಮಾರ್ ಅವರ ಮನವೊಲಿಸಿದರು. ಇಲ್ಲಿನ ಮರಗಳು ಯಾವ ಪ್ರಭೇದಕ್ಕೆ ಸೇರಿವೆ ಎನ್ನುವುದನ್ನು ಪರಿಶೀಲಿಸಲಾಯಿತು. ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು. ನಂತರ ಅವರು ಮುಂದಿನ ಕ್ರಮ ಕೈಗೊಳ್ಳುವರು ಎಂದು ಮುಖ್ಯಾಧಿಕಾರಿ ಟಿ.ಲೀಲಾವತಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-43-900445979

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.