ಹೊನ್ನಾಳಿ: ತಾಲ್ಲೂಕಿನ ಗಡಿಗ್ರಾಮ ಅರಕೆರೆ ಎ.ಕೆ. ಕಾಲೊನಿ ಬಳಿ ನಡೆದಿರುವ ಸುಲಿಗೆ ಪ್ರಕರಣದ ಆರೋಪಿಗಳ ಪತ್ತೆಗೆ ಪೊಲೀಸರ 3 ತಂಡಗಳನ್ನು ರಚಿಸಲಾಗಿದೆ. ಗುರುವಾರ ತಡರಾತ್ರಿ ಓಮ್ನಿ ಅಡ್ಡಗಟ್ಟಿದ ದುಷ್ಕರ್ಮಿಗಳು ₹ 38 ಲಕ್ಷ ಸುಲಿಗೆ ಮಾಡಿದ್ದರು.

ಘಟನೆ ವಿವರ: ತಾಲ್ಲೂಕಿನ ಹೊಸಹಳ್ಳಿ 2ನೇ ಕ್ಯಾಂಪ್ನ ನಿವಾಸಿ ಎಸ್.ವಿ. ಮಾಲತೇಶ್ ಶೆಟ್ಟಿ ಅವರು ಹೊಸಪೇಟೆ ಯಲ್ಲಿ ಜಮೀನು ಮಾರಿದ್ದರು. ಇದರಿಂದ ಬಂದಿದ್ದ ₹ 76 ಲಕ್ಷ ಮೊತ್ತವನ್ನು ಎರಡು ಬ್ಯಾಗ್ಗಳಲ್ಲಿರಿಸಿಕೊಂಡು ಗ್ರಾಮಕ್ಕೆ ಮರಳುತ್ತಿದ್ದರು.

ರಾತ್ರಿ ವಾಹನ ಅಡ್ಡಗಟ್ಟಿದ ಆರೋಪಿಗಳು ಹೆದರಿಸಿ ಒಂದು ಬ್ಯಾಗ್ ನಲ್ಲಿದ್ದ ₹ 36 ಲಕ್ಷ ನಗದನ್ನು ಸುಲಿಗೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಹಣವಿದ್ದ ಮತ್ತೊಂದು ಬ್ಯಾಗನ್ನು ಸೀಟಿನ ಕೆಳಗಡೆ ಇಟ್ಟಿದ್ದರಿಂದ ಸುಲಿಗೆಕೋರರ ಕಣ್ಣಿಗೆ ಅದು ಕಂಡಿರಲಿಲ್ಲ ಎಂದು ಎಸ್.ವಿ. ಮಾಲತೇಶ್ ಶೆಟ್ಟಿ ದೂರು ನೀಡಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪ್ರಕರಣದ ತನಿಖೆ ಹಾಗೂ ಆರೋಪಿಗಳ ಪತ್ತೆಗಾಗಿ ಈಗಾಗಲೇ 3 ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-43-1783758516

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.