ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಯಲ್ಲಿ ಹೋಟೆಲ್‌, ವಾಹನಗಳಿಗೆ ಅವಕಾಶ

Last Updated 8 ಏಪ್ರಿಲ್ 2020, 16:16 IST
ಅಕ್ಷರ ಗಾತ್ರ

ದಾವಣಗೆರೆ: ಸಾರ್ವಜನಿಕರಿಗೆ ಅವಶ್ಯಕ ಸಾಮಗ್ರಿಗಳನ್ನು ತಲುಪಿಸಲು ಅನುಕೂಲವಾಗುವಂತೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳ ಚಾಲನೆಗೆ ಅವಕಾಶ ನೀಡಲಾಗಿದೆ. ವಾಹನ ಚಾಲಕರಿಗೆ ಮತ್ತು ಅವರ ಸಹಾಯಕರಿಗೆ ಊಟೋಪಚಾರಕ್ಕಾಗಿ ಕೆಲವು ಹೋಟೆಲ್ ಮತ್ತು ಡಾಬಾಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಕುಂದವಾಡ ಗ್ರೀನ್ ಪಾಯಿಂಟ್ ಪಂಜಾಬಿ ಡಾಬಾ, ಹರಿಹರ ಶಾಂತಿಸಾಗರ ಡಾಬಾ ಅಣ್ಣಾಪುರ ಗ್ರಾದಮ ಬಸವೇಶ್ವರ ಹೋಟೆಲ್, ಬಾಡಾ ಗ್ರಾಮದ ಪೃಥ್ವಿ ಡಾಬಾ, ಚನ್ನಗಿರಿ ಸಂಜನ ಹೋಟೆಲ್, ಚನ್ನಗಿರಿ ಮಲ್ನಾಡ್‌ಸಿರಿ ಫ್ಯಾಮಿಲಿ ರೆಸ್ಟೊರಂಟ್, ಆನಗೋಡು ಬಿಂದಾಸ್ ಡಾಬಾ, ದೊಣೆಹಳ್ಳಿ ಕಿರಣ್ ರೆಡ್ಡಿ ಫ್ಯಾಮಿಲಿ ರೆಸ್ಟೊರಂಟ್, ಹನಗವಾಡಿ ಸಾಗರ ಸಕಾರ ಡಾಬಾ, ಹದಡಿ ಅಮೃತ ಹೋಟೆಲ್, ನಲ್ಲೂರು ಮರಿಯಮ್ಮನದೇವಿ ಖಾನಾವಳಿ, ತ್ಯಾವಣಿಗೆ ಬಸವೇಶ್ವರ ಹೋಟೆಲ್, ದೇವನಾಯಕನಹಳ್ಳಿ ಸಂತೋಷ್ ಫ್ಯಾಮಿಲಿ ರೆಸ್ಟೊರಂಟ್, ಸುರಹೊನ್ನೆ ಹೊಯ್ಸಳ ಡಾಬಾ, ಗೊಲ್ಲಯಹಳ್ಳಿ ಈಟರ್ಸ್‌ ಫ್ಯಾಮಿಲಿ ರೆಸ್ಟೊರಂಟ್‌ಗಳಿಗೆ ಮಾತ್ರ ಅನುಮತಿಯನ್ನು ನೀಡಲಾಗಿದೆ.

ಹೋಟೆಲ್ ಮತ್ತು ಡಾಬಾ ಮಾಲೀಕರಿಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಗ್ರಾಹಕರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ನೈರ್ಮಲ್ಯ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಸ್ಯಾನಿಟೈಸರ್‌ ಬಳ‌ಸಬೇಕು. ಕೆಲಸ ನಿರ್ವಹಿಸುವವರು ಮಾಸ್ಕ್‌ ಧರಿಸಬೇಕು. ಯಾರಿಗಾದರೂ ಕೆಮ್ಮು, ಶೀತ, ಜ್ವರದ ಲಕ್ಷಣ ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ತಿಳಿಸಬೇಕು. ಊಟ, ಉಪಾಹಾರಗಳನ್ನು ಗ್ರಾಹಕರಿಗೆ ಪಾರ್ಸಲ್ ಮೂಲಕ ಮಾತ್ರ ನೀಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT