ದಾವಣಗೆರೆ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಜಿಲ್ಲೆಯಲ್ಲಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಪೇಯಿಂಗ್ ಗೆಸ್ಟ್ (ಪಿ.ಜಿ) ಉದ್ಯಮಕ್ಕೂ ಬಿಸಿ ತಟ್ಟಲಾರಂಭಿಸಿದೆ.

ಸಿಲಿಂಡರ್ ಅನ್ನು ಗೃಹ ಬಳಕೆಗೆ ಮಾತ್ರ ಸರಬರಾಜು ಮಾಡುವಂತೆ ಜಿಲ್ಲೆಯ ಗ್ಯಾಸ್ ಏಜೆನ್ಸಿಗಳಿಗೆ ಸೂಚನೆ ಬಂದಿದೆ. ಮನೆ, ಸರ್ಕಾರಿ ಆಸ್ಪತ್ರೆ ಹಾಗೂ ಹಾಸ್ಟೆಲ್ಗಳು ಸೇರಿದಂತೆ ಅಗತ್ಯ ಸ್ಥಳಗಳಿಗೆ ಮಾತ್ರ ಅಡುಗೆ ಅನಿಲ ಪೂರೈಕೆ ಆಗುತ್ತಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಸಿಗದೇ ಹೋದರೆ ಕೆಲವೇ ದಿನಗಳಲ್ಲಿ ಹಲವು ಹೋಟೆಲ್, ಉಪಹಾರ ಮಂದಿರ ಹಾಗೂ ಖಾನಾವಳಿಗಳು ಬಾಗಿಲು ಮುಚ್ಚಲಿವೆ.

ಜಿಲ್ಲೆಯ ಹೋಟೆಲ್ ಮಾಲೀಕರ ಸಂಘದಲ್ಲಿ 386 ಹೋಟೆಲ್ಗಳು ನೋಂದಣಿಯಾಗಿವೆ. ಇವುಗಳ ಪೈಕಿ 226 ಹೋಟೆಲ್ಗಳು ದಾವಣಗೆರೆ ನಗರದಲ್ಲಿವೆ. ಹಲವು ಹೋಟೆಲ್ಗಳಲ್ಲಿ ಸಿಲಿಂಡರ್ ದಾಸ್ತಾನು ಕಡಿಮೆ ಇದೆ. ಸಕಾಲಕ್ಕೆ ಸಿಲಿಂಡರ್ ಲಭ್ಯವಾಗುವುದು ಅನುಮಾನವಾಗಿದೆ.

‘ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಿಲಿಂಡರ್ ವಿತರಣೆಯನ್ನು ಸ್ಥಗಿತಗೊಳಿಸುವಂತೆ ಏಜೆನ್ಸಿಗಳಿಗೆ ಮಂಗಳವಾರ ಸೂಚನೆ ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಹೋಟೆಲ್ಗಳಿಗೆ ಸಕಾಲಕ್ಕೆ ಸಿಲಿಂಡರ್ ಪೂರೈಕೆ ಆಗದೇ, ಅನಿಶ್ಚಿತತೆ ಸೃಷ್ಟಿಯಾಗಿದೆ. ಹೋಟೆಲ್ ಉದ್ಯಮ ನಡೆಸುವುದು ಕಷ್ಟವಾಗುತ್ತಿದೆ’ ಎಂದು ನಗರ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಬಿ. ಸುಬ್ರಮಣ್ಯ ಕಳವಳ ವ್ಯಕ್ತಪಡಿಸಿದ್ದಾರೆ.

‘ಯುದ್ಧದ ಹಿನ್ನೆಲೆಯಲ್ಲಿ ಸಿಲಿಂಡರ್ ಪೂರೈಕೆಯಲ್ಲಿ ತೊಂದರೆ ಉಂಟಾಗಿದೆ. ಗೃಹ ಬಳಕೆಯ ಸಿಲಿಂಡರ್ ಪೂರೈಕೆಗೆ ಆದ್ಯತೆ ನೀಡುವಂತೆ ನಿರ್ದೇಶನ ಬಂದಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆ ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ ಇದು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಯೂ ಇದೆ. ವಾಣಿಜ್ಯ ಉದ್ದೇಶಕ್ಕೆ ಸಿಲಿಂಡರ್ ಪಡೆಯುತ್ತಿದ್ದ ಅನೇಕರು ದೂರವಾಣಿ ಕರೆ ಮಾಡಿ ವಿಚಾರಿಸುತ್ತಿದ್ದಾರೆ’ ಎಂದು ನಗರದ ಗ್ಯಾಸ್ ಏಜೆನ್ಸಿಯ ಮಾಲೀಕರೊಬ್ಬರು ಮಾಹಿತಿ ನೀಡಿದರು.

ಸಿಲಿಂಡರ್ ಕೊರೆಯಿಂದ ಕೆಲ ಹೋಟೆಲ್ಗಳು ವಿದ್ಯುತ್ ಸ್ಟೌ ಬಳಕೆಯ ಬಗ್ಗೆಯೂ ಆಲೋಚನೆ ನಡೆಸಿವೆ. ಆದರೆ, ವಿದ್ಯುತ್ ಬಳಕೆ ನಿಗದಿತ ಮಿತಿಗಿಂತ ಹೆಚ್ಚಾದರೆ ಹೊರೆ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆಯೂ ಹೋಟೆಲ್ ಮಾಲೀಕರು ಅವಲೋಕನ ಮಾಡುತ್ತಿದ್ದಾರೆ.

‘ಹೋಟೆಲ್ನಲ್ಲಿ ಸೌದೆಯನ್ನು ಬಳಸಿ ಆಹಾರ ತಯಾರಿಸುತ್ತಿದ್ದೆವು. ಹೊಗೆಮುಕ್ತ ಅಡುಗೆ ಮನೆಗೆ ಒತ್ತು ನೀಡಿದ ಸರ್ಕಾರ ಸಿಲಿಂಡರ್ ಬಳಕೆಗೆ ಸೂಚನೆ ನೀಡಿತು. ಈಗ ಸೌದೆ ಒಲೆ ಬಳಕೆಯನ್ನು ಸಂಪೂರ್ಣ ನಿಲ್ಲಿಸಿದ್ದೇವೆ. ಸರ್ಕಾರ ಹೋಟೆಲ್ ಮಾಲೀಕರ ನೆರವಿಗೆ ಧಾವಿಸಬೇಕು’ ಎಂದು ಸುಬ್ರಮಣ್ಯ ಮನವಿ ಮಾಡಿದರು.

ಗೃಹ ಬಳಕೆ ಸಿಲಿಂಡರ್ ಅಬಾಧಿತ

ಗೃಹ ಬಳಕೆಯ ಅಡುಗೆ ಅನಿಲ (ಎಲ್ಪಿಜಿ) ಪೂರೈಕೆಯಲ್ಲಿ ಜಿಲ್ಲೆಯಲ್ಲಿ ತೊಂದರೆ ಉಂಟಾಗಿಲ್ಲ. ಬುಕ್ಕಿಂಗ್ ಮಾಡಿದ ಕೆಲವೇ ದಿನಗಳಲ್ಲಿ ಅಡುಗೆ ಅನಿಲದ ಸಿಲಿಂಡರ್ ಮನೆಬಾಗಿಲಿಗೆ ಬರುತ್ತಿದೆ. ‘ಯುದ್ಧ ಪ್ರಾರಂಭವಾಗುವುದಕ್ಕೂ ಮುನ್ನ ಅಡುಗೆ ಅನಿಲ ಬೇಡಿಕೆಗಿಂತ ಹೆಚ್ಚು ಪೂರೈಕೆ ಇತ್ತು. ಬುಕ್ಕಿಂಗ್ ಮಾಡಿದ ಕೆಲವೇ ಗಂಟೆಗಳಲ್ಲಿ ವಿತರಣೆ ಮಾಡುತ್ತಿದ್ದೆವು. ಈಗ 3–4 ದಿನ ಕಾಲಾವಕಾಶ ತೆಗೆದುಕೊಳ್ಳುತ್ತಿದ್ದೇವೆ. ಗೃಹ ಬಳಕೆಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ’ ಎಂದು ಗ್ಯಾಸ್ ಏಜೆನ್ಸಿ ಮಾಲೀಕರೊಬ್ಬರು ತಿಳಿಸಿದರು.

ದೋಸೆ ತಯಾರಿಸಲು ಸೌದೆ ಬಳಸುತ್ತೇವೆ. ಆದರೆ ಪಲ್ಯಕ್ಕೆ ಬೇಕಾಗುವ ಆಲೂಗಡ್ಡೆ ಬೇಯಿಸಲು ಸಿಲಿಂಡರ್ ಅಗತ್ಯ. ಸಿಲಿಂಡರ್ ಪೂರೈಕೆ ಆಗದಿದ್ದರೆ ತೊಂದರೆ ಆಗಲಿದೆ
–ರಂಗನಾಥ್ ಮಾಲೀಕರು ವಸಂತ ಬೆಣ್ಣೆದೋಸೆ ಹೋಟೆಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.