ಶನಿವಾರ, ಆಗಸ್ಟ್ 24, 2019
21 °C

ಐಎಂಎ ಮಾಲೀಕನ ಸ್ಥಿರಾಸ್ತಿ ಜಪ್ತಿ

Published:
Updated:

ದಾವಣಗೆರೆ: ಐ ಮಾನಿಟರಿ ಅಡ್ವೈಸರಿ (ಐಎಂಎ) ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ದಾವಣಗೆರೆಯಲ್ಲಿ ಹೊಂದಿರುವ ಸ್ಥಿರಾಸ್ಥಿಗಳನ್ನು ಸರ್ಕಾರದ ಅಧಿಸೂಚನೆಯಂತೆ ಜಪ್ತಿ ಮಾಡಲಾಗಿದೆ.

ದಾವಣಗೆರೆ ತಾಲ್ಲೂಕು ದೊಡ್ಡಬಾತಿ ಗ್ರಾಮದ ಸ.ನಂ.98/2ರ 5.20 ಎಕರೆ ಖುಷ್ಕಿ ಜಮೀನು ಹಾಗೂ ದೊಡ್ಡ ಬೂದಿಹಾಳ್‌ನ ನಂ.1531/ಎ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ತಿಳಿಸಿದ್ದಾರೆ.

ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ 2004ರ ಅಡಿಯಲ್ಲಿ ಈ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. 

Post Comments (+)