ದಾವಣಗೆರೆ: ಮಂಡ್ಯ, ಮಂಗಳೂರು, ಮೈಸೂರು ಮತ್ತು ಕ್ಯಾಲಿಕಟ್ ವಿಶ್ವವಿದ್ಯಾಲಯದ ಮಹಿಳಾ ತಂಡಗಳು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಕೊಕ್ಕೊ ಟೂರ್ನಿಗೆ ಅರ್ಹತೆ ಪಡೆದಿವೆ.

ಅಖಿಲ ಭಾರತ ವಿಶ್ವವಿದ್ಯಾಲಯಗಳ ಸಂಘದ ಆಶ್ರಯದಲ್ಲಿ ದಾವಣಗೆರೆ ವಿ.ವಿ. ಆವರಣದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಟೂರ್ನಿಯಲ್ಲಿ ಒಟ್ಟು 89 ತಂಡಗಳು ಪಾಲ್ಗೊಂಡಿದ್ದವು. ಇದರಲ್ಲಿ ಎಂಟು ತಂಡಗಳು ಅರ್ಹತಾ ಹಂತ ಪ್ರವೇಶಿಸಿದ್ದವು.

ಶುಕ್ರವಾರ ನಡೆದ ‘ಎ’ ಗುಂಪಿನ ಅರ್ಹತಾ ಪಂದ್ಯದಲ್ಲಿ ಮಂಡ್ಯ 13–4 ಪಾಯಿಂಟ್ಸ್ನಿಂದ ಆತಿಥೇಯ ದಾವಣಗೆರೆ ತಂಡವನ್ನು ಮಣಿಸಿತು.

‘ಬಿ’ ಗುಂಪಿನ ಪಂದ್ಯದಲ್ಲಿ ಮಂಗಳೂರು 12–8ರಿಂದ ತಮಿಳುನಾಡಿನ ಭಾರತಿಯಾರ್, ‘ಸಿ’ ಗುಂಪಿನ ಹಣಾಹಣಿಯಲ್ಲಿ ಮೈಸೂರು 10–8ರಿಂದ ಬೆಂಗಳೂರು ನಗರ ವಿ.ವಿ, ‘ಡಿ’ ಗುಂಪಿನ ಪೈಪೋಟಿಯಲ್ಲಿ ಕ್ಯಾಲಿಕಟ್ 10–7ರಿಂದ ಅಣ್ಣಾ ವಿಶ್ವವಿದ್ಯಾಲಯ ತಂಡವನ್ನು ಪರಾಭವಗೊಳಿಸಿತು.

ಅಖಿಲ ಭಾರತ ಟೂರ್ನಿ ಏಪ್ರಿಲ್ 19 ರಿಂದ 23ರವರೆಗೆ ಮುಂಬೈನ ಎಸ್ಎನ್ಡಿಟಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.

ಮಂಡ್ಯ, ಮಂಗಳೂರು, ಮೈಸೂರು ಮತ್ತು ಕ್ಯಾಲಿಕಟ್ ತಂಡಗಳು ದಕ್ಷಿಣ ವಲಯ ಟೂರ್ನಿಯ ಲೀಗ್ ಹಂತಕ್ಕೂ ಮುನ್ನಡೆದಿದ್ದು, ಅಗ್ರ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.