ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ
ಪಿ.ಬಿ. ರಸ್ತೆಯ ಆನಂದ ರೆಸಿಡೆನ್ಸಿ ಸಮೀಪ ಮಾದಿಗ ಸಮುದಾಯದ ಯುವಕರೊಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದರು. ಇದರಿಂದ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆ ಮಧ್ಯಭಾಗದಲ್ಲಿ ದೊಡ್ಡ ಕ್ಯಾನ್‌ನಿಂದ ಪೆಟ್ರೋಲ್ ಸುರಿದುಕೊಂಡ ಯುವಕ ಬೆಂಕಿ ಹಚ್ಚಿಕೊಳ್ಳಲು ಮುಂದಾದ. ತಕ್ಷಣ ಎಚ್ಚೆತ್ತುಕೊಂಡ ಜೊತೆಗಾರರು ಇದನ್ನು ತಡೆದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ರಕ್ಷಿಸಿದರು. ಜಯದೇವ ವೃತ್ತದಲ್ಲಿ ಮತ್ತೊಬ್ಬರು ಇದೇ ರೀತಿ ಪೆಟ್ರೋಲ್ ಸುರಿದುಕೊಳ್ಳುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು.