‘ಐಸಾಕಾನ್‌ ಕರ್ನಾಟಕ’ ಸಮಾವೇಶ 11ರಿಂದ

7
‘ಅರಿವಳಿಕೆ ಮತ್ತು ಆಪತ್ತು ನಿರ್ವಹಣಾ’ ಕಾರ್ಯಾಗಾರ 10ಕ್ಕೆ

‘ಐಸಾಕಾನ್‌ ಕರ್ನಾಟಕ’ ಸಮಾವೇಶ 11ರಿಂದ

Published:
Updated:

ದಾವಣಗೆರೆ: ಭಾರತೀಯ ಅರಿವಳಿಕೆ ಸೊಸೈಟಿ (ಐ.ಎಸ್‌.ಎ) ದಾವಣಗೆರೆ ಶಾಖೆ, ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಅರಿವಳಿಕೆ ಹಾಗೂ ಆಪತ್ತು ನಿರ್ವಹಣಾ ವಿಭಾಗ ಮತ್ತು ಎಸ್‌.ಎಸ್‌. ವೈದ್ಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಆಗಸ್ಟ್‌ 11 ಹಾಗೂ 12ರಂದು ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ‘ಐಸಾಕಾನ್‌ ಕರ್ನಾಟಕ–2018’ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಾವೇಶದ ಸಂಘಟನಾ ಅಧ್ಯಕ್ಷ ಡಾ. ರವಿ ಆರ್‌., ‘ಆ. 11ರಂದು ಸಂಜೆ 5.30ಕ್ಕೆ ಸಮಾವೇಶದ ಉದ್ಘಾಟನಾ ಸಮಾರಂಭ ನಡೆಯಲಿದೆ. ಶಾಸಕ ಶಾಮನೂರು ಶಿವಶಂಕರಪ್ಪ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಸುಮಾರು 100 ಉಪನ್ಯಾಸಕರು ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಸಮಾವೇಶದ ಪೂರ್ವಭಾವಿಯಾಗಿ ಆಗಸ್ಟ್‌ 9ರಂದು ಬೆಳಿಗ್ಗೆ 9ಕ್ಕೆ ಎಸ್‌.ಎಸ್‌. ವೈದ್ಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಅರಿವಳಿಕೆ ವಿಜ್ಞಾನ ಹಾಗೂ ಆಪತ್ತು ನಿರ್ವಹಣಾ ವಿಷಯದ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ವಿವಿಧ ವಿಷಯಗಳ ಮೇಲೆ ತಜ್ಞ ವೈದ್ಯರು ವಿಷಯ ಮಂಡಿಸಲಿದ್ದಾರೆ. ಆಗಸ್ಟ್‌ 10ರಂದು ಬೆಳಿಗ್ಗೆ 8.30ಕ್ಕೆ ಜೆ.ಜೆ.ಎಂ.ಎಂ.ಸಿ.ಯ ಬಾಪೂಜಿ ಸಭಾಂಗಣದಲ್ಲಿ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 26 ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದ ಸುಮಾರು 1,000 ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹದಿಮೂರು ವರ್ಷಗಳ ಬಳಿಕ ದಾವಣಗೆರೆಗೆ ‘ಐಸಾಕಾನ್‌ ಕರ್ನಾಟಕ’ ಸಮಾವೇಶದ ಆತಿಥ್ಯ ವಹಿಸುವ ಅವಕಾಶ ಲಭಿಸಿದೆ’ ಎಂದು ವಿವರಿಸಿದರು.

ಸಮಾವೇಶದ ಸಂಘಟನಾ ಅಧ್ಯಕ್ಷ ಡಾ. ಅರುಣಕುಮಾರ ಎ., ಸಂಘಟನಾ ಕಾರ್ಯದರ್ಶಿ ಡಾ. ಪ್ರಭು ಬಿ.ಜಿ, ಡಾ. ರವಿಶಂಕರ್‌, ಡಾ. ಕೆ.ಪಿ. ಶಿವಕುಮಾರ್‌, ಡಾ. ಕೆ.ಜಿ. ಸಂತೋಷ್‌, ಡಾ. ಕ್ಷಮಾ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !