ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋಡಿಹಳ್ಳಿಗೆ ಹಸಿರು ಟವೆಲ್‌ ಹಾಕುವ ನೈತಿಕತೆ ಇಲ್ಲ’

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್‌.ಆರ್. ಬಸವರಾಜಪ್ಪ
Last Updated 2 ಜುಲೈ 2022, 3:56 IST
ಅಕ್ಷರ ಗಾತ್ರ

ದಾವಣಗೆರೆ: ‘ರೈತರ ಹೆಸರಿನಲ್ಲಿ ಹಣ ಲೂಟಿ ಮಾಡಿ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಅವರಿಗೆ ಹಸಿರು ಟವೆಲ್‌ ಹಾಕುವ ನೈತಿಕತೆ ಇಲ್ಲ’ ಎಂದುಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್‌.ಆರ್. ಬಸವರಾಜಪ್ಪ ದೂರಿದರು.

‘ಭ್ರಷ್ಟಾಚಾರ ಆರೋಪ ಬಂದಾಗ ಕೋಡಿಹಳ್ಳಿ ಅದನ್ನು ಅಲ್ಲಗೆಳೆಯದೇ ಸುಮ್ಮನಿದ್ದರು. ಮಾನನಷ್ಟ ಮೊಕದ್ದಮೆ ಹೂಡಲಿಲ್ಲ. ಸತ್ಯಶೋಧನಾ

ಸಮಿತಿ ರಚಿಸಲಿಲ್ಲ. ಈ ಮೂಲಕ ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ಒಪ್ಪಿಕೊಂಡಂತಾಗಿದೆ. ಹಿರಿಯರ ತ್ಯಾಗ, ಬಲಿದಾನದಿಂದ ಹುಟ್ಟಿಕೊಂಡ ರೈತ ಸಂಘದ ಹೆಸರಿಗೆ ಅವರು ಅಪಖ್ಯಾತಿ ತಂದಿದ್ದಾರೆ. ಅವರು ಕೂಡಲೇ ಸಂಘದ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.

‘ಕೋಡಿಹಳ್ಳಿ ಹಾಗೂ ಅವರ ಬೆಂಬಲಿಗರು ರೈತರ ಸಾಲಮನ್ನಾ ಮಾಡುತ್ತೇವೆ ಎಂದು ರೈತರಿಂದ ₹ 50, ₹ 100 ಸಂಗ್ರಹ ಮಾಡಿದ್ದರು. ಆದರೆ ಸಾಲಮನ್ನಾ ಆಗಲಿಲ್ಲ. ಹಲವು ಸಭೆಗಳಲ್ಲಿ ಕೇಳಿದಾಗಲೂ ಸಂಘದ ದಾವಣಗೆರೆ ಜಿಲ್ಲೆ ಘಟಕದ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಅವರು ಈ ಬಗ್ಗೆ ಒಮ್ಮೆಯೂ ಲೆಕ್ಕ ಕೊಟ್ಟಿಲ್ಲ’ ಎಂದು ದೂರಿದರು.

ಕೋಡಿಹಳ್ಳಿ ವಿರುದ್ಧದ ಆರೋಪ ಸಂಬಂಧ ಪರಿಶೀಲನೆಗೆ ಸತ್ಯ ಶೋಧನಾ ಸಮಿತಿ ರಚಿಸಲಾಗುವುದು ಎಂದರು.

ಒಂದೇ ಸೂರಿನಡಿ ರೈತ ಸಂಘ: ‘ಎಲ್ಲ ರೈತ ಸಂಘಟನೆಗಳನ್ನು ಒಂದೇ ವೇದಿಕೆಯಡಿ ತರಲು ಪ್ರಯತ್ನ ನಡೆದಿದೆ. ಇದರ ಭಾಗವಾಗಿ ನವಲಗುಂದದಲ್ಲಿ ಜುಲೈ 21ರಂದು ರೈತ ಹುತಾತ್ಮ ದಿನ ಆಚರಿಸಲಾಗುವುದು. ಅಲ್ಲಿ ಎಲ್ಲ ರೈತ ಮುಖಂಡರು ಸೇರಿ ಚರ್ಚೆ ನಡೆಸಲಿದ್ದೇವೆ. ನಮ್ಮ ಜತೆ ಸೇರಲು ಅಖಂಡ ಕರ್ನಾಟಕ ರೈತ ಸಂಘ ತಾತ್ವಿಕ ಒಪ್ಪಿಗೆ ನೀಡಿದೆ. ಉತ್ತರ ಕರ್ನಾಟಕದ ಪ್ರಬಲ ಸಂಘಟನೆಯಾದ ಚಿನ್ನಪ್ಪ ಪೂಜಾರಿ ನೇತೃತ್ವದ ರೈತ ಸಂಘ ಈಗಾಗಲೇ ಸಂಘದ ಜತೆ ವಿಲೀನವಾಗಿದೆ. ಮುಖಂಡರಾದ ಬಡಗಲಪುರ ನಾಗೇಂದ್ರ, ಬಾಬಾಗೌಡ ಅವರ ಬಳಿ ಚರ್ಚಿಸಲಾಗಿದೆ. ಧಾರವಾಡದಲ್ಲಿ ಜುಲೈ 21ರೊಳಗೆ ಮತ್ತೆ ಸಭೆ ನಡೆಸಲಾಗುವುದು. ರೈತ ಸಂಘಕ್ಕೆ ಹಿಂದಿನ ಸ್ವರೂಪ ತರಲಲಾಗುವುದು’ ಎಂದರು.

ರಾಜ್ಯ ಸರ್ಕಾರ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು. ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಅಭಾವ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಬೆಂಬಲ ಬೆಲೆ ಸೇರಿ ರೈತರ ಬೇಡಿಕೆ ಸಂಬಂಧ ದೆಹಲಿ ಹೋರಾಟ ಮಾದರಿಯಲ್ಲಿ ಹೋರಾಟ ನಡೆಸಲು ಚಿಂತನೆ ನಡೆದಿದೆ. ಫಸಲ್‌ ಬಿಮಾ ಯೋಜನೆ ಸಂಬಂಧ ಜಿಲ್ಲೆಗೊಂದು ಕಚೇರಿ ತೆರೆಯಬೇಕು ಎಂದು ಅವರು ಒತ್ತಾಯಿಸಿದರು. ರೈತ ಸಂಘದ ಕುರುವ ಗಣೇಶ್‌, ಈಜಘಟ್ಟದ ಸಿದ್ಧವೀರಪ್ಪ, ಕಬ್ಬಳಿ ಶಿವಪ್ಪ, ನಜೀರ್‌ ಸಾಬ್‌ ಮೂಲಿಮನೆ, ಹೊನ್ನೂರು ಮುನಿಯಪ್ಪ, ಭರಮಣ್ಣ ಇದ್ದರು.

ಬಸವರಾಜಪ್ಪಗೂ ಸಂಘಟನೆಗೂ ಸಂಬಂಧ ಇಲ್ಲ
ದಾವಣಗೆರೆ:
‘ಎಚ್‌. ಆರ್‌. ಬಸವರಾಜಪ್ಪ ಕರ್ನಾಟಕ ರಾಜ್ಯ ರೈತ ಸಂಘದ ಸ್ವಯಂಘೋಷಿತ ಅಧ್ಯಕ್ಷರಾಗಿದ್ದು, ಅವರ ಮೇಲೂ ಈ ಹಿಂದೆ ಭ್ರಷ್ಟಾಚಾರದ ಆರೋಪ ಸಾಬೀತಾಗಿದೆ. ಅವರಿಗೂ ರೈತ ಸಂಘಕ್ಕೂ ಸಂಬಂಧ ಇಲ್ಲ. ಅವರು ಸಂಘದ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಒತ್ತಾಯಿಸಿದರು.

‘2016ರಲ್ಲಿ ಎಚ್.ಆರ್. ಬಸವರಾಜಪ್ಪ ಅವರು ರೈತ ಸಂಘದಲ್ಲಿದ್ದಾಗ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಸಂಬಂಧಶಿವಮೊಗ್ಗ ಜಿಲ್ಲೆಯಅನ್ನಪೂರ್ಣಮ್ಮನೇತೃತ್ವದ ಸತ್ಯಶೋಧನಾಸಮಿತಿ ವರದಿ ಸಲ್ಲಿಸಿತ್ತು. ಈಗ ಬಸವರಾಜಪ್ಪ ಅವರ ಜತೆ ಇರುವ ಈಚಘಟ್ಟದ ಸಿದ್ಧವೀರಪ್ಪ ಅವರೂ ಆ ಸಮಿತಿಯಲ್ಲಿದ್ದರು. ವರದಿಯಲ್ಲಿ ಬಸವರಾಜಪ್ಪ ಹಾಗೂ ವೈ.ಜೆ. ಮಲ್ಲಿಕಾರ್ಜುನ, ವಸಂತಕುಮಾರ್‌, ಹಿಟ್ಟೂರು ರಾಜು, ಇ.ಬಿ. ಜಗದೀಶ್‌ವಿರುದ್ಧದ ಆರೋಪ ಸಾಬೀತಾಗಿತ್ತು. ಈ ಕಾರಣ ಬಸವರಾಜಪ್ಪ ಅವರನ್ನು 5 ವರ್ಷಗಳ ಕಾಲರೈತ ಸಂಘದಿಂದ ಉಚ್ಛಾಟಿಸಲಾಗಿತ್ತು. ಈಗ ಅಂತಹವರು ಈಗ ನಾನೇ ಅಧ್ಯಕ್ಷ ಎಂದು ಓಡಾಡುತ್ತಿದ್ದಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಶಿವಮೊಗ್ಗ ವಿಧಾನಸಭಾಚುನಾವಣಾ ಸಂದರ್ಭದಲ್ಲಿಬಸರಾಜಪ್ಪ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಅವರ ಜತೆ ಗುರುತಿಸಿಕೊಂಡು, ವಿಧಾನಸಭಾ ಚುನಾವಣೆಗೆ ನಿಲ್ಲಲು ತಯಾರಿ ನಡೆಸಿದ್ದರು. ಅಲ್ಲದೇ ರಾಜಕೀಯ ನಾಯಕರಿಂದ ಹಣ ಪಡೆದಿದ್ದರು. ಅವರು ಈಗ ಕೋಡಿಹಳ್ಳಿ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ನಾವು ಸಾಲಮನ್ನಾ ಸಂಬಂಧ ರೈತರಿಂದ ಸಂಗ್ರಹಿಸಿದ ಹಣದ ಲೆಕ್ಕ ಕೊಟ್ಟಿದ್ದೇವೆ. ಬಸವರಾಜಪ್ಪ ಪಡೆದ 8 ರಸೀದಿ ಪುಸ್ತಕದ ಲೆಕ್ಕ ಏನಾಯಿತು ಎಂದು ಹೇಳುತ್ತಿಲ್ಲ’ ಎಂದು ದೂರಿದರು.

ರೈತ ಮುಖಂಡರಾದಚಿನ್ನಸಮುದ್ರ ಶೇಖರನಾಯ್ಕ,ಶತಕೋಟಿ ಬಸಪ್ಪ, ಬಸವರಾಜದಾಗಿನಕಟ್ಟೆ, ಕರೇಕಟ್ಟೆ ಕಲೀಂ ಉಲ್ಲಾ,ನಾಗರಾಜಪ್ಪ, ಸತೀಶ್, ರಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT