ಜಗಳೂರು: ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ಅರಣ್ಯ ಪ್ರದೇಶ, ರಸ್ತೆ ಬದಿಯಲ್ಲಿ ನೆಡುತೋಪು ಹಾಗೂ ರೈತರ ಜಮೀನುಗಳಲ್ಲಿ ನೆಡಲು ಸಾಮಾಜಿಕ ಅರಣ್ಯ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ವಿವಿಧ ಪ್ರಭೇದದ ಸಹಸ್ರಾರು ಸಸಿಗಳನ್ನು ಸಿದ್ಧಪಡಿಸಲಾಗಿದೆ.

ತೇಗ, ಸಿಲ್ವರ್ ಓಕ್, ಮಹಾಗನಿ, ನೇರಳೆ, ಹುಣಸೆ, ಹೊನ್ನೆ, ಬೇವು, ಅರಳಿ, ಹಲಸು, ತಪಸೆ, ಅತ್ತಿಬಸರಿ, ಹೊಂಗೆ, ಆಲ, ಮುತ್ತುಗ, ಚಳ್ಳೆ, ಸಿಹಿ ಹುಣಸೆ, ಗೋನಿ, ಹೊಳೆಮತ್ತಿ, ಹಿಪ್ಪೆ, ಕಮರ, ಬಾಗೆ, ಕಕ್ಕೆ, ಸೀತಾಫಲ, ಜಂಬುನೇರಳೆ, ಶಿವನಿ ಸೇರಿ ವಿವಿಧ ಪ್ರಭೇದದ ಸಸಿಗಳನ್ನು ತಾಲ್ಲೂಕಿನ ಸಂಗೇನಹಳ್ಳಿ ಹಾಗೂ ಅಣಬೂರು ಸಸ್ಯಪಾಲನಾ ಕ್ಷೇತ್ರಗಳಲ್ಲಿ ಬೆಳೆಸಲಾಗಿದೆ. ರೈತರಿಗೆ ಅವುಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ.

ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ ಕರ್ನಾಟಕ ಅರಣ್ಯ ಅಭಿವೃದ್ಧಿ ಅನುದಾನ (ಕೆಎಫ್ಡಿಎಫ್), ಆರ್.ಎಸ್.ಪಿ.ಡಿ, ಆರ್.ಕೆ.ವಿ.ವೈ, ಹಸಿರು ಕರ್ನಾಟಕ, ಎಸ್.ಎಫ್.ಪಿ ಹಾಗೂ ಆರ್.ಎಸ್.ಪಿ. ಯೋಜನೆಯಡಿ ವಲಯ ಅರಣ್ಯ ಇಲಾಖೆಯಿಂದ 85,000 ಹಾಗೂ ಸಾಮಾಜಿಕ ಅರಣ್ಯ ವಿಭಾಗದಿಂದ ರೈತರ ಜಮೀನುಗಳಲ್ಲಿ ನೆಡುತೋಪಿಗಾಗಿ 46,597 ಸಸಿಗಳನ್ನು ಈ ಬಾರಿ ಸಿದ್ಧಪಡಿಸಲಾಗಿದೆ.

ಸರ್ಕಾರದ ಅನುದಾನದ ಕೊರತೆಯಿಂದಾಗಿ ವರ್ಷದಿಂದ ವರ್ಷಕ್ಕೆ ಕಡಿಮೆ ಸಂಖ್ಯೆಯ ಸಸಿಗಳನ್ನು ಬೆಳಸಲಾಗುತ್ತಿದೆ. ಐದಾರು ವರ್ಷಗಳ ಹಿಂದೆ ಪ್ರಾದೇಶಿಕ ಅರಣ್ಯ ವಿಭಾಗದವೊಂದರಲ್ಲೇ ಪ್ರತಿ ವರ್ಷ 2 ಲಕ್ಷದಿಂದ 2.50 ಲಕ್ಷದವರೆಗೆ ಸಸಿಗಳನ್ನು ಬೆಳೆಸಲಾಗುತ್ತಿತ್ತು. ನರೇಗಾ ಯೋಜನೆ ಸೇರಿ ವಿವಿಧ ಯೋಜನೆಗಳಲ್ಲಿ ರಾಜ್ಯದಾದ್ಯಂತ ಅನುದಾನ ಕಡಿಮೆಯಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

‘ಇಲಾಖೆ ವ್ಯಾಪ್ತಿಯಲ್ಲಿ ತಾಲ್ಲೂಕಿನಲ್ಲಿ 4,000 ಹೆಕ್ಟೇರ್ ಪ್ರದೇಶ ಅರಣ್ಯ ಇದ್ದು, ಈ ವರ್ಷ 85,000 ಸಸಿಗಳನ್ನು ಬೆಳೆಸಲಾಗಿದೆ. ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲು 18,500, ಅರಣ್ಯದಲ್ಲಿ ನೆಡುತೋಪು ಬೆಳೆಸಲು 65,650 ಮತ್ತು ರಸ್ತೆ ಬದಿ ನೆಡುತೋಪಿಗಾಗಿ ವಿವಿಧ ಜಾತಿಯ 900 ಗಿಡಗಳನ್ನು ಅಣಬೂರು ಸಸ್ಯಪಾಲನಾ ಕ್ಷೇತ್ರದಲ್ಲಿ ಬೆಳೆಸಲಾಗಿದೆ. ರೈತರಿಗೆ ಈಗಾಗಲೇ ರಿಯಾಯಿತಿ ದರದಲ್ಲಿ ವಿತರಣೆ ಕಾರ್ಯ ಪ್ರಾರಂಭಿಸಲಾಗಿದೆ. ಅನುದಾನದ ಕೊರತೆ ಮತ್ತು ಈಗಾಗಲೇ ಹಂತಹಂತವಾಗಿ ನೆಡುತೋಪು ಕೈಗೊಂಡಿರುವ ಕಾರಣ ಈ ವರ್ಷ 85,000 ಸಸಿಗಳನ್ನು ಮಾತ್ರ ಬೆಳೆಸಲು ಸಾಧ್ಯವಾಗಿದೆ’ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ನಿತಿನ್ ಬಲ್ಲವರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ರೈತರಿಗೆ ರಿಯಾಯಿತಿ ದರದಲ್ಲಿ ಸಸಿ ವಿತರಣೆ

‘ಸಂಗೇನಹಳ್ಳಿ ಸಸ್ಯಪಾಲನಾ ಕ್ಷೇತ್ರದಲ್ಲಿ ವಿವಿಧ ಪ್ರಭೇದದ 46,957 ಸಸಿಗಳನ್ನು ಈ ಬಾರಿ ಬೆಳೆಸಲಾಗಿದ್ದು, ವಿತರಣೆಗೆ ಸಿದ್ಧವಾಗಿವೆ. ಮಹಾಗನಿ, ಬೇವು, ಹುಣಸೆ, ನೇರಳೆ ಮುಂತಾದ ಸಸಿಗಳನ್ನು ಗಾತ್ರದ ಆಧಾರದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ₹ 3 ಹಾಗೂ ₹ 6 ಮತ್ತು ₹ 40ರ ದರದಲ್ಲಿ ವಿತರಿಸಲಾಗುವುದು. ರಸ್ತೆ ಬದಿ ನೆಡುತೋಪು, ಶಾಲೆ ಕಾಲೇಜುಗಳು ಮತ್ತು ಸಂಘ ಸಂಸ್ಥೆಗಳಲ್ಲಿ ನೆಡುತೋಪು ನಿರ್ಮಿಸಲಾಗುವುದು. ಆಸಕ್ತ ರೈತರು ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಭಾವಚಿತ್ರಗಳೊಂದಿಗೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎ. ಮಹೇಶ್ವರಪ್ಪ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.