ಜಗಳೂರು: ತಾಲ್ಲೂಕಿನಲ್ಲಿ ಕೆಂಡದಂತಹ ಬಿಸಿಗಾಳಿಗೆ ಜನಜೀವನ ಅಸ್ತವ್ಯಸ್ತವಾಗಿದೆ. ಅಂತರ್ಜಲ ವ್ಯಾಪಕವಾಗಿ ಕುಸಿಯುತ್ತಿದ್ದು, ಅಡಿಕೆ ಬೆಳೆಗಾರರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಸಾಲುಸಾಲು ಕೊಳವೆಬಾವಿಗಳನ್ನು ಕೊರೆಸುತ್ತಿದ್ದರೆ, ಮತ್ತೊಂದೆಡೆ ಜನ ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ.

ಕೆಲ ವಾರಗಳಿಂದ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿದ್ದು, ಬಿಸಿ ಗಾಳಿ ಬೀಸುತ್ತಿದೆ. ಅಡಿಕೆ, ಪಪ್ಪಾಯ, ಬಾಳೆ ತೋಟಗಳಿಗೆ ಒಂದೆರೆಡು ದಿನ ನೀರು ಹಾಯಿಸದೇ ಇದ್ದರೆ ಗಿಡಗಳು ಬಾಡುತ್ತಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ಕಸಬಾ ಹೋಬಳಿಯ ಬಿಸ್ತುವಳ್ಳಿ, ಕಸ್ತೂರಿಪುರ, ಬುಳ್ಳನಹಳ್ಳಿ, ಬಗ್ಗೇನಹಳ್ಳಿ ಹಾಗೂ ಬಿಳಿಚೋಡು, ಪಾಲನಾಯಕನ ಕೋಟೆ ವ್ಯಾಪ್ತಿಯಲ್ಲಿ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ದಿನೇದಿನೇ ಕಡಿಮೆಯಾಗುತ್ತಿದೆ.

ಎರಡು ವರ್ಷದ ಹಿಂದೆ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ಜೊತೆಗೆ ಏತ ನೀರಾವರಿ ಯೋಜನೆಯಿಂದಾಗಿ ಬಹುತೇಕ ಕೆರೆಗಳು ಕೋಡಿ ಬಿದ್ದು ಹರಿದಿದ್ದವು. ಎಲ್ಲೆಡೆ ಅಂತರ್ಜಲ ಹೆಚ್ಚಳವಾಗಿದ್ದರಿಂದ ರೈತರು ಪೈಪೋಟಿಯಲ್ಲಿ ಕೊಳವೆಬಾವಿ ಕೊರೆಸಿ, ಅಡಿಕೆ ಸಸಿಗಳನ್ನು ನೆಟ್ಟಿದ್ದರು.

ಕಳೆದ ಹಿಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ನದಿ ನೀರನ್ನು ಕೆರೆಗಳಿಗೆ ಹರಿಸಿ ತುಂಬಿಸಲಾಗಿತ್ತು. ಬಹುತೇಕ ಕೆರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹ ಇದ್ದರೂ ತಾಲ್ಲೂಕಿನ ಹಲವೆಡೆ ಅಂತರ್ಜಲ ಮಟ್ಟ ಆತಂಕಕಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕೊಳವೆಬಾವಿಗಳ ಸರಣಿ ವೈಫಲ್ಯದಿಂದ ಆತಂಕಕ್ಕೊಳಗಾಗಿ ರೈತರು ತೋಟಗಳನ್ನು ಉಳಿಸಿಕೊಳ್ಳಲು ಬಾಡಿಗೆ ಟ್ಯಾಂಕರ್ಗಳಲ್ಲಿ ನೀರು ಖರೀದಿಸಿ ತೋಟಕ್ಕೆ ಹಾಯಿಸುತ್ತಿರುವುದು ಕಂಡುಬರುತ್ತಿದೆ.

‘2 ವರ್ಷದ ಹಿಂದೆ ಸಾಲ ಮಾಡಿ ಕೊಳವೆಬಾವಿ ಕೊರೆಸಿ 3 ಎಕರೆಯಲ್ಲಿ ಅಡಿಕೆ ಹಾಕಿದ್ದೇನೆ. ಬೆಳೆ ಚೆನ್ನಾಗಿದೆ. ಆದರೆ, ಕೆಲವು ವಾರಗಳಿಂದ ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿದೆ. ಯಾವುದೇ ಕ್ಷಣದಲ್ಲಿ ಕೊಳವೆಬಾವಿಯ ನೀರು ನಿಂತು ಹೋಗಬಹುದು ಎನ್ನುವ ಭಯ ಕಾಡುತ್ತಿದೆ’ ಎಂದು ಬಿದರಕೆರೆ ಗ್ರಾಮದ ಹಿರಿಯ ರೈತ ತಿಪ್ಪೇಸ್ವಾಮಿ ‘ಪ್ರಜಾವಾಣಿ’ ಎದುರು ಆತಂಕ ವ್ಯಕ್ತಪಡಿಸಿದರು.

ಇದು ಕೇವಲ ಒಬ್ಬ ರೈತನ ಸಮಸ್ಯೆ ಅಲ್ಲ. ಬುಳ್ಳನಹಳ್ಳಿಯ ಭರಮೇಶ್ ಅವರು ತಮ್ಮ ಎಲ್ಲಾ ಕೊಳವೆಬಾವಿಗಳು ಬತ್ತಿದ ಕಾರಣ ಹೊಸದಾಗಿ 800 ಅಡಿ ಕೊರೆಸಿದ್ದು, ಹನಿ ನೀರೂ ಬಂದಿಲ್ಲ. ಇದೇ ಗ್ರಾಮದ ಮಂಜುನಾಥ್ ಎಂಬುವವರು 1,000 ಅಡಿ ಆಳದವರೆಗೆ ಎರಡು ಕೊಳವೆಬಾವಿ ಕೊರೆಸಿದ್ದು, ಕೇವಲ ಒಂದು ಇಂಚು ನೀರು ಸಿಕ್ಕಿದೆ. ಬಿಸ್ತುವಳ್ಳಿ ಗ್ರಾಮದ ಅಂಜಿನಪ್ಪ ಅವರು ₹ 1 ಲಕ್ಷ ವ್ಯಯಿಸಿ 1,000 ಅಡಿ ಕೊರೆಸಿದರೂ ಹನಿ ನೀರು ಸಿಕ್ಕಿಲ್ಲ.

ಮಳೆ ನಿಗದಿತ ಅವಧಿಯಲ್ಲಿ ಸುರಿಯದಿದ್ದರೆ ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆ ಇದ್ದು, ಅಡಿಕೆ ಬೆಳೆಗಾರರಲ್ಲಿ ಅತಂಕ ಹೆಚ್ಚಿಸಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-43-367268159

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.