ಜಗಳೂರು: ತಾಲ್ಲೂಕಿನ ಸಂತೆಮುದ್ದಾಪುರ ಗ್ರಾಮದ ಬೇಡಿ ಆಂಜನೇಯ ದೇವಸ್ಥಾನದ ಹನುಮ ಮಾಲಾಧಾರಿಗಳಿಂದ ಪಟ್ಟಣದಲ್ಲಿ ಶುಕ್ರವಾರ ಬೃಹತ್ ಶೋಭಾಯಾತ್ರೆ ನಡೆಯಿತು.

ಅಂಬೇಡ್ಕರ್ ವೃತ್ತ, ದಾವಣಗೆರೆ ರಸ್ತೆ, ಮಹಾತ್ಮಗಾಂಧಿ ವೃತ್ತದ ಮೂಲಕ ದೊಡ್ಡ ಮಾರಮ್ಮ ದೇವಸ್ಥಾನದವರೆಗೆ ಹನುಮಮಾಲಾಧಾರಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಸಂತೆ ಮುದ್ದಾಪುರ ಬಳಿ ಬೇಡಿ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಶನಿವಾರ ನಡೆಯಲಿರುವ ಹನುಮಮಾಲೆಯ ವಿಸರ್ಜನೆ ಹಾಗೂ ಸಮಾರೋಪ ಸಮಾರಂಭದ ಅಂಗವಾಗಿ ಪೂರ್ವಭಾವಿಯಾಗಿ ಬೃಹತ್ ಸಂಕೀರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಹನುಮ ಮಾಲಾಧಾರಿಗಳು ಕೇಸರಿ ಶಾಲು, ಕೇಸರಿ ಪಂಚೆ, ಸಮವಸ್ತ್ರ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮಾಲಾಧಾರಿಗಳು, ಯುವಜನತೆ ‘ಜೈಹನುಮಾನ್’, ‘ಜೈಶ್ರೀರಾಮ್’ ಉದ್ಘೋಷಗಳು ಮೊಳಗಿದವು.

ಸಂತೆಮುದ್ದಾಪುರ ಗ್ರಾಮದ ಹೊರಹೊಲಯದಲ್ಲಿರುವ ಐತಿಹಾಸಿಕ ಬೇಡಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಘದ ಪ್ರಮುಖರು,ತಾಲ್ಲೂಕಿನ ಗಣ್ಯರು ಭಾಗವಹಿಸಲಿದ್ದಾರೆ. ಈ ಬಾರಿ ಆಂಜನೇಯ ಸ್ವಾಮಿ ಭಕ್ತಸಮೂಹ ಅತ್ಯಧಿಕ ಸಂಖ್ಯೆಯಲ್ಲಿ ಹನುಮಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್, ತಿಳಿಸಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ನಂದಿ ಬಸವರಾಜ್, ಕಾರ್ಯದರ್ಶಿ ಬಿದರಕೆರೆ ಪ್ರಕಾಶ್, ಬಿಜೆಪಿ ಮಂಡಲ ಅಧ್ಯಕ್ಷ ಎ.ಎಂ. ಮರುಳಾರಾಧ್ಯ, ಸ್ವಾಗತ ಸಮಿತಿ ಅಧ್ಯಕ್ಷ ಡಿ.ವಿ. ನಾಗಪ್ಪ, ಬಿಸ್ತುವಳ್ಳಿ ಬಾಬು, ಕೊರಟಿಕೆರೆ ಧನಂಜಯ್, ಪ್ರಕಾಶ್, ಕೃಷ್ಣಮೂರ್ತಿ, ಜೆ.ವಿ. ನಾಗರಾಜ್, ಶಿವಕುಮಾರ್ ಸ್ವಾಮಿ, ಹಳವದಂಡೆ ಕರಿಬಸಯ್ಯ, ಪೂಜಾರ ಸಿದ್ದಪ್ಪ, ಲ್ಯಾಬ್ ಶಿವು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-43-2138495446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.