ಜಗಳೂರು: ‘ಯುವ ಪೀಳಿಗೆ ದುಶ್ಚಟಗಳಿಂದ ದೂರಾಗಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಂತೆಮುದ್ದಾಪುರ ಗ್ರಾಮದ ಬೇಡಿ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಹನುಮ ಸೇವಾ ಸಮಿತಿ ಹಮ್ಮಿಕೊಂಡಿದ್ದ 4ನೇ ವರ್ಷದ ಹನುಮ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

‘ಭಗವಂತನನ್ನು ಭಕ್ತ ಪ್ರೀತಿಯಿಂದ ಪೂಜಿಸಿದರೆ ದೇವರು ಸರಳವಾಗಿ ಒಲಿಯುತ್ತಾನೆ. ಯಾರದ್ದೋ ಒತ್ತಾಯಕ್ಕೆ ಮಾಲೆ ಹಾಕಿದರೆ ದೇವರು ಒಲಿಯುವುದಿಲ್ಲ’ ಎಂದರು.

‘ದೇವರ ವಿಷಯ ಬಂದಾಗ ನಾವೆಲ್ಲ ಒಂದು. ನಾವೆಲ್ಲ ಬಂಧು ಎನ್ನುವ ಸಾಮರಸ್ಯದಿಂದ ಬಾಳಬೇಕು. ನೂತನ ದೇವಾಲಯ ನಿರ್ಮಾಣ ಭಕ್ತರಿಂದಲೇ ಆದರೆ ಸಾರ್ಥಕ’ ಎಂದು ದೇವಾಲಯ ಸಂವರ್ದನಾ ಸಮಿತಿ ರಾಜ್ಯ ಘಟಕದ ಸಂಯೋಜಕ ಮನೋಹರ್ ಮಠದ್ ಹೇಳಿದರು.

‘ಉತ್ತರ ಪ್ರದೇಶದಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾದಂತೆ ಭಕ್ತರ ದೇಣಿಗೆಯಿಂದಲೇ ಇಲ್ಲಿನ ಬೇಡಿ ಆಂಜನೇಯ ದೇವಾಲಯ ನಿರ್ಮಾಣವಾಗಬೇಕಿದ್ದು, ಭಕ್ತರ ತನು, ಮನ, ಧನದ ನೆರವು ಅಗತ್ಯವಿದೆ’ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಕೆ. ಬಸವರಾಜ್ ಮನವಿ ಮಾಡಿದರು. ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡಿದ ಭಕ್ತರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಎಚ್.ಪಿ. ರಾಜೇಶ್, ಎಸ್.ವಿ. ರಾಮಚಂದ್ರ, ಶ್ರೀಕಾಂತ್ ಶೆಟ್ಟಿ ಕಾರ್ಕಳ, ಸ್ವಾಗತ ಸಮಿತಿ ಅಧ್ಯಕ್ಷ ಡಿ.ವಿ. ನಾಗಪ್ಪ, ಕಾರ್ಯದರ್ಶಿ ಇ.ಎನ್. ಪ್ರಕಾಶ್, ಶಿವಾನಂದಪ್ಪ, ಕರಿಬಸಯ್ಯ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-43-1648608809

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.